Doddaballapura; ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಗಳಿಗೆ ಸಂಭ್ರಮದ ತೆರೆ| ಪ್ರಶಸ್ತಿ ವಿಜೇತರ ವಿವರ ಇಲ್ಲಿದೆ ನೋಡಿ

ದೊಡ್ಡಬಳ್ಳಾಪುರ: Doddaballapura ತಾಲೂಕು ಕುಸ್ತಿ ಸಂಘದಿಂದ ಬಯಲು ಬಸವಣ್ಣ ಕಡಲೇಕಾಯಿ ಪರಿಷೆ ಅಂಗವಾಗಿ ಬಸವಣ್ಣ ದೇವಾಲಯದ ಎದುರಿನ ಮೈದಾನದಲ್ಲಿ ನಡೆದ ಅಂತರ ಜಿಲ್ಲಾ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಗಳ ಬಹುಮಾನ ವಿತರಣಾ ಸಮಾರಂಭ ನಡೆಯಿತು.

ಸಾಂಪ್ರದಾಯಿಕ ಮಣ್ಣಿನ ಅಖಾಡ (ಮಟ್ಟಿ)ದಲ್ಲಿ ತಡರಾತ್ರಿವರೆಗೂ ನಡೆದ ಅಂತಿಮ ಹಣಾಹಣಿಯಲ್ಲಿ ಸೆಣಸಾಡುವ ಕುಸ್ತಿ ಪಟುಗಳ ಕಾದಾಟವನ್ನು ನೂರಾರು ಜನ ಕಣ್ತುಂಬಿಕೊಂಡು ಸಂತಸ ಪಟ್ಟರು. ಕುಸ್ತಿ ಪಟುಗಳ ಜಂಗಿ ಕುಸ್ತಿಯಾಟ ಮೈನವಿರೇಳಿಸಿತು.

ಕುಸ್ತಿಪಟುಗಳ ತೂಕಗಳ ಮಾನದಂಡಕ್ಕೆ ಅನುಸಾರವಾಗಿ, ದೊಡ್ಡಬಳ್ಳಾಪುರ ಯುವ ಕಿಶೋರ, ದೊಡ್ಡಬಳ್ಳಾಪುರ ಕಿಶೋರ, ದೊಡ್ಡಬಳ್ಳಾಪುರ ಕುಮಾರ, ದೊಡ್ಡಬಳ್ಳಾಪುರ ಕೇಸರಿ, ದೊಡ್ಡಬಳ್ಳಾಪುರ ಕಂಠೀರವ, ಹಾಗೂ ಮಹಿಳಾ ವಿಭಾಗದಲ್ಲಿ (60 ಕೆ.ಜಿ. ಒಳಗಿನ ವಿಭಾಗ) ದೊಡ್ಡಬಳ್ಳಾಪುರ ಕಿಶೋರಿ ವಿಭಾಗಗಳಲ್ಲಿ ಪಂದ್ಯಗಳು ನಡೆದವು.

ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಂದ 105 ಕ್ರೀಡಾಪಟುಗಳು ಭಾಗವಹಿಸಿದ್ದರು.

ವಿಜೇತರಿಗೆ ಬೆಳ್ಳಿಗದೆ, ಟ್ರೋಫಿ, ನಗದು ಬಹುಮಾನ, ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಪಾರಂಪರಿಕ ಕುಸ್ತಿ ಕಲೆ ಮರೆಯಾಗುತ್ತಿರುವ ಇಂತಹ ಸಂದರ್ಭದಲ್ಲಿ, ಕುಸ್ತಿಯನ್ನು ಉತ್ತೇಜಿಸಲು ಉತ್ತಮ ವೇದಿಕೆಗಳ ಅಗತ್ಯವಿದೆ. ದೇವನಹಳ್ಳಿಯಲ್ಲಿ 10 ವರ್ಷಗಳಿಗೊಮ್ಮೆ ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿವೆ. ಇಂದಿನ ಪೀಳಿಗೆಗೆ ಕುಸ್ತಿ, ವ್ಯಾಯಾಮ ಹಾಗೂ ಗರುಡಿ ಮನೆಗಳ ಪರಿಚಯವಾಗಬೇಕು. ಕುಸ್ತಿ ಪಂದ್ಯಾವಳಿಗಳು ಪ್ರತಿ ವರ್ಷ ನಡೆಯಬೇಕು ಎಂದು ಸಲಹೆ ನೀಡಿದರು.

ಈ ವೇಳೆ ನಗರಸಭಾ ಸದಸ್ಯರಾದ ಶಿವ, ವೆಂಕಟೇಶ್ ಲಾವಣ್ಯ ವಿದ್ಯಾಸಂಸ್ಥೆಯ ಗೌರವ ಕಾರ್‍ಯದರ್ಶಿ ವಿಶ್ವಾಸ್ ಗೌಡ, ದೊಡ್ಡಬಳ್ಳಾಪುರ ತಾಲೂಕು ಕುಸ್ತಿ ಸಂಘದ ಗೌರವ ಅಧ್ಯಕ್ಷ ಪೈಲ್ವಾನ್ ಚೌಡಪ್ಪ, ಅಧ್ಯಕ್ಷ ಲಕ್ಷ್ಮೀನಾರಾಯಣ್, ಕಾರ್‍ಯದರ್ಶಿ ಶ್ರೀನಿವಾಸ್, ಸಂಘಟನಾ ಕಾರ್‍ಯದರ್ಶಿ ಗಣೇಶ್ ರಾಜಘಟ್ಟ, ಗೌ.ಅಧ್ಯಕ್ಷ ಪಿಳ್ಳಣ್ಣ, ಉಪಾಧ್ಯಕ್ಷ ಎಸ್.ಪದ್ಮನಾಭ್, ಖಜಾಂಚಿ ವಿಶ್ವನಾಥ್, ಸೇರಿದಂತೆ ನಗರಸಭಾ ಸದಸ್ಯರು, ಬಯಲು ಬಸವಣ್ಣ ಸೇವಾ ಸಮಿತಿ ಪದಾಕಾರಿಗಳು ಭಾಗವಹಿಸಿದ್ದರು.

ಬಹುಮಾನ ವಿಜೇತರ ವಿವರ

ದೊಡ್ಡಬಳ್ಳಾಪುರ ಯುವ ಕಿಶೋರಿ: ಶ್ರೀರಕ್ಷ (ಕನಕಪುರ).

ದೊಡ್ಡಬಳ್ಳಾಪುರ ಯುವ ಕಿಶೋರಅಭಿಷೇಕ್ (ಕನಕಪುರ).

ದೊಡ್ಡಬಳ್ಳಾಪುರ ಕಿಶೋರ: ಸೋಫಿಯಾನ್ (ಬೆಂಗಳೂರು).

ದೊಡ್ಡಬಳ್ಳಾಪುರ ಕುಮಾರ: ಅಂಬರೀಶ್ (ಮಂಡ್ಯ).

ದೊಡ್ಡಬಳ್ಳಾಪುರ ಕೇಸರಿ: ಧನಂಜಯ (ದೊಡ್ಡಬಳ್ಳಾಪುರ).

ದೊಡ್ಡಬಳ್ಳಾಪುರ ಕಂಠೀರವ: ಮಧುಸೂದನ್ (ದೇವನಹಳ್ಳಿ)

ರಾಜಕೀಯ

ದೊಡ್ಡಬಳ್ಳಾಪುರ: ಲಕ್ಷ್ಮೀಪತಯ್ಯರ ಸ್ವಗೃಹಕ್ಕೆ ಹರೀಶ್ ಗೌಡ ಭೇಟಿ.. JDS ರಜತ ಮಹೋತ್ಸವಕ್ಕೆ ಆಹ್ವಾನ

ದೊಡ್ಡಬಳ್ಳಾಪುರ: ಲಕ್ಷ್ಮೀಪತಯ್ಯರ ಸ್ವಗೃಹಕ್ಕೆ ಹರೀಶ್ ಗೌಡ ಭೇಟಿ.. JDS ರಜತ ಮಹೋತ್ಸವಕ್ಕೆ ಆಹ್ವಾನ

ಇದೇ ತಿಂಗಳ 8 ರಂದು ನಡೆಯಲಿರುವ ಜೆಡಿಎಸ್ (JDS) ರಜತ ಮಹೋತ್ಸವ ಸಮಾರಂಭ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ ಅಧ್ಯಕ್ಷ ಹರೀಶ್ ಗೌಡ (Garish Gowda) ಅವರು ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರ ಭೇಟಿ

[ccc_my_favorite_select_button post_id="121740"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ಜಿಂಕೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ (Car) ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ (Woman) ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

[ccc_my_favorite_select_button post_id="121693"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]