ದೊಡ್ಡಬಳ್ಳಾಪುರ: ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ನಳಂದ ಪ್ರೌಢಶಾಲೆ (Nalanda High School) ವತಿಯಿಂದ ಆಪರೇಷನ್ ಸಿಂಧೂರ (Operation Sindoora) ನಡೆಸಿದ ಭಾರತೀಯ ಸೇನೆಗೆ ಬೆಂಬಲ ಸೂಚಿಸಿ ತಿರಂಗ ಯಾತ್ರೆಯನ್ನು ನಡೆಸಲಾಯಿತು.
ಶಾಲೆಯ ಕಾರ್ಯದರ್ಶಿ ಅನುರಾಧ ಕೆ ಆರ್ ಅವರು ಹಸಿರು ಬಾವುಟ ತೋರಿಸುವ ಮೂಲಕ ತಿರಂಗ ಯಾತ್ರೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಅನಿತಾ ಕೆ ಪಿ, ಸುನಿತಾ ಪಿ, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಬ್ಯಾಂಡ್ ಸೆಟ್ ನೊಂದಿಗೆ ನಮ್ಮ ದೇಶದ ಹೆಮ್ಮೆಯ ವೀರ ಯೋಧರ ಹಾಗೂ ವೀರ ಯೋಧ ಮಹಿಳೆಯರ ಮತ್ತು ಸ್ಕೌಟ್ಸ್ ಗೈಡ್ಸ್ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಬೃಹತ್ ಭಾರತ ತ್ರಿವರ್ಣ ಧ್ವಜವನ್ನು ಹೊತ್ತು ಅತ್ಯಂತ ಶಿಸ್ತಿನಿಂದ ಪಥಸಂಚಲನ ನಡೆಸಿದರು.

ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು ತ್ರಿವರ್ಣ ಧ್ವಜಗಳನ್ನು ಹಾಗೂ ಸೇನೆಯ ಕುರಿತಾದ ಭಿತ್ತಿ ಪತ್ರಗಳನ್ನು ಹಿಡಿದು ಭಾರತ ಹಾಗೂ ಸೇನೆಯ ಪರವಾಗಿ ಘೋಷಣೆಗಳನ್ನು ಹೇಳುತ್ತಿದ್ದುದು ನೆರೆದ ಜನಸ್ತೋಮದಲ್ಲಿ ದೇಶಭಕ್ತಿಯನ್ನು ಜಾಗೃತ ಗೊಳಿಸುತ್ತಿತ್ತು. ಜನರೂ ಜೊತೆಯಲ್ಲಿ ಘೋಷಣೆಗಳನ್ನು ಕೂಗುತ್ತಿದ್ದುದು ವಿಶೇಷವಾಗಿತ್ತು.

ಅಂತಿಮವಾಗಿ ಭಾರತ ಸೈನ್ಯದ ಹಾಗೂ ಅವರ ಕುಟುಂಬದವರ ಸುರಕ್ಷತೆಗಾಗಿ ಪ್ರಾರ್ಥಿಸಿ ಮೆರವಣಿಗೆಯನ್ನು ಯಾತ್ರೆಯನ್ನು ಅಂತ್ಯಗೊಳಿಸಲಾಯಿತು.
