ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar’s) ಅವರ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ಮೈಸೂರು ಮೃಗಲಯದಲ್ಲಿ ಆಫ್ರಿಕನ್ ಸಿಂಹವನ್ನು ದತ್ತು ಪಡೆಯಲಾಗಿದೆ.
ಮಂಜುನಾಥ್ ಗೌಡ ಅವರ ನೇತೃತ್ವದ ಪ್ರದೇಶ ಯುವ ಕಾಂಗ್ರೆಸ್ ಒಂದು ವರ್ಷಕ್ಕೆ ದತ್ತು ಪಡೆದಿದ್ದು, ಪ್ರತಿ ವರ್ಷ ದತ್ತು ನವೀಕರಣಕ್ಕೆ ನಿರ್ಧರಿಸಿದೆ. ವರ್ಷಕ್ಕೆ ದತ್ತು ಮೊತ್ತ 2 ಲಕ್ಷ ರೂ ಎಂದು ತಿಳಿದು ಬಂದಿದೆ.
ಕಬಿನಿಯಲ್ಲಿ ಸಂಚಾರ
ಇನ್ನೂ ಈ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಕಬಿನಿಯಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುವ ಮೂಲಕ ಆಚರಿಸಿದ್ದಾರೆ.
In a world that rushes, the wild whispers – and I listened.
— DK Shivakumar (@DKShivakumar) May 15, 2025
Glimpses from the thrilling experience at Kabini on my 63rd birthday. Truly unforgettable!#ನಮ್ಮಕಬಿನಿ #BirthdayInTheWild pic.twitter.com/NvVC9Gulfy
ಪ್ರಕೃತಿಯೊಂದಿಗೆ ಒಂದಾದ ಭಾವ, ಕಬಿನಿಯ ಸೌಂದರ್ಯ, ವನ್ಯಸಂಪತ್ತನ್ನು ಕಣ್ತುಂಬಿಕೊಂಡು, ಪ್ರಶಾಂತವಾದ ಜಗತ್ತಿಗೆ ಕಾಲಿಟ್ಟ ಅನುಭವವಾಯಿತು ಎಂದವರು ಹೇಳಿದ್ದಾರೆ.
ಜನ್ಮದಿನದ ಆಚರಣೆ ಬೇಡ
ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಸಂದರ್ಭವಾದ ಕಾರಣ ಇಂದು ಯಾರೂ ಅವರ ಜನ್ಮದಿನವನ್ನು ಆಚರಣೆ ಮಾಡುವುದು ಬೇಡ ಎಂದು ಡಿಕೆ ಶಿವಕುಮಾರ್ ವಿನಂತಿ ಮಾಡಿದ್ದರು.