ಬೆಂ.ಗ್ರಾ.ಜಿಲ್ಲೆ: ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಹರು ಯುವ ಕೇಂದ್ರ ಮತ್ತು ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 21 ಜೂನ್ 2021 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಈ ವರ್ಷ ನಮ್ಮ ನಮ್ಮ ಮನೆಗಳಲ್ಲಿ ಯೋಗಾಭ್ಯಾಸ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದೆ.
ಇದಕ್ಕೆ ಸಹಕಾರ ನೀಡುವವರು ಜೂನ್ 21 ರಂದು ಬೆಳಗ್ಗೆ 6 ರಿಂದ 10 ತಮ್ಮ ಕುಟುಂಬ ಸದಸ್ಯರ ಸಮೇತರಾಗಿ ಮನೆಯಲ್ಲಿಯೇ ಯೋಗಾಭ್ಯಾಸ ಮಾಡಿ, ಅದರ ಒಂದು ಅಥವಾ ಎರಡು ಉತ್ತಮ ಭಾವಚಿತ್ರವನ್ನು ಇ- ಮೇಲ್ ವಿಳಾಸ: dyc.bangalore.rural@gmail.com ಗೆ ಕಳುಹಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಒಬ್ಬರ ಸಂಪೂರ್ಣ ಹೆಸರು, ಅವರ ವಾಟ್ಸಾಪ್ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಕಳುಹಿಸಿದರೆ ಅವರಿಗೆ ಕೇಂದ್ರ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಮಾಣ ಪತ್ರವನ್ನು ಪಿಡಿಎಫ್ ಮಾಡಿ ಕಳುಹಿಸಲಾಗುವುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಶ್ರೀವಾಣಿ ಕೋನರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..