ದೊಡ್ಡಬಳ್ಳಾಪುರ; ನಗರದಲ್ಲಿನ 66/116ವಿ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಪೂರೈಕೆಯಾಗುವ FO1-Local-2 ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಯನ್ನು ನಾಳೆ (ಏ.26) ರಂದು ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ (Power Cut).
ಈ ಕುರಿತಂತೆ ಬೆಸ್ಕಾಂ ನಗರ ಎಇಇ ವಿನಯ ಕುಮಾರ್ ಅವರು ಪ್ರಕಟಣೆ ನೀಡಿದ್ದು, F07-Local-1 ಫೀಡರ್‌ನ ಮಾರ್ಗದಲ್ಲಿ ಶನಿವಾರ ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರಲಿದ್ದು, ಗ್ರಾಹಕರು ಸಹಕರಿಸಬೇಕಾಗಿ ಕೋರಿದ್ದಾರೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು
ದೊಡ್ಡಬಳ್ಳಾಪುರ ನಗರದ ಹಳೇ ಬಸ್ ನಿಲ್ದಾಣ, ಹೇಮವತಿಪೇಟೆ, ಸಿನಿಮಾ ರಸ್ತೆ, ದೇವಾಂಗ ಪೇಟೆ, ರೋಜಿಪುರ, ಕೋರ್ಟ್ ರಸ್ತೆ, ಚಿಕ್ಕಪೇಟೆ, ಜೆ.ಸಿ.ಸರ್ಕಲ್, ದರ್ಜಿಪೇಟೆ, ಬೆಸ್ತರಪೇಟೆ, ಮಾರುತಿ ನಗರ, ಶೇಣಿಗರ ಪೇಟೆ, ತಾಲ್ಲೂಕು ಆಫೀಸ್ ರಸ್ತೆ, ಪೋಸ್ಟ್ ಆಫೀಸ್, ಡಿಕ್ರಾಸ್, ಮುತ್ಸಂದ್ರ ಸರ್ಕಾರಿ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
(ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)