ಜರ್ಮನಿಯಲ್ಲಿ ಇನ್ವೆಸ್ಟ್‌ ಕರ್ನಾಟಕ ರೋಡ್‌ಷೋ.. ಕರ್ನಾಟಕ ಜೊತೆ ವಾಣಿಜ್ಯ ಬಾಂಧವ್ಯ ವೃದ್ಧಿಗೆ ಬವೇರಿಯಾ ಆಸಕ್ತಿ: ಸಚಿವ ಎಂ.ಬಿ.ಪಾಟೀಲ| MB Patila

ಮ್ಯೂನಿಚ್ (ಜರ್ಮನಿ): ʼಕೃತಕ ಬುದ್ಧಿಮತ್ತೆ ಮತ್ತು ಸೆಮಿಕಂಡಕ್ಟರ್ ಡಿಸೈನ್‌ನಂತಹ ಗಮನಾರ್ಹ ಬೆಳವಣಿಗೆಯ ಸಾಧ್ಯತೆ ಇರುವ ವಲಯಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಜೊತೆ ಕೆಲಸ ಮಾಡಲು ಜರ್ಮನಿಯ ಸ್ವತಂತ್ರ ರಾಜ್ಯ ಬವೇರಿಯಾವು ತೀವ್ರ ಆಸಕ್ತಿ ವ್ಯಕ್ತಪಡಿಸಿದೆʼ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ (MB Patila) ಅವರು ತಿಳಿಸಿದ್ದಾರೆ.

ಇನ್ವೆಸ್ಟ್‌ ಕರ್ನಾಟಕದ ಅಂತರರಾಷ್ಟ್ರೀಯ ರೋಡ್‌ಷೋ ಅಂಗವಾಗಿ ಜರ್ಮನಿ ಪ್ರವಾಸದಲ್ಲಿ ಇರುವ ಸಚಿವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು, ಬವೇರಿಯಾದ ಆರ್ಥಿಕ ವ್ಯವಹಾರಗಳ ರಾಜ್ಯ ಕಾರ್ಯದರ್ಶಿ ರೋಲ್ಯಾಂಡ್‌ ವೀಗರ್ಟ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು.

ʼಸಭೆಯಲ್ಲಿ ಉಭಯ ರಾಜ್ಯಗಳ ನಡುವಣ ವಾಣಿಜ್ಯ ಬಾಂಧವ್ಯ ವೃದ್ಧಿಸುವ ಮಾರ್ಗೋಪಾಯಗಳನ್ನು ಪ್ರಮುಖವಾಗಿ ಚರ್ಚಿಸಲಾಯಿತು. ಮುಂದಿನ ವರ್ಷ ಕರ್ನಾಟಕಕ್ಕೆ ಬವೇರಿಯಾದ ವಾಣಿಜ್ಯ ನಿಯೋಗ ಕಳಿಸಿಕೊಡುವುದಾಗಿ ವೀಗರ್ಟ್‌ ಅವರು ಭರವಸೆ ನೀಡಿದ್ದಾರೆʼ ಎಂದು ಸಚಿವರು ತಿಳಿಸಿದ್ದಾರೆ.

ಸಚಿವ ಪಾಟೀಲ ಅವರು ಬವೇರಿಯಾದ ಯುರೋಪ್‌ ಹಾಗೂ ಅಂತರರಾಷ್ಟ್ರೀಯ ವ್ಯವಹಾರಗಳ ರಾಜ್ಯ ಸಚಿವ ಎರಿಕ್‌ ಬಿಸ್ವೆಂಜರ್‌ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದರು. ಸಮಾಲೋಚನೆಯಲ್ಲಿ ಜೈವಿಕ ತಂತ್ರಜ್ಞಾನ ಹಾಗೂ ನವೋದ್ಯಮಗಳಲ್ಲಿ ಬಾಂಧವ್ಯ ವೃದ್ಧಿ ಬಗ್ಗೆ ಹೆಚ್ಚಿನ ಒತ್ತು ಕೊಡಲಾಗಿತ್ತು.

ಆಹಾರ ಹಾಗೂ ಪಾನೀಯ ಕೈಗಾರಿಕೆಗಳಲ್ಲಿ ಬಳಕೆಯಾಗುವ ಸಲಕರಣೆಗಳನ್ನು ತಯಾರಿಸುವ ಜಾಗತಿಕ ಪ್ರಮುಖ ಸಂಸ್ಥೆ ಜಿಇಎ ಗ್ರೂಪ್‌ ಸೇರಿದಂತೆ ಜರ್ಮನಿಯ ಪ್ರಮುಖ ಕೈಗಾರಿಕೆಗಳ ಮುಖ್ಯಸ್ಥರ ಜೊತೆಗೂ ರಾಜ್ಯದ ನಿಯೋಗವು ಮಾತುಕತೆ ನಡೆಸಿತು.

ಭವಿಷ್ಯದ ಯೋಜನೆಗಳ ಭಾಗವಾಗಿ ಬೆಂಗಳೂರಿನಲ್ಲಿ ಇರುವ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಬಗ್ಗೆ ಕಂಪನಿಯ ಮುಖ್ಯ ಕಾರ್ಯಾಚರಣೆ ಅಧಿಕಾರಿ (ಸಿಒಒ) ಜೋಹಾನ್ನೆಸ್‌ ಗಿಲೋಥ್‌ ಅವರು ಭರವಸೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಜೊತೆ ಸಹಯೋಗ ವಿಸ್ತರಿಸಲು ಹಾಗೂ ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆಯ ಅವಕಾಶಗಳನ್ನು ತನ್ನ ಸದಸ್ಯರ ಗಮನಕ್ಕೆ ತರುವುದರ ಬಗ್ಗೆ ಈ ಎರಡೂ ಸಂಘಟನೆಗಳು ರಾಜ್ಯದ ನಿಯೋಗಕ್ಕೆ ಭರವಸೆ ನೀಡಿವೆ.

ಬವೇರಿಯಾದ ಜೈವಿಕ ತಂತ್ರಜ್ಞಾನದ ಪ್ರಮುಖ ಸಂಘಟನೆಯಾಗಿರುವ ಬಿಯೊಎಂ ಜೊತೆಗಿನ ಸಭೆಯಲ್ಲಿ ಸಚಿವ ಪಾಟೀಲ ಅವರು ʼಕ್ವಿನ್‌ ಸಿಟಿʼ ಯೋಜನೆ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಕರ್ನಾಟಕದ ಸಾಮರ್ಥ್ಯಗಳನ್ನು ವಿವರಿಸಿದರು.

ಜರ್ಮನಿಯಲ್ಲಿ ನಡೆದ ರೋಡ್‌ಷೋ, ಕರ್ನಾಟಕವು ಜಾಗತಿಕ ಹೂಡಿಕೆಯ ಪ್ರಮುಖ ತಾಣವಾಗಿರುವುದನ್ನು ಸ್ಥಳೀಯ ಹೂಡಿಕೆದಾರರಿಗೆ ಯಶಸ್ವಿಯಾಗಿ ಪರಿಚಯಿಸಿದೆ.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಅವರು ಸಮಾಲೋಚನೆಗಳಲ್ಲಿ ಭಾಗವಹಿಸಿದ್ದರು.

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪಚುನಾವಣೆಯಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಸೋತು ಮುಂದಿನ ರಾಜ್ಯದ ಭವಿಷ್ಯ ತೀರ್ಮಾನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

[ccc_my_favorite_select_button post_id="120773"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ (Accident) ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ..*** ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

[ccc_my_favorite_select_button post_id="120965"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!