ದೊಡ್ಡಬಳ್ಳಾಪುರ: ಮಂಗಳವಾರ ಪ್ರಕಟವಾದ ಕೇಂದ್ರೀಯ ಪಠ್ಯಕ್ರಮ (CBSE) 10ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಗುರುತಿಸಿಕೊಂಡಿರುವ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆ ಶೇ.100 ಫಲಿತಾಂಶದ ಸಾಧನೆ ಮಾಡಿದೆ.
ಈ ಬಾರಿ ಒಟ್ಟು 115 ವಿದ್ಯಾರ್ಥಿಗಳಲ್ಲಿ 10 ಮಂದಿ ಅತ್ಯುನ್ನತ ಶ್ರೇಣಿ, 62 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 43 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರಲ್ಲಿ 10 ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 62 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 43 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು
ವೇಣುಪ್ರಿಯ ಎನ್.ಎಸ್ – ಶೇ.96.2, ಜೀವಿತ.ಆರ್ – ಶೇ.93.3, ಧನಿಕ.ಎ – ಶೇ.93, ಮನಸ್ವಿನಿ.ಎಸ್ – ಶೇ.89.7, ಕವನ.ಡಿ – ಶೆ.89.5, ವಿಸ್ಮಿತ.ಎಸ್ – ಶೇ.89, ಭವನ್.ಎಂ – ಶೇ.85, ಕಿಶೋರ್.ಎಸ್ – ಶೇ.85, ವೇಣು.ವೈ.ಎಂ – ಶೇ.85 ಮತ್ತು ಯದ್ನೇಶ್ ರಘುನಾಥ್ ಪಾಟೀಲ್ – ಶೇ.84.8 ಅಂಕಗಳನ್ನು ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಮೂರು ವಿದ್ಯಾರ್ಥಿಗಳು 100 ಅಂಕ
ಮನಸ್ವಿನಿ.ಎಸ್ – 100
ಕವನ.ಡಿ – 100
ವಿಸ್ಮಿತ.ಎಸ್ – 100
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಚ್.ನಾಗರಾಜ, ಉಪಾಧ್ಯಕ್ಷ ಜೆ.ರಾಜೇಂದ್ರ, ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಸಿಇಒ ಜೆ.ನಾಗೇಂದ್ರಸ್ವಾಮಿ, ಆಡಳಿತ ಮಂಡಳಿ ಸದಸ್ಯ ರಾಕೇಶ್, ಪ್ರಾಂಶುಪಾಲರಾದ ಧನಂಜಯ್ ಜಿ.ಎನ್., ಉಪಪ್ರಾಂಶುಪಾಲರಾದ ಲಕ್ಷ್ಮೀದೇವಿ.ಕೆ.ಎಸ್., ವ್ಯವಸ್ಥಾಪಕ ರವಿಕುಮಾರ್.ಎಸ್ ಮತ್ತಿತರರು ಅಭಿನಂದಿಸಿದ್ದಾರೆ.
ಅಲ್ಲದೆ ಕನ್ನಡದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಾಧನೆ ಕುರಿತು ಕನ್ನಡ ಭಾಷೆ ಶಿಕ್ಷಕಿ ಸ್ವರ್ಣ ಕೆ.ಎಲ್ ಸಂತಸ ವ್ಯಕ್ತಪಡಿಸಿದ್ದಾರೆ.