ದೊಡ್ಡಬಳ್ಳಾಪುರ: ಯೂತ್ ಫಾರ್ ಸೇವಾ ಹಾಗೂ ವಿದ್ಯಾಧಾರೆ ಗೆಳೆಯರ ಬಳಗದ ವತಿಯಿಂದ SSLC ಪರೀಕ್ಷಾರ್ಥಿಗಳಿಗೆ ಸುಮಾರು 10 ಸಾವಿರ ಮೌಲ್ಯದ, ಕೋವಿಡ್ ಸೋಂಕು ತಡೆ ಪರಿಕರಗಳ ವಿತರಣೆ ಮಾಡಲಾಯಿತು.
ತಾಲೂಕಿನ ಸಾಸಲು ಹೋಬಳಿಯ ಚೆನ್ನವೀರನಹಳ್ಳಿ ಸರ್ಕಾರಿ ಪ್ರೌಢಶಾಲೆ, ಸಾಸಲು ಅನುದಾನಿತ ಪ್ರೌಢಶಾಲೆ, ಆರೂಢಿಯ ಅನುದಾನಿತ ಪ್ರೌಢಶಾಲೆ ಹಾಗೂ ಹೊಸಹಳ್ಳಿ ಪ್ರೌಢಶಾಲೆಯ 10ನೇ ತರಗತಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಡೆ ಪರಿಕರಗಳನ್ನು ನೀಡಲಾಯಿತು.
ಯೂತ್ ಫಾರ್ ಸೇವಾ ಹಾಗೂ ವಿದ್ಯಾಧಾರೆ ಗೆಳೆಯರ ಬಳಗದ ಸಹಯೋಗದಲ್ಲಿ ಸುಮಾರು 10 ಸಾವಿರ ಮೌಲ್ಯದ ಮಾಸ್ಕ್, ಸ್ಯಾನಿಟೈಸರ್ ಹಾಗೂ ಪೆನ್ ವಿತರಿಸಲಾಯಿತು.
ವಿದ್ಯಾಧಾರೆ ಗೆಳೆಯರ ಬಳಗದ ರೇಣು ಗೋಪಾಲ್, ತಿಮ್ಮರಾಜು, ಅರವಿಂದ್ ಹಾಗೂ ಹರೀಶ್ ಶಾಲೆಗಳಿಗೆ ತೆರಳಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಪರಿಕರಗಳನ್ನು ನೀಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..