
ಬೆಂಗಳೂರು: ಭಾರತೀಯ ಸೇನೆಯ ಅಪರೇಷನ್ ಸಿಂಧೂರ (Operation Sindoora) ದಾಳಿಗೆ ತತ್ತರಿಸಿದ ಪಾಪಿ ಪಾಕಿಸ್ತಾನ, ಮಹಾಪ್ರಭು ರಕ್ಷಿಸಿ.. ಎಂಬಂತೆ ಅಮೇರಿಕಾಗೆ ಮೊರೆಯಿಟ್ಟ ಹಿನ್ನೆಲೆಯಲ್ಲಿ, ದೊಡ್ಡಣ್ಣ ಅಧ್ಯಕ್ಷತೆಯಲ್ಲಿ ಶುಕ್ರವಾರ ರಾತ್ರಿ ನಡೆದ ಸುದೀರ್ಘ ಸಂಧಾನ ಸಭೆಯ ನಂತರ ಕದನ ವಿರಾಮ ಘೋಷಣೆಯಾಗಿದೆ.

ಆದರೆ ತನ್ನ ಕುತಂತ್ರಿ ಬುದ್ದಿ ಬಿಡದ ಪಾಕ್ ಸೇನೆ, ಕದನ ವಿರಾಮ ಘೋಷಣೆ ಬಳಿಕವೂ ದಾಳಿ ನಡೆಸಿ ಭಾರತೀಯರ ಕೆರಳಿಸಿದೆ.
ಇದರ ಬೆನ್ನಲ್ಲೇ ಒಂದು ಹೆಸರು ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡಿಂಗ್ ಆಗಿದೆ. ಅದೇ ಇಂದಿರಾ ಗಾಂಧಿ (Indira Gandhi).
ಹೌದು, ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ 1971ರ ಯುದ್ಧ ನಿರಾಶ್ರಿತರ ಬಿಕ್ಕಟ್ಟು ಆಗಿರಲಿ, ಅಮೆರಿಕದ ಒತ್ತಡವಾಗಲಿ ಪ್ರತಿಯೊಂದರಲ್ಲಿ ಹೆಜ್ಜೆ ಹಿಂದಿಟ್ಟಿರಲಿಲ್ಲ. ಇಂದಿರಾ ಗಾಂಧಿಯವರ ದಿಟ್ಟ ನಿರ್ಧಾರಗಳೇ ಅವರಿಗೆ ಉಕ್ಕಿನ ಮಹಿಳೆ ಎಂದ ಪಟ್ಟ ತಂದು ಕೊಟ್ಟಿದ್ದವು.
1971ರಲ್ಲಿ ಪಾಕಿಸ್ತಾನದ ಪೂರ್ವ ಪ್ರದೇಶ (ಈಗ ಬಾಂಗ್ಲಾದೇಶ) ಬಂಗಾಳಿ ನಾಗರಿಕರ ಮೇಲೆ ಪಾಕಿಸ್ತಾನಿ ಸೇನೆಯು ಭೀಕರ ದೌರ್ಜನ್ಯ ನಡೆಸುತ್ತಿತ್ತು. ಲಕ್ಷಾಂತರ ನಿರಾಶ್ರಿತರು ಸುರಕ್ಷಿತ ನೆಲೆ ಅರಸುತ್ತಾ ಭಾರತಕ್ಕೆ ಬಂದಿದ್ದರು.
ಅದು ದೇಶದ ಆಂತರಿಕ ಭದ್ರತೆ ದೊಡ್ಡ ಮಟ್ಟದ ಒತ್ತಡವನ್ನುಂಟು ಮಾಡಿತ್ತು. ಆದ್ದರಿಂದ ಡಿಸೆಂಬರ್ 3, 1971 ರಂದು ಪಾಕಿಸ್ತಾನ ಭಾರತದ ಮೇಲೆ ವಾಯುದಾಳಿ ನಡೆಸಿತು.
ಭಾರತೀಯ ಸೇನೆ ಕೇವಲ 13 ದಿನಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸಿತು. 93,000 ಪಾಕಿಸ್ತಾನಿ ಸೈನಿಕರು ಶರಣಾದರು. ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್‌ವರೆಗೆ ನುಗ್ಗಿತ್ತು.
Remember her Name, Indira Gandhi !!
— Manish Tiwari (@livemanish_) May 10, 2025
No one can match her Aura , the strongest PM of India 🇮🇳#ceasfire #CeasefireNowpic.twitter.com/NXKjoBxX0P
ಖುದ್ದು ಪ್ರಧಾನಿ ಇಂದಿರಾ ಯುದ್ಧ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದರು. ಆ ಯುದ್ಧದ ಪರಿಣಾಮವಾಗಿ, ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಅಂಥದ್ದೇ ನಿರ್ಧಾರಕ್ಕೆ ಬರಬೇಕು ಎಂದು ನೆಟ್ಟಿಗರ ಒತ್ತಾಯವಾಗಿದೆ.
93,000 ಪಾಕಿಸ್ತಾನ ಸೈನಿಕರನ್ನು ಭಾರತದ ಮುಂದೆ ಮಂಡಿಯೂರಿಸಿದ ದುರ್ಗಿ 🔥 pic.twitter.com/7RBa33dz1f
— Hruday Gowda (@hrudaygowda123) May 11, 2025
ಹಿಂದುತ್ವವಾದಿಗಳಿಗೂ ಬೇಸರ
ಮತ್ತೊಂದೆಡೆ ನಿನ್ನೆಯ ಅನಿರೀಕ್ಷಿತ ಘಟನೆ ದೇಶ ಪ್ರೇಮಿಗಳು, ಹಿಂದುತ್ವವಾದಿಗಳು ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರಲ್ಲಿಯೂ ತಡೆಯಲಾಗದ ಅಸಹನೆ ಕಾರಣವಾಗಿದೆ.
ಕೈಗೆ ಬಂದ ಅವಕಾಶವನ್ನು ಕೇಂದ್ರ ಸರ್ಕಾರ ಕೈ ಚೆಲ್ಲಿಬಿಟ್ಟಿದೆ, ಪಾಕಿಸ್ತಾನ ಎಂಬ ಹಾವಿನ ಕುತ್ತಿಗೆಯ ಮೇಲೆಯ ಭಾರತೀಯ ಸೇನೆ ಕಾಲಿಟ್ಟು ನಿಂತಿತ್ತು. ಆದರೆ ಏಕಾಏಕಿ ಅಮೇರಿಕಾದ ಮುಂದೆ ಬಾಗಿ ನಿಲ್ಲುವಂತಾಯಿತೆ ಎಂಬ ಆಕ್ಷೇಪದ ಮಾತುಗಳು ಕೇಳಿಬರುತ್ತಿದೆ.
ಈ ಆಕ್ರೋಶವನ್ನು ತಣಿಸಲು, ಬಿಜೆಪಿ ಬೆಂಬಲಿಗರು ಸಂದೇಶವನ್ನು ಹರಿಬಿಟ್ಟಿದ್ದಾರೆ.
ಆ ಸಂದೇಶ ಇದಾಗಿದೆ: ನಿನ್ನೆ ಕದನ ವಿರಾಮ ಘೋಷಣೆ ಬೆನ್ನಲ್ಲೆ ನಿರಾಸೆಯ, ಹತಾಶೆಯ ಮತ್ತು ಸರ್ಕಾರದ ವಿಫಲತೆ ಬಿಂಬಿಸುವ ಪೊಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದು ಸರಿಯಲ್ಲ. ಇದು ಕೃಷ್ಣ ತಂತ್ರ. ಜಗತ್ತಿನ ಎದುರು ಪಾಕಿಸ್ತಾನ ವನ್ನು ನಿಶಸ್ತ್ರವಾಗಿಸಿದ, ಬೆತ್ತಲಾಗಿಸಿದ ರಾಜತಾಂತ್ರಿಕ ಅಂರ್ತಗತ ಪ್ರತಿ ತಂತ್ರ.
ಆಂತರಿಕ ದೇಶದ್ರೋಹಿಗಳ ಮುಖವಾಡ ಕಳಚುವ ತಂತ್ರ. ಚೀನಾವನ್ನು ಏಕಾಂಗಿ ಯಾಗಿಸಿದ ತಂತ್ರ. ಕಾರಣ ಇಂತಹ ಸುದ್ದಿ ಕಳಿಸಿದವರಿಗೆ ತಕ್ಷಣ ಡೀಲಿಟ್ ಮಾಡಲು ಹೇಳಿ, ನೀವೂ ಸಹ ಯಾರಿಗೂ ಕಳಿಸಬೇಡಿ.
ದೇಶದೊಳಗಿನ ಗೋಮುಖ ವ್ಯಾಘ್ರಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಚಾಡಿ ಆಲಿಸುವ ಹಿತ್ತಾಳೆ ಕಿವಿ ತಮ್ಮದಾಗದಿರಲಿ. ತಾವು ಅವರಿಗೆ ಸಹಕಾರ ನೀಡಬೇಡಿ. ಒಂದೇ ಸಲಕ್ಕೆ ನಿರಾಸೆಯ ಮಾತು ಬೇಡ. ಕಾಲುಕೆದರಿ ಜಗಳ ತೆಗೆಯುವ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸುವ ಭೂಮಿಕೆ ಸಿದ್ಧಪಡಿಸುತ್ತಿರುವ ಕೇಂದ್ರ ಸರ್ಕಾರ ಮತ್ತು ಸೈನ್ಯದ ಮನೋಬಲ ಹೆಚ್ಚಿಸಲು ಕನಿಷ್ಠ ದಿನದಲ್ಲಿ ಒಂದು ನಿಮಿಷ ಮನಸಾರೆ ಪ್ರಾರ್ಥಿಸಿ.
ಯುದ್ಧದ ಏರಿಳಿತಗಳಿಂದ ವಿಚಲಿತರಾಗದೇ ಅಂತಿಮ ಜಯ ನಮ್ಮದು ಎಂಬ ವಿಶ್ವಾಸ ದಿಂದ ಮುನ್ನಡೆಯೋಣ. ಚರೈವೇತಿ ಚರೈವೇತಿ. ಭಾರತದ ಗಡಿರಕ್ಷಣೆ ಮಾಡುತ್ತಿರುವ ಸೈನಿಕರಿಗೆ, ಅವರ ಪರಿವಾರದವರಿಗೆ ಮತ್ತು ಅವರನ್ನು ಬೆಂಬಲಿಸಿ ಕಾರ್ಯನಿರತಗಿರುವ ಪ್ರತಿ ವ್ಯಕ್ತಿಗೂ ಕೃತಜ್ಞತೆಗಳು. ಶುಭಾಶಯಗಳು.


