ದೊಡ್ಡಬಳ್ಳಾಪುರ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ. ಇದರಲ್ಲಿ ದೊಡ್ಡಬಳ್ಳಾಪುರ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಎಂಎಸ್‌ವಿ ಪಬ್ಲಿಕ್ ಶಾಲೆ (MSV Public School) ನೂರಕ್ಕೆ ನೂರರ ಫಲಿತಾಂಶ ಪಡೆದಿದೆ.
ಈ ಮೂಲಕ ಎಂ ಎಸ್‌ವಿ ಪಬ್ಲಿಕ್ ಶಾಲೆಯು ಸತತ 14ನೇ ಬಾರಿಯೂ 100% ಫಲಿತಾಂಶ ಸಾಧಿಸಿದೆ.
ಈ ಬಾರಿ ಒಟ್ಟು 102 ವಿದ್ಯಾರ್ಥಿಗಳಲ್ಲಿ 43 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 36 ಮಕ್ಕಳು ಪ್ರಥಮ ಶ್ರೇಣಿಯಲ್ಲಿ 19 ಮಕ್ಕಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಮಕ್ಕಳ ಈ ಫಲಿತಾಂಶಕ್ಕೆ ಮತ್ತು ಅವರ ಸಾಧನೆಗೆ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಸುಬ್ರಮಣ್ಯ.ಎ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಈ ಸಾಧನೆ ನಮ್ಮ ಶಾಲೆಗೆ ಕೀರ್ತಿ ತಂದಿದೆ, ಮಕ್ಕಳಿಗೆ ಹಾಗೂ ವಿದ್ಯೆ ಕಲಿಸಿದ ಗುರು ವೃಂದಕ್ಕೆ ನನ್ನ ಮನಃಪೂರ್ವಕವಾದ ಅಭಿನಂದನೆಗಳು ಎಂದು ಮುಕ್ತ ಕಂಠದಿಂದ ಹಾರೈಸಿದರು.
ಇದೇ ವೇಳೆ ಮಕ್ಕಳ ಸಾಧನೆಗೆ ಶಾಲಾ ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್, ಟ್ರಸ್ಟಿ ನಯನಾ ಸ್ವರೂಪ್ ಹಾಗೂ ಪ್ರಾಂಶುಪಾಲರಾದ ರೆಮ್ಯ.ಬಿ.ವಿ ಹಾಗೂ ಸಿಬ್ಬಂದಿ ವರ್ಗ ಮುಕ್ತ ಮನಸ್ಸಿನಿಂದ ಅಭಿನಂದನೆಗಳನ್ನು ಸಲ್ಲಿಸಿದರು.
85% ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
ಗಿರೀಶ್ ಚಂದ್ರ.ಡಿ.ಕೆ – 97.00%
ಉಮ್ಮಡಿಶೆಟ್ಟಿ ಚೈತ್ರ – 96.00%
ಯಶ್ ರಮೇಶ್ ಎಕಬೋಟೆ – 94.40%
ಜೊಆನ್ನಾ.ಜೆ – 94.00%
ಮೋನಿಕಾ.ಹೆಚ್.ಎಸ್ – 93.40%
ಕೀರ್ತಿ.ಜಿ.ಎಸ್ – 90.40%.

ಲೇಖನಾ.ಆರ್ – 89.40%
ಯತಿನ್.ವಿ – 89.00%
ಸೌಮ್ಯ ರಂಜನ್ ಪಂಡಾ – 88.80%
ಅನನ್ಯ.ಎಂ – 88.60%
ಚೇತನ್ ಕುಮಾರ್. ಕೆ. ಪಿ – 88.20%
ಚಿನ್ಮಯಿ.ಎಂ – 87.60%
ನಂದನ್.ಆರ್ – 87.60%
ಜ಼ೈಬಾ ಅಫ್ರೀನ್ – 87.00%
ಯಶಸ್ವಿನಿ.ಎ.ಎಸ್ – 86.60%
ರಿತೀಶಾ.ಆರ್ – 86.20%
ಭುವನ್ ಗೌಡ.ಎ – 85.00%