ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಪಟ್ಟಣದ 21 ನೇ ವಾರ್ಡ್ ನ ನಿವಾಸಿ ಕಿರಣ್ ಹಾಗೂ ಮಡದಿ ಸಂಧ್ಯಾ ಕುಮಾರಿ, ಮಕ್ಕಳಾದ ಮಹೀನ್ ಶೇಖರ್ ಮತ್ತು ಯಶ್ವಿನ್ ಶೇಖರ್2023ರ ನವೆಂಬರ್16 ರಂದು ಸಂಜೆ 6 ಗಂಟೆಗೆ ಮೆಜೆಸ್ಟಿಕ್ ಗೆ ಹೋಗುವುದಾಗಿ ತಿಳಿಸಿ ಹೋದವರು ನಾಪತ್ತೆಯಾಗಿದ್ದು (missing), ಇವರನ್ನು ಪತ್ತೆ ಮಾಡಿಕೊಡಬೇ ಕೆಂದು ವಾರಸುದಾರರು ಮನವಿ ಮಾಡಿದ್ದಾರೆ.
ಕಿರಣ್, ಗೋಧಿ ಮೈ ಬಣ್ಣ, ದೃಢಕಾಯ ಮೈ ಕಟ್ಟು, ಕೋಲು ಮುಖ, 6.1 ಅಡಿ ಎತ್ತರ, ಕಪ್ಪು ಕೂದಲು, ಪಿಂಕ್ ಬಣ್ಣದ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸುತ್ತಾರೆ.
ಸಂಧ್ಯಾ ಕುಮಾರಿ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ದುಂಡು ಮುಖ, 5.2 ಅಡಿ ಎತ್ತರ, ಕಪ್ಪು ಕೂದಲು, ಕೆಂಪು ಮತ್ತು ಹಳದಿ ಮಿಶ್ರಿತ ಬಣ್ಣದ ಡ್ರೆಸ್ ಧರಿಸುತ್ತಾಳೆ.
ಮಕ್ಕಳಾದ ಮಹೀನ್ ಶೇಖರ್ ಮತ್ತು ಯಶ್ವಿನ್ ಶೇಖರ್ ನಾಪತ್ತೆಯಾಗಿದ್ದಾರೆ. ಇವರ ಗುರುತು ತಿಳಿದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.