
Harithalekhani story for the day: ಒಮ್ಮೆ ಸತ್ಯ ಸುಳ್ಳು ಎರಡೂ ವಾಕಿಂಗ್ ಹೋಗಿದ್ವು. ಹಾದಿಯಲ್ಲಿ ಒಂದು ಸುಂದರ ನದಿ ಕಂಡಿತು. ಸರಿ ಎರಡೂ ತಮ್ಮ ವಸ್ತ್ರಗಳನ್ನ ತೆಗೆದು ಸ್ನಾನಕ್ಕೆ ಇಳಿದವು.

ಸುಂದರ ಸಂಜೆಯಲ್ಲಿ ತಂಪಾದ ನದಿಯಲ್ಲಿ ಈಜುತ್ತಾ ಮೈ ಮರೆತವು. ಒಂದಷ್ಟು ಹೊತ್ತಾದ ಮೇಲೆ ಸುಳ್ಳು ಮೇಲೆದ್ದು ಬಂತು. ಸತ್ಯ ಇನ್ನೂ ಮೈ ಮರೆತು ಈಜುತ್ತಾ ಇತ್ತು.
ಸುಳ್ಳು ಅತ್ತಿತ್ತ ನೋಡಿ ಸತ್ಯದ ಬಟ್ಟೆಗಳನ್ನ ಧರಿಸಿ ಹೊರಟು ಬಿಟ್ಟಿತು. ಸಾಕಷ್ಟು ಸಮಯದ ನಂತರ ಸತ್ಯ ಮೇಲೆದ್ದು ಬಂದಾಗ ಅದರ ವಸ್ತ್ರಗಳೇ ಇರಲಿಲ್ಲ…!!
ಸತ್ಯಕ್ಕೆ ಸುಳ್ಳಿನಧಿರಿಸು ಧರಿಸಲು ಹಿಂಸೆಯೆನಿಸಿತು, ಅಸಹ್ಯ ಎನಿಸಿತು. ಅಂದಿನಿಂದ ಸತ್ಯ ಬೆತ್ತಲಾಗೆ ತೆರೆಮರೆಯಲ್ಲೇ ಓಡಾಡಲು ಶುರುಮಾಡಿತು.
ಸುಳ್ಳು ಸತ್ಯದ ಹೊದಿಕೆ ಹೊದ್ದು ತಿರುಗುತ್ತಲೇ ಇದೆ ರಾಜಾರೋಷವಾಗಿ ಎನ್ನಲು ಈ ಘಟನೆಯೇ ಕಾರಣ.
ಕೃಪೆ: ಸಾಮಾಜಿಕ ಜಾಲತಾಣ.


