ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 413 ಜನ ಗುಣಮುಖರಾಗಿದ್ದು, ಹೊಸದಾಗಿ 688 ಕರೊನಾ ಪ್ರಕರಣಗಳು ಹಾಗೂ 14 ಮೃತ ಪ್ರಕರಣಗಳು ಮಂಗಳವಾರ ವರದಿಯಾಗಿದೆ.
ಬುಲೆಟಿನ್ ವರದಿಯನ್ವಯ ದೊಡ್ಡಬಳ್ಳಾಪುರ ತಾಲೂಕಿನ 154 ಪುರುಷರು,102 ಮಹಿಳೆಯರು ಸೇರಿ 256 ಮಂದಿ. ಹೊಸಕೋಟೆ ತಾಲೂಕಿನ 119 ಪುರುಷರು, 76 ಮಹಿಳೆಯರು ಸೇರಿ 195. ದೇವನಹಳ್ಳಿ ತಾಲೂಕಿನ 92 ಪುರುಷರು, 57 ಮಹಿಳೆಯರು ಸೇರಿ 149 ಹಾಗೂ ನೆಲಮಂಗಲ ತಾಲೂಕಿನ 51 ಪುರುಷರು, 31 ಮಂದಿ ಮಹಿಳೆಯರು ಸೇರಿ 82 ಮತ್ತು ಅನ್ಯ ಜಿಲ್ಲೆಯವರು ಸೇರಿದಂತೆ ಬೆಂ.ಗ್ರಾ.ಜಿಲ್ಲೆಯಲ್ಲಿ 688 ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಮೃತರ ವರದಿ: ದೊಡ್ಡಬಳ್ಳಾಪುರ ತಾಲ್ಲೂಕಿನ 6, ದೇವನಹಳ್ಳಿ 3, ಹೊಸಕೋಟೆ 4 ಹಾಗೂ ನೆಲಮಂಗಲ ತಾಲೂಕಿನ ಓರ್ವ ಸೋಂಕಿತ ಸಾವನಪ್ಪಿದ್ದಾರೆ ಎನ್ನಲಾಗಿದೆ
ಪ್ರಸ್ತುತ ಜಿಲ್ಲೆಯಲ್ಲಿ 1154 ಮಂದಿ ಸೋಂಕಿತರನ್ನು ನಿಗಾ ಘಟಕದಲ್ಲಿಡಲಾಗಿದೆ ಎನ್ನಲಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 13378 ಕ್ಕೆ ಏರಿಕೆಯಾಗಿದ್ದರೆ, 16295 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ. ಹಾಗೂ 413 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಆರೋಗ್ಯ ಇಲಾಖೆಯಿಂದ ತಪಾಸಣೆ ತೀವ್ರವಾಗಿ ನಡೆಸಲಾಗುತ್ತಿದ್ದು, ಇಂದಿನ ವರದಿಯ ಪ್ರಕಾರ 4836 ಮಂದಿಯ ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….