
ಬೆಂಗಳೂರು: ಓದುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಚಾಲಕರನ್ನು ನಟ ದರ್ಶನ್ ಭೇಟಿಯಾಗಿದ್ದಾರೆ. ನಿಜ ಜೀವನದ ಸಾರಥಿಯ ಭೇಟಿ ಮಾಡಿ ಜನ್ಮದಿನದ ಶುಭಾಶಯಗಳನ್ನು ಕೋರಿ ಬೆಳ್ಳಿ ತೆರೆಯ ಸಾರಥಿ ಸಂಭ್ರಮಿಸಿದ್ದಾರೆ.

ನಟ ದರ್ಶನ್ ಓದುತ್ತಿದ್ದ ವೇಳೆ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ 80ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮದಲ್ಲಿದ್ದರು. ಈ ಸಂಭ್ರಮವನ್ನು ದುಪ್ಪಟ್ಟು ಮಾಡಿದ್ದು ನಟ ದರ್ಶನ್.
ಅವರ ಜನ್ಮದಿನದಂದು ‘ರಿಯಲ್ ಸಾರಥಿ’ಯನ್ನು ಭೇಟಿ ಮಾಡಿ, ಅವರಿಗೆ ಶುಭಾಶಯ ಕೋರಿ, ಅವರ ಆಶೀರ್ವಾದವನ್ನು ಪಡೆದಿದ್ದಾರೆ ನಟ ದರ್ಶನ್. ಈ ಬಗ್ಗೆ ದರ್ಶನ್ ಟ್ವೀಟ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಬಾಕ್ಸ್‌ಆಫೀಸ್ ಸುಲ್ತಾನ್ ಅಗಿ. ದೊಡ್ಡ ಸ್ಟಾರ್ ಆಗಿದ್ದರೂ ನಟ ದರ್ಶನ್ ತಮ್ಮ ಕಷ್ಟದ ದಿನಗಳನ್ನು ಮರೆತಿಲ್ಲ. ತಮ್ಮ ಜೀವನದ ಪ್ರತಿ ಹಂತದಲ್ಲೂ ತಮ್ಮ ಜೊತೆಗಿದ್ದವರನ್ನು ದರ್ಶನ್ ಆತ್ಮೀಯವಾಗಿ ನೋಡುತ್ತಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

