ಬೆಂ.ಗ್ರಾ ಜಿಲ್ಲೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸದಸ್ಯರಾದ ಡಾ.ಕೆ ಸುಧಾಕರ್ (Dr.K.Sudhakar) ಅಧ್ಯಕ್ಷತೆಯಲ್ಲಿ ನಾಳೆ ಮೇ 09 (ಶುಕ್ರವಾರ) ನಡೆಯಬೇಕಿದ್ದ ದಿಶಾ ಸಮಿತಿ ಸಭೆಯನ್ನು ದಿಢೀರ್ ಮುಂದೂಡಲಾಗಿದೆ.
ಪೂರ್ವ ನಿಯೋಜನೆಯಂತೆ ನಾಳೆ ಮೇ.09ರ ಬೆಳಿಗ್ಗೆ 10.30 ಗಂಟೆಗೆ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆ ಆಯೋಜಿಸಲಾಗಿತ್ತು.
ಇದನ್ನೂ ಓದಿ; SSLC ಫಲಿತಾಂಶ; ದೊಡ್ಡಬಳ್ಳಾಪುರ ತಾಲೂಕಿನ ಕಳಪೆ ಸಾಧನೆ.. ಸರ್ಕಾರಿ ಶಾಲೆಗಳ ಫಲಿತಾಂಶ ತೀವ್ರ ಕುಸಿತಕ್ಕೆ ಹೊಣೆ ಯಾರು..?
ಆದರೆ ತುರ್ತು ಕಾರಣಗಳಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ಸಂಸದರ ಕಾರ್ಯಾಲಯದಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.