ಬೆಂ.ಗ್ರಾ.ಜಿಲ್ಲೆ: ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಪದವಿಪೂರ್ವ ಕಾಲೇಜುಗಳಲ್ಲಿ 2025-26 ನೇ ಸಾಲಿನ ಪ್ರಥಮ ಪಿಯುಸಿ (PUC) ವಿಭಾಗದ ಪಿ ಸಿ ಎಮ್ ಬಿ ಮತ್ತು ಪಿ ಸಿ ಎಂ ಸಿ ಕೋರ್ಸುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕಾಲೇಜುಗಳು
ಮುರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು, ಜಡಿಗೇನಹಳ್ಳಿ, ಹೊಸಕೋಟೆ ತಾಲೂಕು. ಮುರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು, ಬಚ್ಚಹಳ್ಳಿ, ದೊಡ್ಡಬಳ್ಳಾಪುರ ತಾಲೂಕು. ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಬೊಮ್ಮವಾರ, ದೇವನಹಳ್ಳಿ ತಾಲೂಕು.
ಜಿಲ್ಲೆಯ ಎಲ್ಲಾ ವಸತಿ ಶಾಲಾ ಕಾಲೇಜುಗಳಲ್ಲಿ ಅರ್ಜಿಯನ್ನು ವಿತರಿಸಲಾಗುವುದು, ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನವಾಗಿರುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಶೇಕಡ 75% ರಷ್ಟು ಇತರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ 25% ಸ್ಥಾನಗಳನ್ನು ವರ್ಗವಾರು ಮೀಸಲಿರಿಸಲಾಗಿದೆ.
ವಸತಿ ಶಾಲೆಗಳಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಶೇಕಡ 50% ರಷ್ಟು ಹಾಗೂ ಇತರೆ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಶೇಕಡ 50% ಮೀಸಲಿರಿಸಲಾಗಿದೆ.
ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಊಟ ಮತ್ತು ವಸತಿ, ಲೇಖನ ಸಾಮಗ್ರಿ, ಪಠ್ಯಪುಸ್ತಕ, ಶೂ ಸಾಕ್ಸ್, ಸಮವಸ್ತ್ರ, ಸಿ.ಇ.ಟಿ ನೀಟ್ ಮತ್ತು ಜೆ.ಇ.ಇ ಪರೀಕ್ಷೆಗಳಿಗೆ ತರಬೇತಿ ಹಾಗೂ ಇತರೆ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಕಿರಣ್ ಕುಮಾರ್ ಪ್ರಾಂಶುಪಾಲರು 9110256424, ನಾಗರತ್ನಮ್ಮ.ಪಿ. ಪ್ರಾಂಶುಪಾಲರು 8105526933, ರೇಖಾ. ಎಸ್. ಪ್ರಾಂಶುಪಾಲರು 7349391473 ಹಾಗೂ ಉಪನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂ, 217. ಎರಡನೇ ಮಹಡಿ ಜಿಲ್ಲಾಡಳಿತ ಭವನ ಬೀರಸಂದ್ರ ಗ್ರಾಮ ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ 562110 ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಟಿ.ಎಲ್.ಎಸ್.ಪ್ರೇಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.