ದೊಡ್ಡಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೇ ತನ್ನ ಮಗನಿಗೆ ನಾಡ ಬಂದೂಕಿನಿಂದ (SBML ಸಿಂಗಲ್ ಬ್ಯಾರಲ್ ಮಜಲ್ ಲೋಡ್) ಗುಂಡುಹಾರಿಸಿರುವ (shoots) ಘಟನೆ ತಾಲೂಕಿನ ಮರಳೇನಹಳ್ಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಗನನ್ನು ಹರೀಶ್ (28 ವರ್ಷ) ಎನ್ನಲಾಗಿದ್ದು, ಗುಂಡು ಹಾರಿಸಿರುವ ತಂದೆಯನ್ನು ಸುರೇಶ್ ( 59 ವರ್ಷ) ಎಂದು ಗುರುತಿಸಲಾಗಿದೆ.
ತಲೆ ಹಾಗೂ ಮುಖಕ್ಕೆ ತೀರ್ವ ಸ್ವರೂಪದ ಗಾಯವಾಗಿರುವ ಹರೀಶ್‌ನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳಿಸಲಾಗಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ. ಆರೋಪಿ ಸುರೇಶನನ್ನ ವಶಕ್ಕೆ ಪಡೆದಿದ್ದಾರೆ.
ಕೌಟುಂಬಿಕ ವಿಚಾರವಾಗಿ ತಂದೆ ಮಗನ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎಂದು ಮೂಲಗಳು ತಿಳಿಸಿದ್ದು, ನಿನ್ನೆ ರಾತ್ರಿ ಜಗಳ ತಾರರಕ್ಕೇರಿ ತಂದೆ ಸುರೇಶ್ ಮಗನ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.