ಬೆಂ.ಗ್ರಾ.ಜಿಲ್ಲೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರ, ಜಿಲ್ಲಾ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಜಿಲ್ಲಾ ಮಟ್ಟದ ಯುವಜನೋತ್ಸವ (yuvajanotsava) ಕಾರ್ಯಕ್ರಮವನ್ನು ನವೆಂಬರ್ 30 ರಂದು ದೇವನಹಳ್ಳಿ ಟೌನ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಯುವ ಜನರಲ್ಲಿ ಶಾಸ್ತ್ರೀಯ ಕಲೆ, ಜಾನಪದ ಕಲೆ, ಸಂಗೀತ ಮತ್ತು ಸಂಸ್ಕೃತಿಯ ಬಗೆಗಿನ ಕಾಳಜಿ ಹೆಚ್ಚಿಸಲು, ಉತ್ತೇಜನ ನೀಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ವತಿಯಿಂದ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನಾಚಾರಣೆಯನ್ನು ಸಂಘಟಿಸಲಾಗುತ್ತದೆ. ಈ ಅಂಗವಾಗಿ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಯುವಜನೋತ್ಸವ ಭಾಗವಾಗಿ ವಿಜ್ಞಾನ ಮೇಳ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಗಳಲ್ಲಿ 15 ರಿಂದ 29 ರ ವಯೋಮಿತಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಯುವಕ ಯುವತಿಯರು ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ, ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಬಹುದು.
ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ನಗದು ಬಹುಮಾನ, ಪ್ರಮಾಣ ಪತ್ರ ನೀಡಲಾಗುವುದು, ಸ್ಪರ್ಧಿಗಳು ನವೆಂಬರ್ 30 ರಂದು ಬೆಳಿಗ್ಗೆ 9.30 ಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೆವನಹಳ್ಳಿ ತಾಲ್ಲೂಕು ಇಲ್ಲಿ ನೋಂದಾಯಿಸಿಕೊಂಡು ಜಿಲ್ಲಾ ಯುವಜನೋತ್ಸವದಲ್ಲಿ ಭಾಗವಹಿಸಬಹುದಾಗಿದೆ.
ಯುವ ಜನೋತ್ಸವ ಸ್ಪರ್ಧೆಗಳ ವಿವರ
ಗುಂಪು ಸ್ಪರ್ಧೆಗಳು
- ವಿಜ್ಞಾನ ಮೇಳ (ಗುಂಪು),
- ಜಾನಪದ ನೃತ್ಯ (ತಂಡ)– (ಕನ್ನಡ/ ಆಂಗ್ಲ/ ಹಿಂದಿ ಭಾಷೆ),
- ಜಾನಪದ ಗೀತೆ (ತಂಡ)– (ಕನ್ನಡ/ ಆಂಗ್ಲ/ ಹಿಂದಿ ಭಾಷೆ),
ವೈಯಕ್ತಿಕ ಸ್ಪರ್ಧೆಗಳು
- ಜಾನಪದ ನೃತ್ಯ–(ಕನ್ನಡ/ ಆಂಗ್ಲ/ ಹಿಂದಿ ಭಾಷೆ),
- ಜಾನಪದ ಗೀತೆ–(ಕನ್ನಡ/ ಆಂಗ್ಲ/ ಹಿಂದಿ ಭಾಷೆ),
- ಕವಿತೆ ಬರೆಯುವುದು
- ಕಥೆ ಬರೆಯುವುದು (ವೈಯಕ್ತಿಕ) ಸ್ಟೋರಿ ರೈಟಿಂಗ್ (1000 ಪದಗಳು ಮೀರದಂತೆ) – (ಕನ್ನಡ/ ಆಂಗ್ಲ/ ಹಿಂದಿ ಭಾಷೆ),
- ಚಿತ್ರ ಕಲೆ- ಕನ್ನಡ /ಆಂಗ್ಲ /ಹಿಂದಿ)
- ಮೊಬೈಲ್ ಛಾಯಾಗ್ರಹಯ ಸ್ಫರ್ಧೆ
- ವಿಜ್ಞಾನ ಮೇಳ (ವೈಯಕ್ತಿಕ)
- ಯುವ ಚಿತ್ರ ಕಲಾ ಸ್ಫರ್ಧೆ
- ಛಾಯಾಚಿತ್ರಣ (ವೈಯಕ್ತಿಕ)
- ಕವನ ಬರಹಗಾರರ ಸ್ಫರ್ಧೆ
ಯುವ ಕೃತಿ
- ಗುಡಿ ಕೈಗಾರಿಕೆಯ ಕಲಾ ಪ್ರಕಾರ
- ನೇಕಾರಿಕೆ / ಜವಳಿ
- ಕೃಷಿ ಉತ್ಪನ್ನಗಳು
ಹೆಚ್ಚಿನ ವಿವರಗಳಿಗೆ ಕಛೇರಿ ದೂರವಾಣಿ ಸಂಖ್ಯೆ 080-29787443 ಹಾಗೂ ಮೊಬೈಲ್ ಸಂಖ್ಯೆ 8328673178, 9980590960, 9632778567 ರಲ್ಲಿ ಸಂಪರ್ಕಿಸಬಹುದಾಗಿದೆ.