ಲಕ್ನೋ: ಶಿಸ್ತಿನ ಪಕ್ಷ ಬಿಜೆಪಿಯ (BJP) ವೃದ್ಧ ಮುಖಂಡನೋರ್ವ ಇಳಿವಯಸ್ಸಿನಲ್ಲೂ ತನ್ನ ಅಶ್ಲೀಲ ವರ್ತನೆಯಿಂದ ಇಡೀ ದೇಶಾದ್ಯಂತ ಸುದ್ದಿಯಲ್ಲಿದ್ದಾನೆ.
ಉತ್ತರ ಪ್ರದೇಶದ ಬಲ್ಲಿಯಾದ ಬಿಜೆಪಿ ನಾಯಕ ಬಬ್ಬನ್ ಸಿಂಗ್ ರಘುವಂಶಿ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಈ ವಿಡಿಯೋ ಸುಮಾರು 20 ರಿಂದ 25 ದಿನ ಹಳೆಯದು ಎಂದು ಹೇಳಲಾಗಿದ್ದು, ಈ ವಿಡಿಯೋವನ್ನು ಬಿಹಾರದ ವಿವಾಹ ಸಮಾರಂಭದಲ್ಲಿ ಸೆರೆಹಿಡಿಯಲಾಗಿದೆ.
ಈ ವಿಡಿಯೋದಲ್ಲಿ ಬಬ್ಬನ್ ಸಿಂಗ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಮಹಿಳಾ ನರ್ತಕಿಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದಾನೆ.
ಬಬ್ಬನ್ ಸಿಂಗ್ ರಘುವಂಶಿ ಮಹಿಳಾ ನರ್ತಕಿಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದಾರೆ. ಆಕೆಯ ಖಾಸಗಿ ಅಂಗಗಳನ್ನು ಮುಟ್ಟಿ ವಿಕೃತ ಆನಂದ ಪಡೆಯುತ್ತಿರುವುದು, ಆತನ ಬೆಂಬಲಿಗರು ಕೂಗುತ್ತಾ ಪ್ರೋತ್ಸಾಹಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋ ವೈರಲ್ ಆದ ನಂತರ, ಬಲ್ಲಿಯಾ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಬಬ್ಬನ್ ಸಿಂಗ್ ರಘುವಂಶಿ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ.
ಇನ್ನು ಬನ್ಸ್‌ದಿಹ್ ಶಾಸಕ ಕೇಕ್ಕಿ ಸಿಂಗ್ ಬೆಂಬಲಿಗರ ಪಿತೂರಿ ಎಂದು ಹೇಳಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಬಬ್ಬನ್ ಸಿಂಗ್ ರಘುವಂಶಿ ಉತ್ತರ ಪ್ರದೇಶ ಸರ್ಕಾರದ ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಸಂಬಂಧಿಯಾಗಿದ್ದು, ಬನ್ಸ್‌ದಿಹ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.
ಆದರೆ ಅಷ್ಟರಲ್ಲೇ ವಿಡಿಯೋ ವೈರಲ್ ಆಗಿದ್ದು, ಬಿಜೆಪಿಗೆ ಮುಜುಗರವನ್ನುಂಟು ಮಾಡಿದೆ.