
ನಾಡಿಯಾ; ಹೆಂಡತಿಯ ಮೂಗು ಸುಂದರವಾಗಿದೆ (Beautiful nose) ಎನ್ನುತ್ತಿದ್ದ ಪತಿ ಮಹಾಶಯನೋರ್ವ, ಪತ್ನಿಯ ಮೂಗನ್ನು ಕಚ್ಚಿ ತಿಂದಿರುವ ಘಟನೆ ಪಶ್ಚಿಮ ಬಂಗಾಳ ನಾಡಿಯಾ ಜಿಲ್ಲೆಯ ಶಾಂತಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೆರ್ಪಾರಾದಲ್ಲಿ ನಡೆದಿದೆ.

ಪತಿ ಬಾಪನ್ ಶೇಖ್ ತನ್ನ ಪತ್ನಿ ಮಧು ಖತುನ್‌ಗೆ ನಿನ್ನ ಮೂಗು ಸುಂದರವಾಗಿದೆ. ಅವಕಾಶ ಸಿಕ್ಕರೆ ಅದನ್ನು ಕಚ್ಚಿ ತಿನ್ನುತ್ತೇನೆ ಎಂದು ಗಂಡ ಹೇಳುತ್ತಿದ್ದನಂತೆ.
ಅಂತಯೇ ಮಧು ಖತುನ್ ಮಲಗಿದ್ದಾಗ ಅವರ ಮೂಗನ್ನು ಪತಿ ಬಾಪನ್ ಕಚ್ಚಿ ತಿಂದಿದ್ದು, ಈ ಕುರಿತು ಪತ್ನಿ ಮಧು ಖತುನ್ ಚಿಕಿತ್ಸೆ ಪಡೆದ ಬಳಿಕ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


