ದೊಡ್ಡಬಳ್ಳಾಪುರ: ಯೋಗಾ ಆಚರಣಾ ಸಮಿತಿಯವತಿಯಿಂದ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ 7ನೇ ವರ್ಷದ ವಿಶ್ವ ಯೋಗಾ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ತಪಸೀಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ಪೀಠಾಧ್ಯಕ್ಷ ದಿವ್ಯ ಜ್ಞಾನಾನಂದ ಸ್ವಾಮಿ ನೆರವೇರಿಸಿದರು.
ಈ ವೇಳೆ ಸಮಿತಿಯ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಉಪಾಧ್ಯಕ್ಷ ತ.ನ.ಪ್ರಭುದೇವ, ಕಾರ್ಯದರ್ಶಿ ಬಿ.ಜಿ.ಅಮರ್ ನಾಥ್, ಖಜಾಂಚಿ ಪಿ.ಕೆ.ಶ್ರೀನಿವಾಸ್, ಸಹಕಾರ್ಯದರ್ಶಿ ವತ್ಸಲ ಜಗನಾಥ್, ಸದಸ್ಯರಾದ ಪಿ.ಗೋಪಾಲ್, ಗಿರೀಶ್, ಲೀಲಾಮಹೇಶ್, ಯಶೋಧ ರಘುನಾಥ್, ಸೀತಾರಾಂ, ವತ್ಸಲಾ ಸತ್ಯನಾರಾಯಣ್, ಕಮಲಾ ಶ್ರೀನಿವಾಸ್, ಗೀತಾ, ಆರೂಢಿ ರಮೇಶ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..