ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಡೋನಹಳ್ಳಿ ಗ್ರಾಮ ಪಂಚಾಯತ್ ಹಾಲು ಉತ್ಪಾದಕರ ಸಹಕಾರ ಸಂಘ, ಮಹಿಳಾ ದಕ್ಷತಾ ಸಮಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಎಸ್ಎಸ್ ಗಾಟಿ ಡಾಕ್ಟರ್ಸ್ ಫಾರ್ ಯೂ, ನವೋದಯ ಚಾರಿಟಬಲ್ ಟ್ರಸ್ಟ್, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ, ಹಾಗೂ ವಾತ್ಸಲ್ಯ ದಾಮ ಚಾರಿಟಬಲ್ ಟ್ರಸ್ಟ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಹಾಡೋನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು
ದೀಪ ಬೆಳಗುವ ಮೂಲಕ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಡಯಾಬಿಟಿಕ್ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮಕ್ಕೆ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಅಪ್ಪಯ್ಯಣ್ಣ ಚಾಲನೆ ನೀಡಿದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ವಿಶ್ವಜನಸಂಖ್ಯಾ ದಿನಾಚರಣೆ ಕುರಿತು ಜಾಗ್ರತೆ ಮೂಡಿಸಿದರು. ಡಯಾಬಿಟಿಸ್ ಆರೋಗ್ಯ ತಪಾಸಣೆ ಶಿಬಿರ ಸುಮಾರು ಹದಿನೈದು ವರ್ಷಗಳ ಕಾಲದಿಂದ ನಡೆದುಕೊಂಡು ಬರುತ್ತಿದೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಅಪ್ಪಯ್ಯಣ್ಣ ಮಾತನಾಡಿ, ವಿಶ್ವಜನಸಂಖ್ಯಾ ದಿನಾಚರಣೆ ನಮ್ಮ ಒಂದು ಜೀವನದ ಭಾಗವಾಗಿದೆ, ಎಲ್ಲರೂ ಜಾಗೃಕತೆ ಯಿಂದ ವರ್ತಿಸಿ ನಮ್ಮ ವಿಶ್ವವನ್ನು ಸಂರಕ್ಷಿಸೋಣ ಎಂದರು.
ಡಯಾಬಿಟಿಸ್ ಆರೋಗ್ಯ ತಪಾಸಣೆ ಶಿಬಿರವನ್ನು ಕೋವಿಡ್ ಸೊಂಕಿನ ಕಾರಣ ಕಾರಣ ನಿಲ್ಲಿಸಿದ್ದೆವು, ಈಗ ಮತ್ತೆ ತಪಾಸಣಾ ಶಿಬಿರ ಶುರುವಾಗುತ್ತಿದೆ ಎಂದರು.
ವಾತ್ಸಲ್ಯ ಧಾಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್.ವೈ.ಎನ್ ಮಾತನಾಡಿ, ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಇನ್ನೂರಕ್ಕೂ ಅಧಿಕ ದೇಶಗಳಲ್ಲಿ ಆಚರಿಸುತ್ತಿದ್ದು ನಾವುಗಳು ಜಾಗೃತರಾಗಿರಬೇಕಿದೆ. ಜನಸಂಖ್ಯೆಯಲ್ಲಿ ಇಡೀ ವಿಶ್ವದಲ್ಲೇ ಚೀನಾ ಮೊದಲನೆಯ ಸ್ಥಾನದಲ್ಲಿದ್ದು ಭಾರತ ಎರಡನೇ ಸ್ಥಾನದಲ್ಲಿದ್ದು, ಇದನ್ನು ಮನಗೊಂಡು ಎಲ್ಲರೂ ಜನಸಂಖ್ಯೆ ಕಡಿಮೆ ಮಾಡಲು ಎಲ್ಲರ ಸಹಕಾರ ಆಗತ್ಯ ಎಂದರು.
ಈ ಸಂದರ್ಭದಲ್ಲಿ ಹಾಡೋನಹಳ್ಳಿ ಗ್ರಾಪಂ ಉಪಾಧ್ಯಕ್ಷ ನಾಗರಾಜು, ವಾತ್ಸಲ್ಯದ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷೆ ಲೀಲಾವತಿ, ಡಾ. ಗಗನ ಜಿ ಕೃಷ್ಣ, ನವೋದಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಚೇತನ್, ಪುಷ್ಪ, ಅನಿತಾ, ಡಾ.ಶೋಭಾ ಬಾಳಿಗ, ಗ್ಯಾಸ್ ಸಂಸ್ಥೆಯ ಬಸವರಾಜು, ಡಾ.ಕರಿಯಪ್ಪ, ಡಾ. ಸುಲೋಚನ, ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಶಾ ಕಾರ್ಯಕರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..