ದೊಡ್ಡಬಳ್ಳಾಪುರ: ಲಾಕ್‌ಡೌನ್ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೋಬಳಿಯಲ್ಲಿರುವ ರೈತರ ಸಂಪರ್ಕ ಕೇಂದ್ರಗಳು ಬೆಳಿಗ್ಗೆ 06 ರಿಂದ 10 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ ಎಂದು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ತಿಳಿಸಿದ್ದಾರೆ.
ರೈತರು ಕಛೇರಿ ಪರಿಕರ ಖರೀದಿ ಮತ್ತು ಸೌಲಭ್ಯವನ್ನು ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಪಡೆಬಹುದಾಗಿದ್ದು, ನಂತರ ಕಂಚೇರಿಯನ್ನು ಮುಚ್ಚಲಾಗುವುದು. ಈ ವೇಳಾಪಟ್ಟಿ ಲಾಕ್‌ಡೌನ್ ಮುಗಿಯುವ ವರೆಗೆ ಮಾತ್ರ ಇರುತ್ತದೆ ಎಂದು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಮೆ ಇಪ್ಕೋ, ಮೆ ಐ.ಪಿ.ಎಲ್, ಮೆ ಎಮ.ಸಿ.ಎಫ್, ಮೆ ಫ್ಯಾಕ್ಟ್ ಸಂಸ್ಥೆಗಳು ರಸಗೊಬ್ಬರದ ದರಗಳನ್ನು ಏಪ್ರಿಲ್ ನಂತರದಲ್ಲಿ ಪರಿಷ್ಕರಿಸಿದ್ದು, ಸದರಿ ದರಗಳು ಹಿಂದಿನ ದರಕ್ಕಿಂತ ಹೆಚ್ಚಾಗಿದೆ. ಆದರೆ ಮಾರಾಟಗಾರರು ಹಳೆಯ ದಾಸ್ತಾನನ್ನು ಪರಿಷ್ಕತವಲ್ಲದ ಚೀಲದ ಮೇಲಿನ ಗರಿಷ್ಟ ದರದಲ್ಲಿಯೇ ಪಾಯಿಂಟ್ ಅಫ್ ಸೇಲ್ ಉಪಕರಣದಲ್ಲಿ ಮಾರಾಟ ಮಾಡಬೇಕು. ರೈತರು ರಸಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ಆಧಾರ್ ಕಾರ್ಡ್‌ನೊಂದಿಗೆ ತೆರಳಿ ಚೀಲದ ಮೇಲಿನ ಗರಿಷ್ಟ ದರದಲ್ಲಿ ಖರೀದಿಸಬೇಕು. ಒಂದು ವೇಳೆ ಯಾವುದೇ ರಸಗೊಬ್ಬರ ಮಾರಾಟಗಾರರು ಗರಿಷ್ಟ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಯಕ ಕೃಷಿ ನಿರ್ದೇಶಕರ ಕಛೇರಿ ಅಧಿಕಾರಿಗಳಿಗೆ ರೈತರು ದೂರು ನೀಡಬಹುದು. ಅಂತಹವರ ವಿರುದ್ದ ರಸಗೊಬ್ಬರ ನಿಯಂತ್ರಣ ಆದೇಶ (195) ದಡಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ತಿಳಿಸಿದ್ದಾರೆ.
ಕೃಷಿ ಒಳ ಹರಿವು ಮತ್ತು ಕೃಷಿ ಪರಿಕರಗಳ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗೆ ಅಗ್ರಿವಾರ್ ರೂಂ ಪ್ರಾರಂಬಿಸಿದ್ದು, ರೈತರು 8277929924/636175618 ದೂರವಾಣಿ ಸಂಖ್ಯೆಗೆ ಕರೆ ಮಾಡಲು ಜಂಟಿ ಕೃಷಿ ನಿರ್ದೇಶಕರು ರೈತರಿಗೆ ಮನವಿ ಮಾಡಿದ್ದಾರೆ. (ಸಂಗ್ರಹ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..