ಅಬುದಾಬಿ: ಮೂರು ದೇಶಗಳ ಗಲ್ಫ್ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಧಾನಿ ಅಬುಧಾಬಿಗೆ ಆಗಮಿಸಿದ ವಿಶಿಷ್ಟ ಶೈಲಿಯ ಸಾಂಪ್ರದಾಯಿಕ ಸ್ವಾಗತ ನೀಡಲಾಗಿದೆ.
ಅಬುಧಾಬಿ ವಿಮಾನ ನಿಲ್ದಾಣದ ಅಧ್ಯಕ್ಷೀಯ ಟರ್ಮಿನಲ್‌ನಲ್ಲಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್‌ರವು ಟ್ರಂಪ್‌ಗೆ ಸ್ವಾಗತಿಸಿದರು.
ಇದಕ್ಕೂ ಮೊದಲು, ಟ್ರಂಪ್ ಕತಾರ್‌ನಿಂದ ಯುಎಇಗೆ ತೆರಳುವಾಗ ಯುಎಇಯ ಯುದ್ಧ ವಿಮಾನಗಳು ಎಸ್ಕಾರ್ಟ್ ನೀಡಿವೆ.
2008 ರಲ್ಲಿ ಜಾರ್ಜ್ ಡಬ್ಲ್ಯೂ ಬುಷ್ ನಂತರ, ಯುಎಇಗೆ ಭೇಟಿ ನೀಡಿದ ಮೊದಲ ಅಧ್ಯಕ್ಷ ಎಂಬ ಖ್ಯಾತಿಗೆ ಡೋನಾಲ್ಡ್ ಟ್ರಂಪ್ ಪಾತ್ರರಾಗಿದ್ದಾರೆ.
ಇನ್ನೂ ಟ್ರಂಪ್ಗೆ ಸ್ವಾಗತ ನೀಡಿರುವ ವಿಡಿಯೋ ಭಾರತದಲ್ಲಿ ವೈರಲ್ ಆಗಿದ್ದು, ಮಹಿಳೆಯರು ಉದ್ದನೆಯ ಕೂದಲನ್ನು ತಿರುಗಿಸುವ ಮೂಲಕ ಸ್ವಾಗತ ಕೋರಿರುವುದು ಟ್ರೋಲ್‌ಗೆ ಒಳಗಾಗಿದೆ.