ದೊಡ್ಡಬಳ್ಳಾಪುರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವದಂತಿ.. ತುರ್ತು ಸಭೆ ನಡೆಸಿದ ಪೊಲೀಸರು

Rumors of illegal Bangladeshi immigrants in Doddaballapur... Police hold emergency meeting

ದೊಡ್ಡಬಳ್ಳಾಪುರ; ವಿವಿಧೆಡೆ ಅಕ್ರಮ ಬಾಂಗ್ಲಾ ವಲಸಿಗರು (illegal Bangladeshi immigrants) ನೆಲೆಸಿದ್ದಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿನ ವದಂತಿ ಕುರಿತಾದ ವರದಿ ಹಿನ್ನೆಲೆಯಲ್ಲಿ ಇಂದು ನಗರ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರು ನೇಕಾರ ಮುಖಂಡರ ತುರ್ತು ಸಭೆ ನಡೆಸಿದ್ದಾರೆ.

ಈ ವೇಳೆ ಸಾಮಾಜಿಕ ಜಾಲತಾಣದಲ್ಲಿನ ಚರ್ಚೆಯ ಕುರಿತು ಸಭೆಯಲ್ಲಿ ಚರ್ಚಿಸಿದ್ದು, ನೇಕಾರಿಕೆ ಕಾರ್ಯಕ್ಕೆ ನೇಮಕವಾಗಿರುವ ಹೊರ ರಾಜ್ಯದವರ ದಾಖಲೆ ಸಂಗ್ರಹಿಸಿ ಪೊಲೀಸ್ ಠಾಣೆ ನೀಡುವಂತೆ ಸೂಚನೆ ನೀಡಿದ್ದಾರೆ.

ಅಲ್ಲದೆ ಯಾವುದೇ ಅಹಿತಕರ ಘಟನೆ, ಚಲನವಲನ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ.

ಇನ್ನೂ ನೇಕಾರ ಸಂಘಟನೆಗಳ ಮುಖಂಡರು ಪೊಲೀಸರು ಸೂಚನೆಗೆ ಸಹಮತ ನೀಡಿದ್ದು, ಭಾರತದೇ ಇತರೆ ರಾಜ್ಯದವರು ಹಲವು ವರ್ಷಗಳಿಂದ ದೊಡ್ಡಬಳ್ಳಾಪುರದ ನೇಕಾರಿಕೆ ಕೆಲಸ ಮಾಡುತ್ತಿದ್ದು ಯಾವುದೇ ಅನುಮಾನಸ್ಪದವಾಗಿ, ಕಾನೂನು ಉಲ್ಲಂಘನೆಯಂತ ಘಟನೆ ನಡೆದಿಲ್ಲ.

ಈ ಕುರಿತಂತೆ ಕೆಲವರು ಕಪೋಕಲ್ಪಿತವಾಗಿ ವದಂತಿ ಹರಡುತ್ತಿದ್ದಾರೆ. ಆ ರೀತಿ ಆರೋಪ ಮಾಡುವ ಮುನ್ನ ದಾಖಲೆ ಪರಿಶೀಲನೆ ಮಾಡಬೇಕು. ಇಲ್ಲವೇ ಪೊಲೀಸರಿಗೆ ಮಾಹಿತಿ ನೀಡಬೇಕು, ಸುಳ್ಳು ಆರೋಪ ಇರಬಹುದೆಂದು ಬೇಸರ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಈ ವೇಳೆಗೆ ನೇಕಾರ ಸಂಘಟನೆ ಮುಖಂಡರಾದ ಹೇಮಂತ್ ರಾಜು, ವೆಂಕಟೇಶ್ ಸೇರಿದಂತೆ ಅನೇಕರು ಇದ್ದರು.

ಹಿನ್ನೆಲೆ

ನಿನ್ನೆ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣಯ್ಯ (ರಾಂ ಕಿಟ್ಟಿ) ಅವರು ಫೇಸ್‌ಬುಕ್‌ ಖಾತೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ವ್ಯಾಪಕವಾಗಿ ಹರಡಿಕೊಂಡಿದ್ದಾರೆ. ಇದು ಮುಂದೆ ಅತೀ ದೊಡ್ಡ ಸಮಸ್ಯೆಯಾದಿತು ಎಂದು ಕಳವಳ ವ್ಯಕ್ತಪಡಿಸಿ, ಬರೆದುಕೊಂಡಿದ್ದರು‌

ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ದೊಡ್ಡಬಳ್ಳಾಪುರ ನಗರದ ಕಾಲೇಜು ರಸ್ತೆಗಳಲ್ಲಿ, ಹೋಟೆಲ್ ಬಳಿ, ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಕೈಗಾರಿಕಾ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಓಡಾಡುತ್ತಿರುತ್ತಾರೆ. ಇದರಿಂದ ಆತಂಕಕ್ಕೆ ಕಾರಣವಾಗುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಕುರಿತಂತೆ ಹರಿತಲೇಖನಿ ವರದಿ ಮಾಡಿದ್ದು, ಅನೇಕ ಓದುಗರು ಪ್ರತಿಕ್ರಿಯೆ ನೀಡಿದ್ದಾರೆ.

ಜಯರಾಮು ನಂದಿನಿ

ಯಾವುದೇ ಹೋಟೆಲ್ ಗಳಿಗೆ ಹೋದರು ಇವರೇ ಮತ್ತು ಸಂಜೆ 5-10 ಜನ gumpu ಗುಂಪು ಓಡಾಟ ಹೆಚ್ಚಾಗಿದೆ.

Nagarjudg Dn

ಮೊದಲಿಗೇ ಇಂಥವರಿಗೆ ಇರಲು ಮನೆ ಬಾಡಿಗೆ ಕೊಡುವುದು ಕೆಲಸ ಕೊಡುವುದು ನಾವೆ ತಾನೆ, ನೇಕಾರರ ಬದುಕಲ್ಲಿ ಇವರುಗಳು ಅತಂತ್ರ ಪರಿಸ್ಥಿತಿ ಉಂಟು ಮಾಡುತ್ತಿದಾರೆ. ಮತ್ತೆ ನಮ್ಮ ಕಾರ್ಖಾನೆಯಲ್ಲಿ ಸಹ ಇವರೆ ತುಂಬಿ ಹೋಗಿದಾರೆ.

ಮತ್ತೆ ನಮ್ಮ 8 ವಾರ್ಡಲ್ಲಿ ಬಹುತೇಕ ಇಲ್ಲಿ ವಾಸವಾಗಿದ್ದಾರೆ. ಇಂಥವರಿಗೆ ಮನೆ ಬಾಡಿಗೆ ಕೊಡುತ್ತಿರುವುದು ದುರಂತಕ್ಕೆ ಕಾರಣವಾಗುತ್ತೆ, ನಮ್ಮ ವಾರ್ಡಲ್ಲಿ ಒಂದು ಕುಟುಂಬಕ್ಕೆ ಸೇರಿದವರ ವ್ಯಾಪ್ತಿಗೇ ಅಂದಾಜು 80 ,90 ಮನೆಗಳನ್ನ ಬಿಹಾರ, ಅಸ್ಸಾಂನಿಂದ ಬಂದವರಿಗೆ ಬಾಡಿಗೆ ಕೊಟ್ಟಿದಾರೆ. ಕಾರಣ ಕೇಳಿದಷ್ಟು ಬಾಡಿಗೆ ಬರುತ್ತೆ, ಆದಾಯ ಆಗುತ್ತೆ ಅಂತ.

ಮೊದಲಿಗೆ 31 ವಾರ್ಡ್ ಗಳಲ್ಲಿ ಅತಿ ಹೆಚ್ಚು ಯಾರು ಬಾಡಿಗೆ ಮನೆಗಳನ್ನ ಕೊಟ್ಟಿದಾರೆ ಅನ್ನುವುದು ಪತ್ತೆ ಮಾಡಿ ಅವರ ಮೇಲೆ ಕ್ರಮ‌ ತಗೊಬೇಕು. ಮೊದಲಿಗೆ 8ನೇ ವಾರ್ಡಲ್ಲಿ ಅತಿ ಹೆಚ್ಚು ಮನೆ ಬಾಡಿಗೆ ಕೊಟ್ಟಿರುವವರು ಯಾರು ಅಂತ ತಿಳಿದುಕೊಂಡು ಕ್ರಮ ಜರುಗಿಸಿ ಇಂಥವರಿಂದಲೇ ಸ್ಥಳಿಯರಿಗೆ ಅತಂತ್ರ ಸ್ಥಿತಿ ಊಂಟಾಗಿರುವುದು.

Ramachandra Rao

ಬರಿ ಚರ್ಚೆ ಆದರೆ ಸಾಲದು ಕಡಿಯೋಣ ಹಾಕಲೇಬೇಕಾಗಿದೆ. ಅನಿವಾರ್ಯ ಕೂಡ ಮತ್ತೊಂದು ದಿನ ಸ್ಥಳೀಯರಿಗೆ ಉದ್ಯೋಗ ಸಿಗದು.

Preetham Roy

ಈಗಾಲೇ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ. ಯಾವುದೇ ಕಂಪನಿ, ಕಾರ್ಖಾನೆಗಳಿಗೆ ಓದರೆ ಅವರೆ ತುಂಬಿದ್ದಾರೆ.

ಕನ್ನಡದಲ್ಲಿ ಮಾತನಾಡಿದರೆ ಅರ್ಥವಾಗದೆ ಕ್ಯಾ ಅಂತಾರೆ. ನಾವು ನಮ್ಮ ರಾಜ್ಯದಲ್ಲಿ ಇದ್ದೇವೋ..? ಯಾವ ರಾಜ್ಯದಲ್ಲಿ ಇದ್ದೇವೆ ಅನ್ನೋದೇ ಗೊತ್ತಾಗಲ್ಲ. ಮುಂದೆ ದೊಡ್ಡಬಳ್ಳಾಪುರದಲ್ಲಿ ಕನ್ನಡಿಗರ ಹುಡುಕಬೇಕಾದ ಪರಿಸ್ಥಿತಿ ದೂರ ಇಲ್ಲ.

Girija Giri

ಸಂಘ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕು
ಇಲ್ಲದೆ ಹೋದರೆ ಸ್ಥಳೀಯ ಜನರಿಗೆ ಆಪಾಯ.

Chandrasekhar DM Chandru

ಇವರು ಯಾವ ರಾಜ್ಯದವರು ಎಂದು ಯಾರಿಗೂ ತಿಳಿಯುವುದಿಲ್ಲ. ದೊಡ್ಡಬಳ್ಳಾಪುರದಲ್ಲಿ ನೇಕಾರಿಕೆಯು ಮುಖ್ಯ ಕಸಬಾಗಿದ್ದು, ಇದರ ಸಲುವಾಗಿ ಬಂದು ಅನ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬಹುದು. ಇವರು ದೊಡ್ಡಬಳ್ಳಾಪುರಕ್ಕೆ ಬಂದ ಮೇಲೆ ದೊಡ್ಡಬಳ್ಳಾಪುರದ ಸ್ಥಳೀಯ ನೇಕಾರರಿಗೆ ಅವಕಾಶವಿಲ್ಲದಂತೆ ಆಗಿದೆ. ಹಾಗೂ ಕಡಿಮೆ ಕೂಲಿಗೆ ಮಗ್ಗ ಬಿಡುವುದರಿಂದ ಇಲ್ಲಿನ ಸ್ಥಳೀಯರಿಗೂ ತುಂಬಾ ತೊಂದರೆ ಆಗುತ್ತಿದೆ.

ಅರುಣ್ ದಾದಾ

ಕಾಲೇಜ್ ರಸ್ತೆ.. ಇಸ್ಲಾಂಪುರ ರಸ್ತೆಯಲ್ಲಿ ಇವರದೇ ಆಟಾಟೋಪ.. ಇಲ್ಲಿನ ಸ್ಥಳೀಯ ಒನರ್ ಗಳು ಹಿಂದೆ ಮುಂದು ನೋಡದೆ ಅವರನ್ನು ಕೆಲಸಕ್ಕೆ ಇಟ್ಟುಕೊಂಡು ಕಡಿಮೆ ಸಂಬಳ ಕೊಟ್ಟು ದುಡಿಸಿಕೊಳ್ಳುತ್ತಿದ್ದಾರೆ. ಏನಾದರೂ ಅಚಾತುರ್ಯ ನಡೆದು ಕುತ್ತಿಗೆಗೆ ಬರುವವರೇಗೂ ಸ್ಥಳೀಯರು ಎಚ್ಚೆತ್ತುಕೊಳ್ಳುವುದಿಲ್ಲ.

G. Venkatesh Venkatesh

ನಾವು ಆಗಾಗ್ಗೆ. ಹೇಳುತ್ತಿರುತ್ತೇವೆ, ಹೊರರಾಜ್ಯದವರಿಗೆ ಸಲಿಗೆ ನೀಡಬೇಡಿ ಎಂದು, ಮುಂದಿನ ದಿನಗಳಲ್ಲಿ ಅಪಾಯ. ಕಟ್ಟಿಟ್ಟ ಬುತ್ತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರಾಜಕೀಯ

ರಾಜ್ಯದ 1,082 ನಗರಾಭಿವೃದ್ಧಿ ಯೋಜನೆಗಳ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

ರಾಜ್ಯದ 1,082 ನಗರಾಭಿವೃದ್ಧಿ ಯೋಜನೆಗಳ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

ನಮ್ಮ ರಾಜ್ಯದ ಎಲ್ಲಾ ನಗರಗಳಿಗೂ ಸೇರಿ ₹5 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದಾರೆ. ಇದಕ್ಕೆ ಕೆಲವು ಮಾನದಂಡ ನಿಗದಿ ಮಾಡಿದ್ದು, ನಮ್ಮ ರಾಜ್ಯದಿಂದ 1,082 ಯೋಜನೆಗಳ ಪ್ರಸ್ತಾವನೆ ಅವರ ಮುಂದೆ ಇರಿಸಿದ್ದೇವೆ: ಡಿ.ಕೆ. ಶಿವಕುಮಾರ್

[ccc_my_favorite_select_button post_id="121389"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ DJ ಕೇಸ್ಗೆ ಹೈ ಕೋರ್ಟ್ ತಡೆಯಾಜ್ಞೆ

ದೊಡ್ಡಬಳ್ಳಾಪುರ DJ ಕೇಸ್ಗೆ ಹೈ ಕೋರ್ಟ್ ತಡೆಯಾಜ್ಞೆ

ವಿಶ್ವ ಹಿಂದೂಪರಿಷತ್ ಮತ್ತು ಬಜರಂಗದಳದಿಂದ ನಗರದಲ್ಲಿ ನಡೆದ ಶೋಭಾಯಾತ್ರೆಯಲ್ಲಿ (Sobhayatre) ಅನುಮತಿ ಇಲ್ಲದೆ ಡಿಜೆ (DJ) ಬಳಸಿದ ಕುರಿತು ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ ಎಂದು ತಿಳಿದು ಬಂದಿದೆ.

[ccc_my_favorite_select_button post_id="121351"]
ದೊಡ್ಡಬಳ್ಳಾಪುರ: ಕ್ಯಾಂಟರ್ಗೆ ಟೆಂಪೋ ಡಿಕ್ಕಿ.. ಚಾಲಕ ದುರ್ಮರಣ

ದೊಡ್ಡಬಳ್ಳಾಪುರ: ಕ್ಯಾಂಟರ್ಗೆ ಟೆಂಪೋ ಡಿಕ್ಕಿ.. ಚಾಲಕ ದುರ್ಮರಣ

ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ (Tempo) ಡಿವೈಡರ್ ಮೇಲೆ ಸಾಗಿ, ಮತ್ತೊಂದು ರಸ್ತೆಯಲ್ಲಿ ಎದುರು ಬರುತ್ತಿದ್ದ ಟ್ಯಾಂಕರ್ಗೆ (Canter) ಡಿಕ್ಕಿ ಹೊಡೆದ ಪರಿಣಾಮ (Accident), ಟೆಂಪೋ ಚಾಲಕ ಸಾವನಪ್ಪಿರುವ ಘಟನೆ ತಾಲೂಕಿ ಕೂಗೇನಹಳ್ಳಿ ಕಾಲೋನಿ

[ccc_my_favorite_select_button post_id="121396"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]