ಬಿಜೆಪಿ ಸೇರಿದ ರಾಘವ್ ಚಡ್ಡಾಗೆ Gen Z ಶಾಕ್.. ವ್ಯಂಗ್ಯವಾಡಿದ ಪ್ರಕಾಶ್ ರಾಜ್ ಟ್ವೀಟ್ ಇಲ್ಲಿದೆ ನೋಡಿ

Gen Z icon Raghav Chadha in shock after joining BJP

ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಜೆನ್-ಝಿ (Gen Z) ಐಕಾನ್ ಎಂದೇ ಬಿಂಬಿತವಾಗುತ್ತಿದ್ದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ (Raghav Chadha) ಅವರಿಗೆ, ಬಿಜೆಪಿ ಸೇರಿದ ಬಳಿಕ ಏಕೋ ಗ್ರಹಗತಿ ಕೆಟ್ಟಿದಂತಿದೆ. ಇದು ವಾಸ್ತವ ಸಂಗತಿಯಾದ್ರೂ, ಕೆಲವರಿಗೆ ಈ ವರದಿ ಆಕ್ರೋಶಕ್ಕೆ ಕಾರಣವಾಗುತ್ತದೆ, ಇರಲಿ ದಿನಾ ಇದ್ದದ್ದೇ‌.

ಈಗ ವಿಷಯಕ್ಕೆ ಬರೋಣ, ಎಪಿಪಿ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಸುಮಾರು 10 ಲಕ್ಷ ಜನರು ಅನ್‌ಫಾಲೊ ಮಾಡಿದ್ದಾರೆ.

ನಿನ್ನೆಯಷ್ಟೇ (ಶುಕ್ರವಾರ) ಎಎಪಿಯ 6 ರಾಜ್ಯಸಭಾ ಸಂಸದರ ಜೊತೆ ರಾಘವ್‌ ಚಡ್ಡಾ ಬಿಜೆಪಿಗೆ ಸೇರಿದ್ದರು. ಆದರೆ, ಚಡ್ಡಾ ಅವರ ಈ ನಿರ್ಧಾರ ಜೆನ್-ಝಿಗಳಿಗೆ ಮೆಚ್ಚುಗೆಯಾದಂತೆ ಕಾಣುತ್ತಿಲ್ಲ ಎಂಬ ಮಾತು ವ್ಯಾಪಕವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮಾಹಿತಿ ಹಾಗೂ ರಾಜ್ಯ, ರಾಷ್ಟ್ರೀಯ ಮಟ್ಟದ ಮಾಧ್ಯಮ ವರದಿಗಳ ಅಂಕಿಅಂಶಗಳ ಪ್ರಕಾರ (ಗೋದಿ ಮೀಡಿಯಾ ಹೊರತು ಪಡಿಸಿ), ಚಡ್ಡಾ ಅವರು ಬಿಜೆಪಿಗೆ ಸೇರಿದ ಕೇವಲ 24 ಗಂಟೆಗಳ ಒಳಗಾಗಿ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಾರು ಹತ್ತು ಲಕ್ಷ ಫಾಲೊವರ್ಸ್‌ಗಳನ್ನು ಕಳೆದುಕೊಂಡಿದ್ದಾರೆ.

ವರದಿಯನ್ವಯ ಶುಕ್ರವಾರ 14.6 ಮಿಲಿಯನ್ ಇದ್ದ ಫಾಲೊವರ್ಸ್‌ಗಳ ಸಂಖ್ಯೆ, ಶನಿವಾರ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ 13.1 ಮಿಲಿಯನ್‌ಗೆ ಇಳಿದಿದೆ.

ಇದರಲ್ಲಿ ಪ್ರಮುಖವಾಗಿ ಯುವಜನತೆ (ಜೆನ್-ಝಿಗಳ) ಆಕ್ರೋಶ ಮುಖ್ಯ ಕಾರಣವಿರಬಹುದು ಎಂದು ಮಾಧ್ಯಮಗಳು, ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸರು ಸರಿಯಿಲ್ಲ ಅಂದರೆ ದಾವೂದ್ ಗ್ಯಾಂಗ್ ಸೇರ್ತೀರಾ..?

ಮತ್ತೊಂದೆಡೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ನಿಲುವುಗಳು, ಸುಳ್ಳು ಮಾತು, ಭರವಸೆಗಳನ್ನು ಆರಂಭದಿಂದಲೂ ವಿರೋಧಿಸುತ್ತಲೇ, ಬಿಜೆಪಿಯ ಬೆಂಬಲಿತ ಅನೇಕರ ದೃಷ್ಟಿಯಲ್ಲಿ (ಸಾಮಾಜಿಕ ಜಾಲತಾಣದಲ್ಲಿನ ಕಾಮೆಂಟ್ ಮೇರೆಗೆ) ಬಹುತೇಕ ದೇಶ ದ್ರೋಹಿ ಸಾಲಿನಲ್ಲಿ ನಿಂತಿರುವ ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರು ಚಡ್ಡಾ ಅವರ ಬಿಜೆಪಿ ಸೇರ್ಪಡೆ ಕುರಿತಂತೆ ಟ್ವೀಟ್ ಮಾಡಿದ್ದು, ವ್ಯಾಪಕ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ಹೌದು ಪ್ರಕಾಶ್ ರಾಜ್ ಅವರು ಬಿಜೆಪಿ, ಮತ್ತು ಪ್ರಧಾನಿ ಮೋದಿ ಅವರ ವಿರುದ್ಧ ಒಂದಿಲ್ಲೊಂದು ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿ, ಚರ್ಚೆಗೆ ಒಳಗಾಗುತ್ತಾರೆ. ಅಂತೆಯೇ ಇಂದು ಅವರು ಮಾಡಿರುವ ಟ್ವೀಟ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಧೂಳ್ ಎಬ್ಬಿಸಿದೆ.

ಇಷ್ಟಕ್ಕೂ ಪ್ರಕಾಶ್ ರಾಜ್ ಅವರು ಆಂಗ್ಲ ಭಾಷೆಯಲ್ಲಿ ವ್ಯಂಗ್ಯವಾಗಿ (“I am quitting the Police Force because they have moved away from their core values of fighting crime. So I am joining Dawood Ibrahim” – Raghav Chaddi) ಎಂದು ಬರೆದಿದ್ದಾರೆ.

ಇದರ ಕನ್ನಡ ಅನುವಾದ ನೋಡುವುದಾದರೆ “ಪೊಲೀಸ್ ಇಲಾಖೆಯಿಂದ ರಾಜೀನಾಮೆ ಕೊಡ್ತಿದೀನಿ, ಏಕಂದ್ರೆ ಅವರು ಕ್ರೈಮ್ ಹೋರಾಡೋ ಮೂಲ ಮೌಲ್ಯಗಳಿಂದ ದೂರ ಹೋಗಿದ್ದಾರೆ. ಆದ್ದರಿಂದ ನಾನು ದಾವೂದ್ ಇಬ್ರಾಹಿಂ ಜೊತೆ ಸೇರ್ತಿದೀನಿ” – ರಾಘವ್ ಚಡ್ಡಿ.

ಇದು ಯಾರಿಗೆ ಹೇಳಿದ್ದು ಎಂಬುದು ನಿಮಗೆ ಈಗಾಗಲೇ ಅರಿವಾಗಿದೆ. ಇನ್ನೂ ಪ್ರಕಾಶ್ ಅವರ ಈ ಸಂದೇಶದ ಗೂಡಾರ್ಥ ಏನು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿರುವುದ ನೋಡುವುದಾದರೆ, ರಾಘವ್ ಚಡ್ಡಾ AAP ಬಿಟ್ಟು ಬಿಜೆಪಿ ಸೇರಿದ್ದನ್ನು “ಅಪರಾಧದ ವಿರುದ್ಧ ಹೋರಾಡುವ ಸಂಸ್ಥೆಯನ್ನು ಬಿಟ್ಟು, ಅಪರಾಧಿ ಗ್ಯಾಂಗ್‌ಗೆ ಸೇರಿದಂತೆ” ಎಂದು ಹೋಲಿಸಿ, ಚಡ್ಡಾ ಅವರನ್ನು ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ.

ಏಕೆಂದರೆ ಈ ಮುಂಚೆ ಚಡ್ಡಾ ಅವರು, ಬಿಜೆಪಿ ಅನಕ್ಷರಸ್ಥ ಗೂಂಡಾಗಳ ಪಕ್ಷ ಎಂದು ಬಹಿರಂಗವಾಗಿ ಲೇವಡಿ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಇದೇ ವಿಚಾರವಾಗಿ ಖ್ಯಾತ ಪತ್ರಕರ್ತ ರಂಗನಾಥ್ (ರಂಗಣ್ಣ) ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದು, ಛೀ ಥೂ ಎಂದವರ ಟವಲ್ನಲ್ಲಿ ಒರೆಸಿಕೊಂಡು ಪಕ್ಷಕ್ಕೆ ಸೇರಿಸಿಕೊಂಡಿದ್ದೀರಾ..? ಎಂದು ಕುಟುಕಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಟ್ಟಾರೆ ಜೆನ್-ಝಿ (Gen Z) ಐಕಾನ್ ಎಂದೇ ಬಿಂಬಿತವಾಗುತ್ತಿದ್ದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ (Raghav Chadha) ಅವರಿಗೆ, ಬಿಜೆಪಿ ಸೇರಿದ ಬಳಿಕ ಏಕೋ ಗ್ರಹಗತಿ ಕೆಟ್ಟಂತಾಗಿರುವುದು ವಿಪರ್ಯಾಸ.

ರಾಜಕೀಯ

ಬಿಜೆಪಿ ಸೇರಿದ ರಾಘವ್ ಚಡ್ಡಾಗೆ Gen Z ಶಾಕ್.. ವ್ಯಂಗ್ಯವಾಡಿದ ಪ್ರಕಾಶ್ ರಾಜ್ ಟ್ವೀಟ್ ಇಲ್ಲಿದೆ ನೋಡಿ

ಬಿಜೆಪಿ ಸೇರಿದ ರಾಘವ್ ಚಡ್ಡಾಗೆ Gen Z ಶಾಕ್.. ವ್ಯಂಗ್ಯವಾಡಿದ ಪ್ರಕಾಶ್ ರಾಜ್

ಜೆನ್-ಝಿ (Gen Z) ಐಕಾನ್ ಎಂದೇ ಬಿಂಬಿತವಾಗುತ್ತಿದ್ದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ (Raghav Chadha) ಅವರಿಗೆ, ಬಿಜೆಪಿ ಸೇರಿದ ಬಳಿಕ ಏಕೋ ಗ್ರಹಗತಿ ಕೆಟ್ಟಿದಂತಿದೆ. ಇದು ವಾಸ್ತವ ಸಂಗತಿಯಾದ್ರೂ, ಕೆಲವರಿಗೆ ಈ ವರದಿ

[ccc_my_favorite_select_button post_id="121370"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ DJ ಕೇಸ್ಗೆ ಹೈ ಕೋರ್ಟ್ ತಡೆಯಾಜ್ಞೆ

ದೊಡ್ಡಬಳ್ಳಾಪುರ DJ ಕೇಸ್ಗೆ ಹೈ ಕೋರ್ಟ್ ತಡೆಯಾಜ್ಞೆ

ವಿಶ್ವ ಹಿಂದೂಪರಿಷತ್ ಮತ್ತು ಬಜರಂಗದಳದಿಂದ ನಗರದಲ್ಲಿ ನಡೆದ ಶೋಭಾಯಾತ್ರೆಯಲ್ಲಿ (Sobhayatre) ಅನುಮತಿ ಇಲ್ಲದೆ ಡಿಜೆ (DJ) ಬಳಸಿದ ಕುರಿತು ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ ಎಂದು ತಿಳಿದು ಬಂದಿದೆ.

[ccc_my_favorite_select_button post_id="121351"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]