
ನವದೆಹಲಿ: ಎರಡನೇ ಹಂತದ ಕೋವಿಡ್-19 ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲುಮುಂಬರುವ ಹಬ್ಬಗಳಲ್ಲಿ ಹೆಚ್ಚು ಜನ ಸೇರದಂತೆ ಕ್ರಮಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿ ಕೇಂದ್ರ ಆರೋಗ್ಯ ಇಲಾಖೆ ಪತ್ರ ಬರೆದಿದೆ.

ಹೆಚ್ಚುವರಿ ಕಾರ್ಯದರ್ಶಿ ರಾಜ್ಯಗಳು ಮತ್ತು ಯುಟಿಗಳ ಮುಖ್ಯ ಕಾರ್ಯದರ್ಶಿಗಳು / ನಿರ್ವಾಹಕರಿಗೆ ಬರೆದಿರುವ ಪತ್ರದಲ್ಲಿ “ಹೋಳಿ, ಶಾಬ್-ಎ-ಬರಾತ್, ಬಿಹು, ಈಸ್ಟರ್ ಮತ್ತು ಈದ್-ಉಲ್-ಫಿತರ್ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಸೇರುವುದನ್ನು ತಡೆಗಟ್ಟಲು ಸ್ಥಳೀಯವಾಗಿ ಪರಿಶೀಲಿಸಿ ನಿರ್ಬಂಧಗಳನ್ನು ಹೇರುವುದನ್ನು ಪರಿಗಣಿಸಬಹುದು ಮತ್ತು ಸಾಮೂಹಿಕ ಸಭೆಗಳನ್ನು ಮಿತಿಗೊಳಿಸಬಹುದೆಂದು ಸೂಚಿಸಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

