ಬೆಂಗಳೂರು: ಭಾರತ ಚಿತ್ರರಂಗದ ಸುಪ್ರಸಿದ್ಧ ನಟ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಕನ್ನಡಿಗರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅಲ್ಲದೇ ಅವರು ಕನ್ನಡ ಮಾತನಾಡುವುದು ಅನೇಕರಿಗೆ ತಿಳಿದಿದೆ. ಆದರೆ ಇದೀಗ ಬೆಂಗಳೂರಿನಲ್ಲಿನ ಶಾಲಾ ದಿನಗಳ ಕುರಿತು ರಜನಿಕಾಂತ್ ಅವರು ಸ್ಮರಿಸಿದ್ದಾರೆ.

ಬೆಂಗಳೂರಿನ ಬಸವನಗುಡಿಯ ಅಚಾರ್ಯ ಪಾಠಶಾಲೆಯ ಹಳೆಯ ವಿದ್ಯಾರ್ಥಿಗಳ ಸಮಾಗಮದ ಕಾರ್ಯಕ್ರಮದ ಕುರಿತು ಮಾತನಾಡಿರುವ ಅವರು, ಇದು ತಮ್ಮ ನಟನೆಯ ಬಗ್ಗೆ ಪ್ರೀತಿಯನ್ನು ಹುಟ್ಟುಹಾಕಿತು ಮತ್ತು ಶಿಸ್ತು ದಯ ಮತ್ತು ನಮ್ರತೆಯಂತಹ ಮೌಲ್ಯಗಳನ್ನು ಬೆಳೆಸಿದ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಶೂಟಿಂಗನಲ್ಲಿರುವ ಕಾರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಲೇ ವಿಡಿಯೋ ಮೂಲಕ ಮಾತನಾಡಿರುವ ರಜನಿಕಾಂತ್ (Rajanikanth) ಅವರು ಬೆಂಗಳೂರಿನಲ್ಲಿ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಎಪಿಎಸ್ ಸ್ಕೂಲ್ ಮತ್ತು ಕಾಲೇಜಿನಲ್ಲಿ ಓದಿದಕ್ಕೆ ನನಗೆ ಈಗಲೂ ತುಂಬಾ ಹೆಮ್ಮೆ ಇದೆ. ಮೊದಲು ನಾನು ಗವಿಪುರದಲ್ಲಿರುವ ಗಂಗಧಾರೇಶ್ವರ ದೇವಾಲಯದ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೆ.
ನಾನು ಕ್ಲಾಸ್ ಗೆ ಫಸ್ಟ್ ಮತ್ತು ಬೆಸ್ಟ್ ಸ್ಪೂಡೆಂಟ್
ಶಾಲೆಯಲ್ಲಿ ಓದಿನಲ್ಲಿ ಮುಂದಿದ್ದೆ, ನಾನು ಕ್ಲಾಸ್ ಗೆ ಫಸ್ಟ್ ಮತ್ತು ಬೆಸ್ಟ್ ಸ್ಪೂಡೆಂಟ್ ಕೂಡ ಆಗಿದ್ದೆ ಅಷ್ಟೇ ಅಲ್ಲದೆ ಕ್ಲಾಸ್ ಮಾನಿಟರ್ ಆಗಿದ್ದೆ ಮಿಡಲ್ ಸ್ಕೂಲ್ ನಲ್ಲಿ 99 ಪರ್ಸೆಂಟ್ ಮಾರ್ಕ್ಸ್ ತೆಗೆದುಕೊಂಡಿದ್ದೇನೆ.
ತುಂಬಾ ಒಳ್ಳೆಯ ಮಾರ್ಕ್ಸ್ ಕೂಡ ಆಗಿತ್ತು ಹೀಗಾಗಿ ನನ್ನ ಅಣ್ಣನೇ ನನ್ನನ್ನು ಎಪಿಎಸ್ ಹೈಸ್ಕೂಲ್ ಇಂಗ್ಲಿಷ್ ಮೀಡಿಯಂಗೆ ಸೇರಿಸಿದ್ದು, ಅಲ್ಲಿ ನಾನು ಡನ್ ಆಗಿ ಹೋಗಿಬಿಟ್ಟೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.
ಮೊದಲ ಬೆಂಚ್ ವಿದ್ಯಾರ್ಥಿ ಆಗಿದ್ದ ನಾನು ಅಲ್ಲಿ ಕೊನೆಯ ಬೆಂಚ್ ಗೆ ಬಂದೆ. ಆಗ ಡಿಪ್ರೆಶನ್ಗೂ ಹೋಗಿದ್ದೆ ಆದ್ರೆ ಎಪಿಎಸ್ ಸ್ಕೂಲ್ ಕಾಲೇಜಿನಲ್ಲಿ ಶಿಕ್ಷಕರು ನನಗೆ ಪ್ರೀತಿ ತೋರಿಸಿ ಪಾಠ ಹೇಳಿ ಕೊಟ್ಟರು. ಬಳಿಕ 8, 9ನೇ ತರಗತಿಯನ್ನ ಪಾಸ್ ಮಾಡಿದೆ. ಆದ್ರೆ 10ನೇ ಕ್ಲಾಸ್‌ನಲ್ಲಿ ಪಬ್ಲಿಕ್ ಎಕ್ಸಾಂ ನಲ್ಲಿ ಇತ್ತು ಇದು ನನಗಷ್ಟೇ ಅಲ್ಲ ಅನೇಕರಿಗೂ ಕಷ್ಟವಾಗಿತ್ತು ಎಂದರು.
10ನೇ ತರಗತಿಗೆ ಬಂದಾಗ ಪಬ್ಲಿಕ್ ಪರೀಕ್ಷೆ ಇದ್ದಿದ್ದರಿಂದ ಒಂದು ವಿಷಯದಲ್ಲಿ ಫೇಲ್ ಆದೆ. ಆಗ ಕೆಮಿಸ್ಟ್ರಿ ಟೀಚರ್ವೊಬ್ಬರು ಮನೆಯಲ್ಲಿ ಸ್ಪೆಷಲ್ ಕ್ಲಾಸ್ ತಗೋತಿದ್ರು, ನನಗೆ ಫ್ರೀಯಾಗಿ ಅವರು ಪಾಠ ಹೇಳಿಕೊಟ್ಟರು, ಕೊನೆಗೆ ನಾನು ಆ ವಿಷಯದಲ್ಲಿ ಪಾಸ್ ಆದೆ ಎಂದು ರಜನಿ ತಮ್ಮ ಬಾಲ್ಯ ನೆನೆದಿದ್ದಾರೆ.
ಕೊನೆಗೆ ಮಾರ್ಕ್ಸ್ ಕಡಿಮೆ ಇದ್ರೂ ನನ್ನನ್ನು ಕಷ್ಟಪಟ್ಟು ಕಾಲೇಜಿಗೆ ಕಳಿಸಿದ್ರು. ಆದರೆ, ಹಲವು ಕಾರಣಗಳಿಂದ ನಾನು ಶಿಕ್ಷಣ ಅರ್ಧದಲ್ಲೇ ನಿಂತಿತು. ಹೈಸ್ಕೂಲ್‌ನಲ್ಲಿ ಪ್ರತಿ ವರ್ಷ ನಾಟಕಗಳು ನಡೆಯುತ್ತಿದ್ದವು. ನಾನು ಕಥೆಗಳನ್ನು ಹೇಳುತ್ತಿದ್ದ ಕಾರಣ ಉಳಿದ ವಿದ್ಯಾರ್ಥಿಗಳು ತುಂಬಾ ಖುಷಿಪಡುತ್ತಿದ್ದರು.
ಕೊನೆಗೆ ಒಂದು ನಾಟಕ ಮಾಡುವಂತೆ ಶಿಕ್ಷಕರು ನನಗೆ ಹೇಳಿದ್ರು, ಆದಿಶಂಕರರು ಚಂಡಾಲನನ್ನು ಭೇಟಿಯಾಗುವ ಪ್ರಸಂಗ ನನಗೆ ನೀಡಿದರು. ಆಗ ನಾನು ಚಂಡಾಲನ ಪಾತ್ರವನ್ನು ಮಾಡಿದೆ. ನಾನು ಚಂಡಾಲನ ತರನೇ ಇದ್ದೆ ಅಂತ ಕಾಣುತ್ತೆ ಅದಕ್ಕೆ ಆ ಪಾತ್ರ ನನಗೆ ಬಂತು. ಕೊನೆಗೆ ನಮ್ಮ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಸಿಕ್ಕಿತು ಎಂದಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ APS ಸ್ಕೂಲ್-ಕಾಲೇಜು ದಿನಗಳನ್ನು ನೆನಪಿಸಿಕೊಂಡ @rajinikanth #Rajini #Rajinikanth pic.twitter.com/1eei2Krvi6
— ಎಸ್ ಶ್ಯಾಮ್ ಪ್ರಸಾದ್ | S Shyam Prasad (@ShyamSPrasad) January 18, 2025
ಆಗ ನನಗೆ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಶಸ್ತಿ ಕೂಡ ಬಂದಿತ್ತು. ದೊಡ್ಡ ಕಪ್ ನನಗೆ ಕೊಟ್ಟಿದ್ದು. ಆಗಲೇ ನನನ್ನು ಒಬ್ಬ ನಟ ಎಂದು ಅಂಗೀಕಾರ ಮಾಡಿದ್ದರು. ಇಂದು ಅದೇ ವ್ಯಕ್ತಿಯಲ್ಲಿ ನನ್ನಿಂದ ಸಾಧ್ಯವಾದಷ್ಟು ನಟನೆ 5 ಮಾಡುತ್ತಿದ್ದೇನೆ ಎಂದು ರಜನಿ ಮೆಲುಕು ಹಾಕಿದ್ದಾರೆ.
ಇಂದು ನಾನು ಇಷ್ಟು ದೊಡ್ಡ ನಟನಾಗಿ ಹೆಸರು ಮಾಡಿದ್ದೇನೆ ಅಂದರೆ ನನ್ನ ಬಾಲ್ಯವೇ ಕಾರಣ ಅಲ್ಲಿ ನನಗೆ, ಧೈರ್ಯ, ಮಾರ್ಗದರ್ಶನ ನೀಡಿಲ್ಲ ಎಂದರೆ ಇಂದು ನಾನು ಇಲ್ಲಿ ಇರುತ್ತಿರಲಿಲ್ಲ ಈಗ ಈಗಲೂ ಕೂಡ ದೊಡ್ಡ ಗಣೇಶ, ಬಸವನಗುಡಿ ಅಲ್ಲಿ ಓಡಾಡಿರುವುದೆಲ್ಲ ಈಗಲೂ ನನ್ನ ಮನಸಿಲ್ಲಿ ಹಚ್ಚಿ ಹಸಿರಾಗಿದೆ. ತುಂಬಾ ಹೆಮ್ಮೆ ಇದೆ.
ಸದ್ಯ ಚಿತ್ರದ ಶೂಟಿಂಗ್ ಹಿನ್ನಲೆ ಬ್ಯಾಂಕಾಕ್ ನಲ್ಲಿ ಇದ್ದೇನೆ ಹೀಗಾಗಿ ಈ ವರ್ಷ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಮುಂದಿನ ಬಾರಿ ಬಂದಾಗ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ ಎಂದು ರಜನಿಕಾಂತ್ (Rajanikanth) ಎಪಿಎಸ್ ಹೈಸ್ಕೂಲ್ ಸಿಬ್ಬಂದಿಗೆ ತಿಳಿಸಿದ್ದಾರೆ.