
ದೊಡ್ಡಬಳ್ಳಾಪುರ: ನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ (Ayyappaswamy Temple) ಶ್ರೀ ಅಯ್ಯಪ್ಪಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್ನ ವತಿಯಿಂದ ದೇಶದ ಸೈನಿಕರ ಯೋಗಕ್ಷೇಮಕ್ಕಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಅಯ್ಯಪ್ಪ ಸ್ವಾಮಿ ಮೂರ್ತಿಯ ಬಳಿ ರಾಷ್ಟ್ರ ಧ್ವಜ ಕಟ್ಟಿ, ವಿಶೇಷ ಅಲಂಕಾರ ಮಾಡುವ ಮೂಲಕ ಪೂಜೆ ಸಲ್ಲಿಸಲಾಯಿತು., ಶ್ರೀ ಗಣೇಶ ಹಾಗೂ ಸುಬ್ರಹ್ಮಣ್ಯ ಸ್ವಾಮಿಗೆ ಸಹ ಅಲಂಕಾರಗಳನ್ನು ಮಾಡಲಾಗಿತ್ತು.
ಶ್ರೀ ಅಯ್ಯಪ್ಪಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್ನ ಕಾರ್ಯಣದರ್ಶಿ ಬಿ.ವಿ.ಬಸವರಾಜು ಮಾತನಾಡಿ, ದೇಶದ 26 ಮಂದಿ ನಾಗರಿಕರನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಉಗ್ರಗಾಮಿಗಳ ಕೃತ್ಯವನ್ನು ಇಡೀ ದೇಶ ಖಂಡಿಸುತ್ತಿದೆ. ಅಂತಹ ಉಗ್ರಗಾಮಿಗಳನ್ನು ಮಟ್ಟ ಹಾಕಲು ಕೈಗೊಂಡಿರುವ ಆಪರೇಷನ್ ಸಿಂಧೂರ್ ಯಶಸ್ವಿಯಾಗಿ ನಡೆದಿದೆ.
ದೇಶವನ್ನು ಶತ್ರು ರಾಷ್ಟ್ರಗಳಿಂದ ಹಾಗೂ ಉಗ್ರರಿಂದ ರಕ್ಷಿಸಲು ನಮ್ಮ ಸೈನಿಕರು ತಮ್ಮ ಜೀವವನ್ನು ಪಣವಾಗಿಟ್ಟು ಹೋರಾಟ ನಡೆಸುತ್ತಿದ್ದಾರೆ. ಅಂತಹ ಸೈನಿಕರು ಕ್ಷೇಮದಿಂದ ಇರಬೇಕು, ಅವರ ಕುಟುಂಬಗಳು ಸಹ ಸುಖ ಸಂತೋಷದಿಂದ ಬಾಳಬೇಕು.
ಇಡೀ ದೇಶ ಸುಭಿಕ್ಷವಾಗಿರಬೇಕೆಂದು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.


