ಈ ಯುಗ ಖಂಡಿತಾ ಯುದ್ಧದ ಯುಗವಲ್ಲ: ಪ್ರಧಾನಿ ಮೋದಿ

This era is definitely not an era of war: PM Modi

ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ( Narendra Modi) ಅವರು ದೇಶವನ್ನುದ್ದೇಶಿಸಿ ಮಾತನಾಡಿದರು.

ಈ ವೇಳೆ ಪಹಲ್ಗಾಮ್ ದಾಳಿ ವೈಯಕ್ತಿಕವಾಗಿ ನನ್ನನ್ನು ಕಾಡುತ್ತಿತ್ತು. ಹೀಗಾಗಿ ಉಗ್ರರನ್ನು ಮಣ್ಣಲ್ಲೇ ಮಣ್ಣಾಗಿಸಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟೆವು. ಸೈನಿಕರ ಪರಾಕ್ರಮ ದೇಶದ ಸ್ತ್ರೀಯರಿಗೆ ಸಮರ್ಪಿತ ಎಂದು ಹೇಳಿದರು.

ಭಾರತೀಯ ಸೇನಾಪಡೆ, ಬೇಹುಗಾರಿಕಾ ತಂಡಕ್ಕೆ ಸಲ್ಯೂಟ್. ಪ್ರತೀ ಭಾರತೀಯನ ಪರವಾಗಿ ಸೈನಿಕರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ದೇಶದ ಸಾಮರ್ಥ್ಯ ಮತ್ತು ಸಂಯಮ ಎರಡನ್ನೂ ನೋಡಿದ್ದೇವೆ ಎಂದರು.

ಆಪರೇಷನ್ ಸಿಂಧೂರ ನ್ಯಾಯದ ಪ್ರತಿಜ್ಞೆ

ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ್ರೆ ಏನಾಗುತ್ತೆ ಅನ್ನೋದು ಗೊತ್ತಾಗುತ್ತದೆ. ಆಪರೇಷನ್ ಸಿಂಧೂರ ನ್ಯಾಯದ ಪ್ರತಿಜ್ಞೆ. ಉಗ್ರರು ಭಾರತ ಇಂಥಾ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೆ ಅಂತ ಯೋಚಿಸಿರಲಿಲ್ಲ. ಡ್ರೋನ್ ದಾಳಿಯಿಂದ ಉಗ್ರರ ಕಟ್ಟಡ ಅಲ್ಲ ಅವರ ಆತ್ಮವಿಶ್ವಾಸ ಕೂಡ ಕುಸಿದಿದೆ ಎಂದು ಹೇಳಿದರು.

ದೇಶ ಒಂದಾದರೆ ದೊಡ್ಡ ದೊಡ್ಡ ನಿರ್ಧಾರಗಳು ಸಾಧ್ಯ ಪಾಕಿಸ್ತಾನದ ಡೋನ್, ಮಿಸೈಲ್‌ಗಳನ್ನು ಹೊಡೆದುರುಳಿಸಿದ್ದನ್ನು ಇಡೀ ಜಗತ್ತು ಗಮನಿಸಿದೆ. ಪಾಕಿಸ್ತಾನವು ಭಾರತದ ಗಡಿ ಮೇಲೆ ದಾಳಿ ಮಾಡಿತ್ತು. ಆದರೆ ನಾವು ಪಾಕಿಸ್ತಾನದ ಹೃದಯಕ್ಕೆ ದಾಳಿ ಮಾಡಿದೆವು. ಪಾಕಿಸ್ತಾನಕ್ಕೆ ತುಂಬಾ ಹೆಮ್ಮೆಯಿದ್ದ ಏರ್‌ಬೇಸ್‌ಗಳನ್ನು ಧ್ವಂಸ ಮಾಡಿದೆವು. ಉಗ್ರರ ಕೇಂದ್ರ ಕಚೇರಿಗಳನ್ನು ಕೂಡ ಧ್ವಂಸ ಮಾಡಿದ್ದೇವೆ ಎಂದರು.

ಕದನ ವಿರಾಮ ಅಲ್ಪ ವಿರಾಮವಷ್ಟೇ

ಉದ್ವಿಗ್ನತೆ ಕಡಿಮೆ ಮಾಡಲು ಪಾಕಿಸ್ತಾನವು ಹಲವು ದೇಶಗಳ ಮುಂದೆ ಮನವಿ ಮಾಡಿಕೊಂಡಿತ್ತು. ಡಿಜಿಎಂಓಗಳ ಮೂಲಕ ಕದನ ವಿರಾಮಕ್ಕೆ ಬೇಡಿಕೊಂಡಿತ್ತು.

ಪಾಕಿಸ್ತಾನದ ಕಡೆಯಿಂದ ಮುಂದೇ ಯಾವುದೇ ಭಯೋತ್ಪಾದಕ ಘಟನೆ ನಡೆಯುವುದಿಲ್ಲ ಎಂದ ಕಾರಣ, ಭಾರತ ಇದನ್ನು ಗಮನಿಸಿತು. ಆದರೆ ಇದು ಕದನ ವಿರಾಮ ಅಲ್ಪ ವಿರಾಮವಷ್ಟೇ, ಮುಂದಿನ ದಿನಗಳಲ್ಲಿ ಪಾಕಿಸ್ತಾನದ ನಡೆಯನ್ನು ಗಮನಿಸುತ್ತೇವೆ.

ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ

ಅಣ್ವಸ್ತ್ರ ದಾಳಿಯ ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ. ಅಣ್ವಸ್ತ್ರದ ನೆರಳಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಸಹಿಸಲ್ಲ. ಭಯೋತ್ಪಾದನೆಯ ಬುಡಸಮೇತ ಕಿತ್ತು ಹಾಕುತ್ತೇವೆ. ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಗೆ ಸ್ಪಷ್ಟವಾದ ಸಾಕ್ಷಿ ಸಿಕ್ಕಿದೆ. ರಣರಂಗದಲ್ಲಿ ಪ್ರತಿ ಬಾರಿಯೂ ನಾವು ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ್ದೇವೆ. ಮೇಕ್ ಇನ್ ಇಂಡಿಯಾ ಶಕ್ತಿ ಇಡೀ ವಿಶ್ವಕ್ಕೆ ಅರಿವಾಗಿದೆ.

ಯುದ್ಧದ ಯುಗವಲ್ಲ

ಈ ಯುಗ ಖಂಡಿತಾ ಯುದ್ಧದ ಯುಗವಲ್ಲ. ಪಾಕಿಸ್ತಾನ ಸರ್ಕಾರ ಹಾಗೂ ಅಲ್ಲಿನ ಸೈನ್ಯ ಯಾವ ರೀತಿ ಉಗ್ರವಾದಕ್ಕೆ ಗೊಬ್ಬರ, ನೀರು ನೀಡುತ್ತಿದ್ದಾರೆ ಎಂಬುದು ಬಯಲಾಗಿದೆ.

ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಸಾಧ್ಯವಿಲ್ಲ

ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಸಾಧ್ಯವಿಲ್ಲ. ರಕ್ತ ಹಾಗೂ ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಭಯೋತ್ಪಾದನೆ ಬಿಟ್ಟು ಮಾತುಕತೆ ಬನ್ನಿ, ಶಾಂತಿಯ ಮಾರ್ಗ ಶಕ್ತಿಯೊಂದಿಗೆ ಮಾತ್ರ ಸಾಧ್ಯ.

ವಿಶ್ವ ಸಮುದಾಯಕ್ಕೆ ಹೇಳುವುದಾದರೆ ಮುಂದೆ ಪಾಕಿಸ್ತಾನದ ಜೊತೆ ಮಾತುಕತೆಯಾದ್ರೆ ಅದು ಉಗ್ರವಾದದ ವಿಚಾರ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.

ರಾಜಕೀಯ

ಜನರ ತೀರ್ಪನ್ನು ಅವಮಾನಿಸದೆ ವಿಜಯ್‌ಗೆ ಅವಕಾಶ ನೀಡಿ: ತಮಿಳುನಾಡು ರಾಜ್ಯಪಾಲರ ನಡೆಗೆ ಕಮಲ್ ಹಾಸನ್ ಗರಂ

ಜನರ ತೀರ್ಪನ್ನು ಅವಮಾನಿಸದೆ ವಿಜಯ್‌ಗೆ ಅವಕಾಶ ನೀಡಿ: ತಮಿಳುನಾಡು ರಾಜ್ಯಪಾಲರ ನಡೆಗೆ ಕಮಲ್

ತಮಿಳುನಾಡಿನಲ್ಲಿ ನೂತನ ಸರಕಾರ ರಚನೆಗೆ ವಿಜಯ್ (Vijay) ನೇತೃತ್ವದ ಟಿವಿಕೆ (TVK) ಭರದಿಂದ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಾದ ರಾಜೇಂದ್ರ ಮಾಡಿ ಸರಕಾರ ಅರ್ಲೇಕರ್‌ರನ್ನು ಭೇಟಿ ರಚನೆಗೆ ವಿಜಯ್ ಹಕ್ಕು ಮಂಡಿಸಿದ್ದಾರೆ. ಆದರೆ

[ccc_my_favorite_select_button post_id="121857"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ಬಕ್ರೀದ್; ಅಕ್ರಮ ಗೋವು ಸಾಗಣೆ / ಹತ್ಯೆ ಮಾಡಿದರೆ ಜೈಲು.. ಜಿಲ್ಲಾಧಿಕಾರಿ ವಾರ್ನಿಂಗ್

ಬಕ್ರೀದ್; ಅಕ್ರಮ ಗೋವು ಸಾಗಣೆ / ಹತ್ಯೆ ಮಾಡಿದರೆ ಜೈಲು.. ಜಿಲ್ಲಾಧಿಕಾರಿ ವಾರ್ನಿಂಗ್

ಗೋವುಗಳ ಅಕ್ರಮ ಸಾಗಣೆ ಅಥವಾ ಹತ್ಯೆ (illegal cow transport/slaughter) ಮಾಡಿದಲ್ಲಿ ಏಳು ವರ್ಷ ಜೈಲು, ಹಾಗೂ ರೂ 10 ಲಕ್ಷ ಗಳ ವರೆಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

[ccc_my_favorite_select_button post_id="121833"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]