
ದೊಡ್ಡಬಳ್ಳಾಪುರ: ತಾಲ್ಲೂಕಿನ ನಾಗಸಂದ್ರದ ಬಸವರಾಜು ಅವರ ತೋಟದ ಮನೆ ಬಳಿ ಭಾನುವಾರ ಸಂಜೆ ಪ್ರತ್ಯಕ್ಷವಾಗಿರುವ ಕಪ್ಪು ಬಣ್ಣದ ಪುನುಗು ಬೆಕ್ಕು (Punugu cat) ಪತ್ತೆಯಾಗಿದೆ.

ಈ ಭಾಗದಲ್ಲಿ ಇದೇ ಪ್ರಥಮ ಬಾರಿ ಕಂಡು ಬಂದಿದೆ. ಗೂಗಲ್ನಲ್ಲಿ ಇದರ ಪೋಟೋ ಹಾಕಿ ನೋಡಿದರೆ ಇದು ಸಸ್ತನಿ ಜಾತಿಗೆ ಸೇರಿರುವ ಪುನುಗು ಬೆಕ್ಕು ಎಂದು ತೋರಿಸುತ್ತದೆ.
ರಾತ್ರಿ ವೇಳೆ ದಾರಿ ತಪ್ಪಿ ಮನೆ ಸಮೀಪದಲ್ಲಿನ ವಿದ್ಯುತ್ ದೀಪದ ಬೆಳಕು ಇರುವಲ್ಲಿ ಬಂದು ಅವಿತುಕೊಂಡಿತ್ತು. ಬೀದಿ ನಾಯಿಗಳ ಪಾಲಾಗದಂತೆ ರಕ್ಷಿಸಲಾಗಿದೆ.


