HD Deve Gowda insists on bringing treatment for heart attack and stroke under Ayushman Bharat

ಗ್ರೇಟರ್ ಬೆಂಗಳೂರು; ಟೌನ್ ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಹೆಚ್.ಡಿ.ದೇವೇಗೌಡರ ತೀವ್ರ ವಿರೋಧ

ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ (HD Deve Gowda) ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಪ್ರಧಾನಿಗಳು ಪತ್ರ ಬರೆಡಿದ್ದಾರೆ.

ಮಾಜಿ ಪ್ರಧಾನಿಗಳು ಪತ್ರದಲ್ಲಿ ಉಲ್ಲೇಖ ಮಾಡಿರುವ ಮಹತ್ವದ ಅಂಶಗಳು ಹೀಗಿವೆ;

*ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಡದಿ ಹೋಬಳಿಯ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಲ್ಲಿನ ಹಲವಾರು ಸರ್ವೆ ನಂಬರುಗಳಲ್ಲಿರುವ ಸುಮಾರು 10 ಸಾವಿರ ಎಕರೆ ಜಮೀನನ್ನು ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಟೌನ್‌ಶಿಪ್ ಯೋಜನೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿರುವುದಾಗಿ ವರದಿಯಾಗಿದೆ.

*ರಾಮನಗರ ಜಿಲ್ಲೆಯ ರಾಮನಗರ ಮತ್ತು ಕನಕಪುರ ತಾಲ್ಲೂಕುಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರ ಕೈಗಾರಿಕಾಭಿವೃದ್ಧಿಗಾಗಿ ಸಾವಿರಾರು ಎಕರೆ ರೈತರ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕಾಭಿವೃದ್ಧಿ ಪ್ರದೇಶವನ್ನು ಸ್ಥಾಪಿಸಿದೆ.

*ರಾಮನಗರ ಜಿಲ್ಲೆ ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂದಂತೆ ಇದ್ದು, ಇದ್ದು ಹಲವಾರು ಉದ್ಯಮಗಳು ಖಾಸಗಿಯಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ.

*ಉಳಿದಂತೆ ಇರುವ ಕೃಷಿ ಭೂಮಿಯಲ್ಲಿ ರೈತರು ತಮ್ಮ ಜೀವನ ನಿರ್ವಹಣೆಗೆ ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ, ಕೃಷಿಗಾಗಿ ಅವಲಂಬಿತರಾಗಿದ್ದಾರೆ. ಬಹುಪಾಲು ರೈತರು ಅತೀ ಸಣ್ಣ ಮತ್ತು ಸಣ್ಣ ಹಿಡುವಳಿದಾರರಾಗಿದ್ದು ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ರೈತರು ತಮ್ಮ ಜಮೀನಿನಲ್ಲಿ ಮತ್ತು ಜಮೀನಿನ ಸುತ್ತ ಲಕ್ಷಾಂತರ ಮರ-ಗಿಡಗಳನ್ನು ಬೆಳೆಸಿದ್ದಾರೆ. ಇಂತಹ ಪ್ರದೇಶವನ್ನು ಟೌನ್‌ಶಿಪ್ ಯೋಜನೆಗೆ ಸ್ವಾಧೀನ ಪಡಿಸಿಕೊಂಡರೆ ಪರಿಸರಕ್ಕೆ ಅಪಾರ ಹಾನಿ ಉಂಟಾಗುತ್ತದೆ.

*ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆಗೆ ದಕ್ಕೆ ಉಂಟಾಗಿ, ರೈತ ಕುಟುಂಬದ ಯುವಕರು ನಿರುದ್ಯೋಗಿಗಳಾಗಿ ಬೀದಿಪಾಲಾಗುತ್ತಾರೆ. ಈ ಬಡ ರೈತರ ಜೀವನೋಪಾಯಕ್ಕೆ ಕೃಷಿ ಭೂಮಿಯೇ ಆಧಾರವಾಗಿದೆ. ಇದಲ್ಲದೆ, ಕರ್ನಾಟಕ ಹೌಸಿಂಗ್ ಬೋರ್ಡ್ ಹಾಗೂ ಇತರೆ ಸರ್ಕಾರಿ ಪ್ರಾಧಿಕಾರಗಳು ರಾಮನಗರ ಜಿಲ್ಲೆಯ ಬಿಡದಿ ಸುತ್ತ-ಮುತ್ತಲು ಹಲವಾರು ವಸತಿ ಯೋಜನೆಗಳನ್ನು ರೂಪಿಸಿ, ರೈತರ ಜಮೀನ್ನು ಸ್ವಾಧೀನಪಡಿಸಿಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ.

*ಅದ್ದರಿಂದ, ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ಟೌನ್‌ಶಿಪ್ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ರೈತರ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಬಡ ರೈತರ ಹಿತದೃಷ್ಠಿಯಿಂದ ಕೈಬಿಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ ಎಂದು ಮಾಜಿ ಪ್ರಧಾನಿಗಳು ಪತ್ರದಲ್ಲಿ ಹೇಳಿದ್ದಾರೆ.

ರಾಜಕೀಯ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದ್ದಾರೆ

[ccc_my_favorite_select_button post_id="109998"]
ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ ಹೆಚ್.ಕೆ.ಪಾಟೀಲ್ ತಿರುಗೇಟು

ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ

ಈಗ ಅಕ್ರಮ ಗಣಿಗಾರಿಕೆ ಪತ್ರದ ಮಾತಾಡುವ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಭಿಷೇಕ ಮಾಡಿಕೊಂಡು ಕುಳಿತಿದ್ರಾ; ಸಚಿವ ಹೆಚ್.ಕೆ.ಪಾಟೀಲ್ (H.K.Patil)

[ccc_my_favorite_select_button post_id="109884"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

HD ಕ್ಯಾಮೆರಾಗಳೊಂದಿಗೆ ದಂಪತಿಗಳು ಲೈವ್ ಬೆತ್ತಲೆ ವಿಡಿಯೋ (Live nude video) ವ್ಯವಹಾರ ನಡೆಸಿ ಪೊಲೀಸರ ಅತಿಥಿಯಾಗಿದ್ದಾರೆ.

[ccc_my_favorite_select_button post_id="109995"]
ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಲೇ ಇವೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದೆ; ಜಿಲ್ಲಾಧಿಕಾರಿ ಎ.ಬಿ ಬಸವರಾಜು (Deputy Commissioner A.B. Basavaraju)

[ccc_my_favorite_select_button post_id="109939"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]