ಬೆಂಗಳೂರು: ಪಾಕಿಸ್ತಾನದ ವಿರುದ್ಧ ಯಾವ ಕಾರಣಕ್ಕಾಗಿ ರಾತ್ರೋರಾತ್ರಿ ಕದನ ವಿರಾಮ (Ceasefire) ಮಾಡಿದ್ದೀರಿ?, ಟ್ರಂಪ್ ಕಾಶ್ಮೀರ ವಿಚಾರವಾಗಿ ಪದೇ ಪದೇ ಮಾತಾಡುತ್ತಿದ್ದರು ಪ್ರಧಾನಿ ಮೋದಿ (PM Modi) ಮಾತಾಡುತ್ತಿಲ್ಲ, ಬಿಜೆಪಿಯವರು (BJP) ತಿರಂಗಾ ಯಾತ್ರೆ ಮಾಡುವ ಬದಲು ಡೊನಾಲ್ಡ್ ಟ್ರಂಪ್ (Donald Trump) ಪರವಾಗಿ ಯಾತ್ರೆ ಮಾಡಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh lad) ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 22 ದಿನಗಳಿಂದ ಏನೆಲ್ಲಾ ನಡೆದಿದೆ ಎಂಬುದು ಜನರ ಮುಂದಿದೆ. ನಮ್ಮ ಭಾರತೀಯ ಸೇನೆ ದೇಶದ ಹಿತದೃಷ್ಟಿ ಕಾಪಾಡಿವೆ. ಪಾಕಿಸ್ತಾನದ ವಿರುದ್ಧ ನಮ್ಮ ಸೇನೆ ಮೇಲುಗೈ ಸಾಧಿಸಿದೆ. ಅದಕ್ಕಾಗಿ ಭಾರತೀಯ ಸೇನೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ದೇಶದ ಜನತೆಗೆ ಪ್ರಧಾನಿ ಮೋದಿ ಉತ್ತರ ಕೊಡಬೇಕು
ಉಗ್ರರ ಸಂಹಾರ ಅಂತೇಳಿ ಪಾಕಿಸ್ತಾನದ ವಿರುದ್ಧ ಯಾವ ಕಾರಣಕ್ಕಾಗಿ ಕದನ ವಿರಾಮ ಮಾಡಿದ್ದೀರಿ? ಈ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರ ಕೊಡಬೇಕು. ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷದ ಸಂದರ್ಭದಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮ ಘೋಷಣೆ ಮಾಡುತ್ತಾರೆ. ಎರಡು ದೇಶದ ನಡುವೆ ಟ್ರಂಪ್ ಹೇಳಿದ ರೀತಿಯಲ್ಲಿ ವ್ಯಾಪಾರಕ್ಕಾಗಿ ಯುದ್ಧ ನಿಲ್ಲಿಸಲಾಯ್ತೇ?.
ಹಾಗಾದರೆ ಇದು ರಾಜಕೀಯಕ್ಕೆ ಮಾಡಿದ ಯುದ್ಧವೇ? ಅಥವಾ ನಮ್ಮ ದೇಶ ನಡೆಸುತ್ತಿರುವುದು ಟ್ರಂಪ್ ಅವರಾ? ಎಂದು ಪ್ರಶ್ನಿಸಿದರು.
ಏಪ್ರಿಲ್ 22 ರಂದು ಪ್ರಧಾನಿ ನರೇಂದ್ರ ಮೋದಿ ಸೌದಿಯಿಂದ ವಾಪಸ್ ಬರ್ತಾರೆ. ಆದರೆ ಪತ್ರಿಕಾಗೋಷ್ಠಿ ನಡೆಸಲ್ಲ, ಬದಲಾಗಿ ಬಿಹಾರ ಚುನಾವಣಾ ಪ್ರಚಾರಕ್ಕೆ ಹೋಗ್ತಾರೆ. ಸರ್ವ ಪಕ್ಷ ಸಭೆಗೂ ಗೈರಾಗಿದ್ದಾರೆ. ನಾನು ಸುಪ್ರೀಂ, ಯಾವ ಸಭೆಗೆ ಭಾಗಿಯಾಗಲ್ಲ ಎಂಬ ಸಂದೇಶವೇ ಯಾವ ಸಂದೇಶವನ್ನು ಪ್ರಧಾನಿ ಮೋದಿ ಕೊಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.
11 ವರ್ಷದಿಂದ ಮೋದಿ ಕ್ಯಾಮೆರಾ ಬಿಟ್ರೆ ನ್ಯೂಸ್ ಚಾನಲ್ ಬೇರೆ ತೋರಿಸಲ್ಲ, ರೆಕಾರ್ಡ್ ಆಗಿರುವ ವಿಡಿಯೋವನ್ನು ಪ್ರಸಾರ ಮಾಡಲಾಗ್ತಿದೆ. ಅದನ್ನು ದೇಶದ ಜನರು ನೋಡಬೇಕಾದ ಸ್ಥಿತಿ ಇದೆ. ಕೋವಿಡಲ್ಲೂ ಮೋದಿ ವಿಡಿಯೋ, ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಬಂದ್ರೂ ಮೋದಿ ವಿಡಿಯೋ.
ಉಗ್ರರ ದಾಳಿ ಕುರಿತು ಇಂಟಲಿಜೆನ್ಸ್ ಮಾಹಿತಿ
ಕೇಂದ್ರ ಸರ್ಕಾರದಿಂದ ಯಾವುದೇ ತಪ್ಪು ಆಗಿಲ್ಲ ಎಂದು ಬಿಂಬಿಸುವುದೇ ಕೆಲಸವಾಗಿದೆ. ಹಾಗಾದರೆ ಭದ್ರತಾ ಲೋಪ ಆಗಿದ್ದೇನು..? ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆಯುತ್ತೆ ಎಂದು ಇಂಟಲಿಜೆನ್ಸ್ ವರದಿ ಇದೆ. ಮತ್ತೆ ಸರ್ಕಾರ ಯಾಕ್ ಸುಮ್ನೆ ಕೂತ್ಕೊಂಡ್ ಇತ್ತು. ಇದರ ಬಗ್ಗೆ ಯಾರ್ ಮಾತನಾಡಬೇಕು..? ಎಲ್ ಚರ್ಚೆ ಆಗಬೇಕು.
ಪುಲ್ವಾಮ ದಾಳಿ ಕೂಡ ಇದೇ ರೀತಿ ಆಯ್ತು. ಮತ್ತೆ ಇದು ಪ್ರಚಾರಕ್ಕೆ ನಡೆಸಿದ ಯುದ್ಧವೆ..? ರಾಜಕೀಯಕ್ಕಾಗಿ ನಡೆಸಿದ ಯುದ್ದವೇ..? ಇದಕ್ಕೆ ಸ್ಪಷ್ಟೀಕರಣ ನೀಡಬೇಕಲ್ವಾ.. ಇಡೀ ದೇಶದ ಜನತೆಗೆ ಉತ್ತರ ಕೊಡಬೇಕಿದೆ.
ಬಿಜೆಪಿ ಯುವಕರಲ್ಲಿ ಮನವಿ
ಒಂದು ದಿನ ಮುಂಚೆ ರೆಕಾರ್ಡ್ ಮಾಡಿರುವ ವಿಡಿಯೋ ನೋಡಬೇಕಾದ ಅನಿವಾರ್ಯತೆ ದೇಶಕ್ಕೆ ಬಂದಿದೆ, ಬಿಜೆಪಿ ಯುವಕರಲ್ಲಿ ಮನವಿ ಮಾಡ್ತಿನಿ, ಬಿಜೆಪಿ ಮುಖಂಡರನ್ನು ಪ್ರಶ್ನೆ ಮಾಡಿ, ಈ ದೇಶದ ಪ್ರಧಾನಮಂತ್ರಿ ಅವರು 11 ವರ್ಷದ ಆದ್ರೂ ಒಂದ್ ಪ್ರಸ್ಮೀಟ್ ಮಾಡಲ್ಲ. 7 ತಾರೀಖು ರೆಕಾರ್ಡ್ ಆಗಿರೋದು, 8 ನೇ ತಾರೀಖಿನಂದು ಪ್ರಸಾರ ಆಗುತ್ತೆ. ಅದೇ ಟೈಮಲ್ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡುತ್ತೆ. ಮತ್ತೆ ರಾತ್ರೋರಾತ್ರಿ ಯಾವ ಕಾರಣಕ್ಕೆ ಕದನವಿರಾಮ ಘೋಷಣೆ ಆಯ್ತು ಅಂತ ಬಿಜೆಪಿ ಯುವಕರು ದೇಶಕ್ಕಾಗಿ ಬಿಜೆಪಿ ಮುಖಂಡರನ್ನು ಪ್ರಶ್ನೆ ಮಾಡಿ.
ಏನ್ ಬರೀ ಭಾಷಣಗಳು ಬಿಹಾರ ಎಲೆಕ್ಷನ್ಗೆ ಹೋಗಿ ಪಾಕಿಸ್ತಾನವನ್ನು ಮುಗಿಸಿ ಬಿಡ್ತಿನಿ ಅಂದ್ರೂ, ಇವತ್ತಿಗೂ ಅದೇ ಹೇಳ್ತಾ ಇದ್ದಾರೆ.
ರಷ್ಯಾ ಉಕ್ರೇನ್ ಯುದ್ದವನ್ನು ಪ್ರಧಾನಿ ನರೇಂದ್ರ ಮೋದಿ ನಿಲ್ಲಿಸಿದ್ದರು ಎಂದು ಹೇಳಲಾಗ್ತಿದೆ. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ಟ್ರಂಪ್ ನಿಲ್ಲಿಸಿದ್ದಲ್ವಾ? ಪಹಲ್ಗಾಮ್ ಭಯೋತ್ಪಾದಕರು ಸಿಕ್ಕಿದ್ರಾ? ವ್ಯಾಪಾರಕ್ಕಾಗಿ ಕದನ ವಿರಾಮ ಮಾಡಲಾಯ್ತೇ? ಪಾಕಿಸ್ತಾನ ಮತ್ತು ಭಾರತವನ್ನು ಟ್ರಂಪ್ ಸಮಾನವಾಗಿ ನೋಡಿಕೊಳ್ಳಲು ಅವಕಾಶ ಸಿಕ್ಕಂತಾಯಿತು.
ಪಾಕಿಸ್ತಾನಕ್ಕೆ ನೀಡಲಾದ ಐಎಂಎ ಫಂಡಿಂಗ್ ಅಮೇರಿಕಾದ ಪಾಲು ಹೆಚ್ಚಾಗಿದೆ. ಮತ್ತೆ ಪ್ರಧಾನಿ ಮೋದಿ ಅಮೇರಿಕಾದ ಚುನಾವಣೆಯಲ್ಲಿ ಟ್ರಂಪ್ ಪರ ಪ್ರಚಾರ ಮಾಡಿದ್ದಾರೆ. ಜಾಸ್ತಿ ಪ್ರೆಂಡ್ ಅಲ್ವಾ.. ಮಾತಾಡೋಕ್ ತುಂಬಾ ಇದೆ. ಈ ಎಲ್ಲಾ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಈಗಾಗಲೇ ಹೇಳಿದ್ದಾರೆ ವಿಶೇಷ ಅಧಿವೇಶನನ್ನು ಕರೆಯಿರಿ ಎಂದು ಆಗ್ರಹಿಸಿದರು.
ಸೇನಾ ಮುಖ್ಯಸ್ಥರಾದ ಸೋಫಿಯಾ ಖುರೇಷಿ ವಿರುದ್ಧ ಬಿಜೆಪಿ ಮಧ್ಯ ಪ್ರದೇಶದ ನಾಯಕ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿ, ಇದು ನಾಚಿಕೆಗೇಡುತನ ಇದರ ಬಗ್ಗೆ ಯಾರೂ ಟ್ವೀಟ್ ಮಾಡುವುದಿಲ್ಲ.
ಮಧ್ಯ ಪ್ರದೇಶ ಹೈಕೋರ್ಟ್ ಇದೀಗ ಎಫ್ ಐ ಆರ್ ಮಾಡಲು ಸೂಚಿಸಿದೆ. ಸೋಫಿಯಾ ಖುರೇಷಿ ಈ ದೇಶವನ್ನು ಪ್ರತಿನಿಧಿಸುತ್ತಾರೆ. ಏನು ಬೇಕಾದರೂ ಮಾತನಾಡಬಹುದು ಈ ದೇಶದಲ್ಲಿ ಎಂಬಂತಾಗಿದೆ.