ಬೆಂಗಳೂರು: ಗ್ರೇಟರ್ ಬೆಂಗಳೂರು (Greater Bangalore) ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿದ್ದು, ಇಂದಿನಿಂದ ಜಾರಿಯಾಗಲಿದೆ. ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಇನ್ನು ಮುಂದೆ ಬೆಂಗಳೂರು – ಗ್ರೇಟರ್ ಬೆಂಗಳೂರು ಆಗಲಿದೆ. ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಕನಿಷ್ಠ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆಯಿದೆ. ರಾಜ್ಯದ ಮುಖ್ಯಮಂತ್ರಿಗಳು ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
JDS ಟ್ವಿಟ್ ದಾಳಿ
ಇನ್ನೂ ಬಿಬಿಎಂಪಿ ಗ್ರೇಟರ್ ಬೆಂಗಳೂರಾಗಿರುವುದಕ್ಕೆ, ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದ್ದು, ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದೆ.
ಟ್ವಿಟ್ ಮಾಡಿರುವ ಜೆಡಿಎಸ್ (JDS) ಅಯೋಗ್ಯರು ಹೆಸರನ್ನಷ್ಟೇ ಬದಲಿಸಬಲ್ಲರು, ಮೇರು ನಾಯಕರು ಇತಿಹಾಸವನ್ನು ಸೃಷ್ಟಿಸಿರುತ್ತಾರೆ.
ಅಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಮಾಡಿದ್ದು ಹೆಚ್‌ಡಿ ಕುಮಾರಸ್ವಾಮಿ ಅವರು..
ರಾಮನಗರ ಜಿಲ್ಲೆ ಮಾಡಿದ್ದು – ಹೆಚ್.ಡಿ. ಕುಮಾರಸ್ವಾಮಿ ಅವರು..
ದ್ವೇಷ ರಾಜಕಾರಣವನ್ನೇ ಉಸಿರಾಗಿಸಿಕೊಂಡಿರುವ ಡಿಕೆ ಶಿವಕುಮಾರ್ ಅಭಿವೃದ್ಧಿ ಬಿಟ್ಟು ಮಾಡುತ್ತಿರುವುದು ಬರೀ ಹೆಸರು ಬದಲಾವಣೆ ಮಾಡಿದ್ದಾರೆ.
ಅಯೋಗ್ಯರು ಹೆಸರನ್ನಷ್ಟೇ ಬದಲಿಸಬಲ್ಲರು, ಮೇರು ನಾಯಕರು ಇತಿಹಾಸವನ್ನು ಸೃಷ್ಟಿಸಿರುತ್ತಾರೆ.
— Janata Dal Secular (@JanataDal_S) May 15, 2025
ಅಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಮಾಡಿದ್ದು ಶ್ರೀ @hd_kumaraswamy ಅವರು..
ರಾಮನಗರ ಜಿಲ್ಲೆ ಮಾಡಿದ್ದು – ಹೆಚ್.ಡಿ. ಕುಮಾರಸ್ವಾಮಿ ಅವರು
ದ್ವೇಷ ರಾಜಕಾರಣವನ್ನೇ ಉಸಿರಾಗಿಸಿಕೊಂಡಿರುವ @DKShivakumar ಅಭಿವೃದ್ಧಿ ಬಿಟ್ಟು… pic.twitter.com/Cf2Drfyen2
ಅಭಿವೃದ್ಧಿಯಲ್ಲಿ ಹಿಂದೆ ಹಿಂದೆ, ಹೆಸರು ಬದಲಿಸುವುದರಲ್ಲಿ ಮುಂದೆ ಮುಂದೆ ಇದ್ದಾರೆ ಡಿಕೆಶಿ.
“ಬೆಂಗಳೂರು” ಹೆಸರನ್ನೇ ಬಂಡವಾಳ ಮಾಡಿಕೊಂಡಿರುವ ಡಿಕೆಶಿ ತನ್ನ ಆಸ್ತಿಯನ್ನು ದಿನೇ ದಿನೇ ದುಪ್ಪಟ್ಟು ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.