Hasanabha: ಹಾಸನಾಂಬ ಆದಾಯ ಎರಡು ಪಟ್ಟು ಹೆಚ್ಚಳ‌‌.. ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು ಗೊತ್ತಾ..?

Devotees flock to Hasanamba darshan; Bus services stopped

ಹಾಸನ; ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆಯ (Hasanabha) ಸಾರ್ವಜನಿಕ ದರ್ಶನಕ್ಕೆ ವಿಧ್ಯುಕ್ತ ತೆರೆ ಬಿದ್ದಿದೆ. ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ತೆರೆದು 14 ದಿನ ದರ್ಶನ ನೀಡಿದ್ದು, ಗುರುವಾರ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ದೇಗುಲದ ದ್ವಾರ ಮುಚ್ಚಲಾಗಿದೆ.

ಶ್ರೀ ಹಾಸನಾಂಬ ದೇವಿ ಜಾತ್ರಾ ಮಹೋತ್ಸವವು ಅ.09 ರಿಂದ ಅ.23 ರವರೆಗೆ ನಡೆದಿದ್ದು 25,59,87,327 ಕೋಟಿ ರೂ ಆದಾಯ ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಾರುತಿ ತಿಳಿಸಿದ್ದಾರೆ.

1000 ರೂ., 300 ರೂ‌. ಟಿಕೆಟ್ ಹಾಗೂ ಲಾಡುಪ್ರಸಾದ ಮಾರಾಟದಿಂದ ಒಟ್ಟು 21,91,75,052 ರೂ. ಆದಾಯ ಬಂದಿರುತ್ತದೆ. ಅಲ್ಲದೆ ಹುಂಡಿ ಎಣಿಕೆಯಲ್ಲಿ 3,68,12,275 ರೂ. ಬಂದಿರುತ್ತದೆ. ಕಾಣಿಕೆ ರೂಪದಲ್ಲಿ 75 ಗ್ರಾಂ. 300 ಮಿಲಿ ಚಿನ್ನ, ಬೆಳ್ಳಿ 1 ಕೆ.ಜಿ 58 ಗ್ರಾಂ. 400 ಮಿಲಿ ಹುಂಡಿಗೆ ಭಕ್ತರು ಹಾಕಿದ್ದಾರೆ ಎಂದು ತಿಳಿಸಿದರು.

ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹುಂಡಿ ಎಣಿಕೆ ನಡೆದಿದ್ದು, 15,17,785 ರೂ ಆದಾಯ ಸಂಗ್ರಹವಾಗಿದೆ.

ಕಳೆದ ವರ್ಷ ದೇವಾಲಯಕ್ಕೆ 12 ಕೋಟಿ 40 ಲಕ್ಷ ಆದಾಯ ಬಂದಿದ್ದು, ಈ ವರ್ಷ ಸಚಿವ ಕೃಷ್ಣ ಬೈರೇಗೌಡರ ಶಿಸ್ತು ಬದ್ಧ ಕಾಳಜಿಯಿಂದ ಆದಾಯ ಎರಡು ಪಟ್ಟು ಹೆಚ್ಚಳವಾಗಿದೆ ಎಂದು ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಾರುತಿ ಅವರು ತಿಳಿಸಿದ್ದಾರೆ.

ದಾಖಲೆ ಸೃಷ್ಟಿ

ಹಲವು ವಿಶೇಷತೆಗಳಿಂದ ಕೂಡಿದ್ದ ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವ ನಿರೀಕ್ಷೆಯಂತೆಯೇ ಐತಿಹಾಸಿಕ ದಾಖಲೆ ಸಹ ಬರೆದಿದೆ. ಕಳೆದ ವರ್ಷ 17,42,240 ಮಂದಿ ಭಕ್ತರು ದೇವಿ ದರ್ಶನ ಪಡೆದಿದ್ದರು. ಒಟ್ಟಾರೆ ಕಾಣಿಕೆ ರೂಪದ ಆದಾಯ 12,63,83,808 ರೂ. ಸಂಗ್ರಹ ವಾಗಿತ್ತು.

ಇದು ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ವರೆಗಿನ ಹೊಸ ದಾಖಲೆ ಆಗಿತ್ತು. ಆದರೆ 2025ರಲ್ಲಿ ಅಳಿಸಲು ಕಷ್ಟ ಎನ್ನುವಂತಹ ವಿನೂತನ ದಾಖಲೆ ಸೃಷ್ಟಿಯಾಗಿದೆ.

ಆ.09 ರಿಂದ 23ರವರೆಗೆ 26,06,691 ಭಕ್ತರು ದೇವಿಯ ದರ್ಶನ ಪಡೆದಿದ್ದು, ಒಂದು ದಾಖಲೆಯಾದರೆ, ಒಟ್ಟಾರೆ ಆದಾಯ 25,59,87,327 ಕೋಟಿ ತಲುಪಿರುವುದು ಹೊಚ್ಚ ಹೊಸ ದಾಖಲೆಯಾಗಿದೆ.

ಈ ಬಾರಿ ಅಚ್ಚುಕಟ್ಟು, ಶಿಸ್ತುಬದ್ಧ ಉತ್ಸವ ನಡೆದಿದ್ದು ಒಂದು ಸಂತೋಷವಾದರೆ, ಆದಾಯ ಗಣನೀಯವಾಗಿ ಏರಿಕೆಯಾಗಿರುವುದು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರ ಕಾಳಜಿಗೆ ಹಿಡಿದ ಕೈಕನ್ನಡಿಯಾಗಿದೆ.

ರಾಜಕೀಯ

ರಾಜ್ಯದ 1,082 ನಗರಾಭಿವೃದ್ಧಿ ಯೋಜನೆಗಳ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

ರಾಜ್ಯದ 1,082 ನಗರಾಭಿವೃದ್ಧಿ ಯೋಜನೆಗಳ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

ನಮ್ಮ ರಾಜ್ಯದ ಎಲ್ಲಾ ನಗರಗಳಿಗೂ ಸೇರಿ ₹5 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದಾರೆ. ಇದಕ್ಕೆ ಕೆಲವು ಮಾನದಂಡ ನಿಗದಿ ಮಾಡಿದ್ದು, ನಮ್ಮ ರಾಜ್ಯದಿಂದ 1,082 ಯೋಜನೆಗಳ ಪ್ರಸ್ತಾವನೆ ಅವರ ಮುಂದೆ ಇರಿಸಿದ್ದೇವೆ: ಡಿ.ಕೆ. ಶಿವಕುಮಾರ್

[ccc_my_favorite_select_button post_id="121389"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ DJ ಕೇಸ್ಗೆ ಹೈ ಕೋರ್ಟ್ ತಡೆಯಾಜ್ಞೆ

ದೊಡ್ಡಬಳ್ಳಾಪುರ DJ ಕೇಸ್ಗೆ ಹೈ ಕೋರ್ಟ್ ತಡೆಯಾಜ್ಞೆ

ವಿಶ್ವ ಹಿಂದೂಪರಿಷತ್ ಮತ್ತು ಬಜರಂಗದಳದಿಂದ ನಗರದಲ್ಲಿ ನಡೆದ ಶೋಭಾಯಾತ್ರೆಯಲ್ಲಿ (Sobhayatre) ಅನುಮತಿ ಇಲ್ಲದೆ ಡಿಜೆ (DJ) ಬಳಸಿದ ಕುರಿತು ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ ಎಂದು ತಿಳಿದು ಬಂದಿದೆ.

[ccc_my_favorite_select_button post_id="121351"]
ದೊಡ್ಡಬಳ್ಳಾಪುರ: ಕ್ಯಾಂಟರ್ಗೆ ಟೆಂಪೋ ಡಿಕ್ಕಿ.. ಚಾಲಕ ದುರ್ಮರಣ

ದೊಡ್ಡಬಳ್ಳಾಪುರ: ಕ್ಯಾಂಟರ್ಗೆ ಟೆಂಪೋ ಡಿಕ್ಕಿ.. ಚಾಲಕ ದುರ್ಮರಣ

ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ (Tempo) ಡಿವೈಡರ್ ಮೇಲೆ ಸಾಗಿ, ಮತ್ತೊಂದು ರಸ್ತೆಯಲ್ಲಿ ಎದುರು ಬರುತ್ತಿದ್ದ ಟ್ಯಾಂಕರ್ಗೆ (Canter) ಡಿಕ್ಕಿ ಹೊಡೆದ ಪರಿಣಾಮ (Accident), ಟೆಂಪೋ ಚಾಲಕ ಸಾವನಪ್ಪಿರುವ ಘಟನೆ ತಾಲೂಕಿ ಕೂಗೇನಹಳ್ಳಿ ಕಾಲೋನಿ

[ccc_my_favorite_select_button post_id="121396"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]