ದೊಡ್ಡಬಳ್ಳಾಪುರ: ನವೋದಯ ಚಾರಿಟಬಲ್ ಟ್ರಸ್ಟ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸುರಾನ ಕಾಲೇಜಿನ ಮನೋವಿಜ್ಞಾನ ವಿಭಾಗ ಹಾಗೂ ಸ್ಟೂಡೆಂಟ್ ಕೌನ್ಸಿಲ್ ವಿಭಾಗ ಇವರ ಸಹಯೋಗದೊಂದಿಗೆ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಆನ್ಲೈನ್ ವೆಬಿನಾರ್ ಮೂಲಕ ಯುವಜನತೆಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಪ್ಪೇಸ್ವಾಮಿ, ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಶಾಂತಲ ಮತ್ತು ಸುರಾನಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಭವಾನಿ ಭಾಗವಹಿಸಿದ್ದರು.
ಬೆಂ.ಗ್ರಾ.ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಮಾಲೋಚಕಿ ವಿದ್ಯಾರಾಣಿ, ಜಿಲ್ಲಾ ಮನೋವೈದ್ಯ ಡಾ.ಗಿರೀಶ್ ಮತ್ತು CFTFK ಸಂಸ್ಥೆಯ ಸಂಸ್ಥಾಪನ ಕಾರ್ಯಾದರ್ಶಿ ಎಸ್.ಜೆ.ಚಂದರ್ ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಕುರಿತು ವಿವರಿಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಪ್ಪೇಸ್ವಾಮಿ ಮಾತನಾಡಿ, ತಂಬಾಕು ಸೇವನೆಯಂತಹ ಕೆಟ್ಟ ಚಟದಿಂದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗುವುದಲ್ಲದೆ ಅಕ್ಕ ಪಕ್ಕದವರಿಗೂ ತೊಂದರೆ ಉಂಟು ಮಾಡುತ್ತಾರೆ. ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆ ವತಿಯಿಂದ ತಂಬಾಕು ಸೇವನೆ ತಡೆಗಟ್ಟುವ ಕಾರ್ಯವನ್ನು ಕೈಗೊಂಡಿದ್ದೇವೆ, ತಂಬಾಕು ಮಾರಾಟ ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕಾರ್ಯಪಡೆ ರಚಿಸಲಾಗಿದ್ದು ಇನ್ನು ಹೆಚ್ಚಿನ ರೀತಿಯಲ್ಲಿ ತಡೆಗಟ್ಟಲು ಯುವ ಟಾಸ್ಕ್ ಫೋರ್ಸ್ ನಿರ್ಮಾಣ ಆಗಬೇಕಾಗಿದೆ ಎಂದು ತಿಳಿಸಿದರು.
ನವೋದಯ ಟ್ರಸ್ಟ್ ನ ಅಧ್ಯಕ್ಷ ನವೋದಯ ಚೇತನ್ ಮಾತನಾಡಿ, ಈ ತಂಬಾಕು ಎಂಬ ಮಹಾಮಾರಿಗೆ ಇತೀಚಿನ ದಿನಗಳಲ್ಲಿ ಯುವ ಜನತೆ ಬಲಿಯಾಗುತ್ತಿದ್ದಾರೆ. ಶೋಕಿಗಾಗಿ ಕಲಿತ ಹವ್ಯಾಸ ಮುಂದೆ ಚಟವಾಗಿ ಪರಿವರ್ತನೆ ಹೊಂದಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗುವುದಲ್ಲದೆ,ಮಾರಣಾತಿಕ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಆದ ಕಾರಣ ತಂಬಾಕು ನಿಯಂತ್ರಣ ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುರಾನ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಅರ್ಚನಾ.ಕೆ.ಭಟ್, ಸ್ಟೂಡೆಂಟ್ ಕೌನ್ಸಿಲ್ವಿ ಭಾಗದ ಮುಖ್ಯಸ್ಥ ಪ್ರೋ.ಚಂದನ ಜೈನ್, ನವೋದಯ ಟ್ರಸ್ಟ್ ನ ಪದಾಧಿಕಾರಿಗಳು, ಸುರಾನ ಕಾಲೇಜಿನ ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ಸ್ಟೂಡೆಂಟ್ ಕೌನ್ಸಿಲ್ ವಿದ್ಯಾರ್ಥಿಗಳು ಹಾಗೂ ನಗರದ ಯುವಕರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….