
ದೊಡ್ಡಬಳ್ಳಾಪುರ: ದಿವಂಗತ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಬಾಷೆಗೆ ಸಲ್ಲಿಸಿದ ಸಾಹಿತ್ಯ ಸೇವೆ ಅಪಾರವಾಗಿದೆ ಎಂದು ತಹಶಿಲ್ದಾರ್ ಟಿ.ಎಸ್.ಶಿವರಾಜ್ ಸ್ಮರಿಸಿದರು.

ನಗರದ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿಯಲ್ಲಿ ಇತ್ತೀಚೆಗೆ ನಿಧನರಾದ ಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರಿಗೆ ನುಡಿ ನಮನ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಭಾಷೆಯ ಶಾಸ್ತ್ರೀಯ ಅಧ್ಯಯನ ಹಾಗು ಪಾಶ್ಚಾತ್ಯ ಸಾಹಿತ್ಯದ ಕನ್ನಡಾನುವಾದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು. ಕನ್ನಡದ ಸಾನೆಟ್ ಕವಿ ಎಂದೇ ಪ್ರಖ್ಯಾತ ರಾಗಿದ್ದ ಅವರು ಭಾವಗೀತೆಗಳ ಕ್ಯಾಸೆಟ್ ಯುಗಕ್ಕೆ ನಾಂದಿ ಹಾಡಿದವರು ಮತ್ತು ಮಕ್ಕಳಿಗಾಗಿ ವಿಶೇಷ ಕವನಗಳನ್ನು ರಚಿಸಿದವರು ಎಂದರು.
ಈ ವೇಳೆ ಕಸಾಪ ತಾಲೂಕು ಅಧ್ಯಕ್ಷೆ ಪ್ರಮೀಳಮಹಾದೇವ್, ಗೌರವ ಕಾರ್ಯದರ್ಶಿ ಡಿ.ಈ.ಶಿವಕುಮಾರ್, ಸಹಕಾರ್ಯದರ್ಶಿಗಳಾದ ಗಂಗರಾಜ ಶಿರವಾರ, ಪ್ರವೀಣ್ ಕುಮಾರ್, ನಗರ ಉಪಾಧ್ಯಕ್ಷ ಸೂರಿ, ಕವಿಗಳಾದ ನಂ.ಮಹಾದೇವ್, ಎನ್.ವೆಂಕಟೇಶ್, ಪತ್ರಕರ್ತ ಕೊತ್ತೂರಪ್ಪ, ಭಜನೆ ಕೃಷ್ಣಮೂರ್ತಿ, ಗಿರೀಶ್ ಹಾಗೂ ನಗರಸಭೆಯ ಅಧಿಕಾರಿ ಶ್ರೀನಿವಾಸ್ (ವಿಕ್ಕಿ ಸೀನ) ಮತ್ತಿತರರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

