ದೊಡ್ಡಬಳ್ಳಾಪುರ: ನಿನ್ನೆ (ಏ.15) ಪ್ರಕಟವಾದ
ಸಿಬಿಎಸ್ಇ (CBSE) 10ನೇ ತರಗತಿ ಫಲಿತಾಂಶದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಷ್ಠಿತ ಶಾಲೆಯಾದ ಎಂಎಸ್ವಿ ಪಬ್ಲಿಕ್ ಶಾಲೆ (MSV Public School) ಶೇ.100 ರಷ್ಟು ಸಾಧನೆ ಮಾಡಿದೆ.

2025-26 ನೇ ಸಾಲಿನ ಸಿಬಿಎಸ್ಇ ಕೇಂದ್ರೀಯ ಪರೀಕ್ಷಾ ಮಂಡಳಿಯ ಹತ್ತನೇ ತರಗತಿ ಫಲಿತಾಂಶದಲ್ಲಿ, ಎಂಎಸ್ವಿ ಪಬ್ಲಿಕ್ ಶಾಲೆಯು ನಿರಂತರವಾಗಿ 15ನೇ ವರ್ಷವೂ ಶೇ.100 ಸಾಧನೆ ಮಾಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ.

ಈ ಬಾರಿ ಒಟ್ಟು 136 ವಿದ್ಯಾರ್ಥಿಗಳಲ್ಲಿ 86 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 41 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ಮಕ್ಕಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಮಕ್ಕಳ ಈ ಫಲಿತಾಂಶಕ್ಕೆ ಮತ್ತು ಅವರ ಸಾಧನೆಗೆ ಶಾಲೆಯ ಸಂಸ್ಥಾಪಕರಾದ ಸುಬ್ರಮಣ್ಯ.ಎ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, “ನಿರಂತರವಾಗಿ 15 ವರ್ಷಗಳ ಕಾಲ ಶೇ.100 ಫಲಿತಾಂಶವನ್ನು ಸಾಧಿಸುವುದು ನಮ್ಮ ಶಾಲೆಯ ಗುಣಮಟ್ಟದ ಶಿಕ್ಷಣ ಮತ್ತು ತಂಡದ ಕಾರ್ಯದ ಪ್ರತೀಕವಾಗಿದೆ. ಮಕ್ಕಳ ಈ ಸಾಧನೆ ನಮ್ಮ ಶಾಲೆಗೆ ಕೀರ್ತಿ ತಂದಿದೆ, ಮಕ್ಕಳಿಗೆ ಹಾಗೂ ವಿದ್ಯೆ ಕಲಿಸಿದ ಶಿಕ್ಷಕ ವೃಂದಕ್ಕೆ ನನ್ನ ಮನಃಪೂರ್ವಕವಾದ ಅಭಿನಂದನೆಗಳು” ಎಂದು ಮುಕ್ತ ಕಂಠದಿಂದ ಹಾರೈಸಿದ್ದಾರೆ.
ಶಾಲಾ ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್, ಟ್ರಸ್ಟಿ ನಯನಾ ಸ್ವರೂಪ್ ಹಾಗೂ ಪ್ರಾಂಶುಪಾಲರಾದ ರೆಮ್ಯ.ಬಿ.ವಿ ಹಾಗೂ ಸಿಬ್ಬಂದಿ ವರ್ಗಕೂಡ ಮಕ್ಕಳ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ವಿಶಿಷ್ಟ ಸಾಧನೆಗೆ ಎಂಎಸ್ವಿ ಶಾಲೆಯ ಶಿಕ್ಷಕರ ಸಮರ್ಪಣೆ, ಮಾರ್ಗದರ್ಶನ, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಸ್ತಿನ ವಾತಾವರಣ ಪ್ರಮುಖ ಕಾರಣಗಳಾಗಿವೆ.
ಈ ಸಾಧನೆಯೊಂದಿಗೆ, ಎಂಎಸ್ವಿ ಶಾಲೆಯು ಸಿಬಿಎಸ್ಇ ಪಠ್ಯಕ್ರಮದಲ್ಲಿ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಮುಂದಿನ ವರ್ಷಗಳಲ್ಲಿಯೂ ಇದೇ ಸಾಧನೆಯನ್ನು ಮುಂದುವರಿಸುವ ವಿಶ್ವಾಸ ವ್ಯಕ್ತವಾಗಿದೆ.
ಫಲಿತಾಂಶದ ವಿವರ
ಶ್ರೇಯಾ ಆರ್ – 97.00%
ಶ್ರುತಿ ಬಿ ಆರ್ – 95.60%
ಡಿ ರಕ್ಷಾ – 94.60%
ಗಗನಶ್ರೀ ಡಿ ಎಸ್ – 94.00%
ಕೆ ಹೆಚ್ ಸ್ಮೃತಿ – 93.00%
ಅಫಿಫಾ – 92.60%
ಧನುಶ್ರೀ ವಿ – 92.00%.
ಚಿನ್ಮಯ್ ಎನ್ ಲೋಕೇಶ್ – 91.80%
ಪೂರ್ವಿಕಾ ಡಿ – 91.60%
ಹರಿಪ್ರಿಯಾ ಕೆ ಪಿ – 91.60%
ರವಿನೂತಲ ತೇಜೋ ನಾಗಗೌರೀ ವೈಷ್ಣವಿ – 91.40% ಯೋಗಿತಾ ಕೆ ಪಿ – 91.40%
ರಿಶಿಕಾ ರಾಜ್ ಸಿ – 91.20%.
ಕೃತಿಕಾ ಹೆಚ್ ಎಂ – 90.80%
ಭರಣಿ.ಎಸ್ – 90.40%
ವರ್ಷ ಬಿಂದು ಎನ್ – 90.20%
ಇಖ್ರಾ ಮರಿಯಮ್ – 90.00%