
ಚೆನ್ನೈ: ತಮ್ಮ ಸರ್ಕಾರವನ್ನು ಕೆಳಗಿಳಿಸಿ, ಅನ್ಯ ಪಕ್ಷದ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ, ಸದಾ ಅವರನ್ನು ಕೆಳಗಿಳಿಸಲು ಸುಳ್ಳು ಪ್ರಚಾರ ಮಾಡುತ್ತಾ, ಸಾಂವಿಧಾನಿಕ ಬಿಕ್ಕಟ ಸೃಷ್ಟಿಸಲು ಕಾಯುವ ಪಕ್ಷಗಳ ನಡುವೆ ಎಂಕೆ ಸ್ಟಾಲಿನ್ (MK Stalin) ಮಾದರಿಯಾಗಿ ನಿಂತಿದ್ದಾರೆ.

ಹೌದು ಟಿವಿಕೆ ನಾಯಕ ಸಿ ಜೋಸೆಫ್ ವಿಜಯ್ ಸರ್ಕಾರ ರಚಿಸುವವರೆಗೆ ಡಿಎಂಕೆ ಕಾಯುತ್ತದೆ ಮತ್ತು “ಆರು ತಿಂಗಳ ಕಾಲ ತೊಂದರೆ ನೀಡುವುದಿಲ್ಲ” ಎಂದು ನಿರ್ಗಮಿತ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಡಿಎಂಕೆ ಶೀಘ್ರದಲ್ಲೇ ಸಾಂವಿಧಾನಿಕ ಬಿಕ್ಕಟ್ಟು ಅಥವಾ ಮತ್ತೊಂದು ಚುನಾವಣೆಯನ್ನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸ್ಟಾಲಿನ್, ಹೊಸ ಸರ್ಕಾರವು ತನ್ನ ಆಡಳಿತವು ಪರಿಚಯಿಸಿದ ಯೋಜನೆಗಳನ್ನು ಮುಂದುವರಿಸುತ್ತದೆ ಮತ್ತು ಟಿವಿಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಪ್ರಮುಖವಾಗಿ ತಮ್ಮ ಸರ್ಕಾರದ ಜಾರಿಗೆ ತಂದಿದ್ದ ಉಚಿತ ಉಪಹಾರ ಯೋಜನೆಯನ್ನು ಮುಂದುವರಿಸಬೇಕು, “ಶಾಲಾ ಮಕ್ಕಳಿಗೆ,” ಸೌಲಭ್ಯವನ್ನು ಹೊಸ ಸರ್ಕಾರ ಮುಂದುವರಿಸಬೇಕೆಂದರು.
ಇದೇ ವೇಳೆ ವಿಜಯ್ ಮಹಿಳೆಯರಿಗೆ ₹2,500 ಭರವಸೆ ನೀಡಿದ್ದಾರೆ ಎಂದು ಗಮನ ಸೆಳೆದಾಗ, ಸ್ಟಾಲಿನ್ ಆ ಭರವಸೆಯನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಹೇಳಿದರು. “ನಾವು ಮಾಡಿದಂತೆ ಮಹಿಳೆಯರಿಗೆ ಕನಿಷ್ಠ ರೂ.1,000 ನೀಡಿ” ಎಂದು ಸಲಹೆ ನೀಡಿದರು.
ಇದೇ ವೇಳೆ ಅವರ ಸರ್ಕಾರವು 2021 ರ ಪ್ರಣಾಳಿಕೆಯಲ್ಲಿ ಪಕ್ಷ ನೀಡಿದ 90% ಭರವಸೆಗಳನ್ನು ಪೂರೈಸಿದೆ ಎಂದು ಡಿಎಂಕೆ ಅಧ್ಯಕ್ಷರು ಹೇಳಿದರು.
“ಈ ಚುನಾವಣೆಯಲ್ಲಿಯೂ ನಾವು ನಮಗೆ ನೀಡಬಹುದಾದ ಭರವಸೆಗಳನ್ನು ಮಾತ್ರ ನೀಡಿದ್ದೇವೆ. ಟಿವಿಕೆ ತನ್ನ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ (ಪಡಿತರ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಲ್ಲೇಖಿಸಿ),” ಎಂದು ಅವರು ಹೇಳಿದರು. ಆದಾಗ್ಯೂ ಹೊಸ ಸರ್ಕಾರ ತನ್ನ ಭರವಸೆ ಈಡೇರಿಸಿದರೆ ನಾವು ಸಂತೋಷಪಡುತ್ತೇವೆ ಎಂದರು.”
ಡಿಎಂಕೆ ಅಧ್ಯಕ್ಷರ ನಿವಾಸಕ್ಕೆ ಬುಧವಾರ ಬೆಳಗಿನ ಜಾವದಿಂದಲೇ ಮಾಜಿ ಸಚಿವರು, ಪಕ್ಷದ ಮುಖಂಡರು, ಮೈತ್ರಿಕೂಟದ ಪಾಲುದಾರರು ಮತ್ತು ವಿವಿಧ ಕ್ಷೇತ್ರಗಳ ಹಿತೈಷಿಗಳು ಭೇಟಿ ನೀಡಿದರು. ನಂತರ ಡಿಎಂಕೆ ಪ್ರಧಾನ ಕಚೇರಿಯಾದ ಅಣ್ಣಾ ಅರಿವಲಯಂನಲ್ಲಿ ಅವರಿಗೆ ಭೇಟಿಗೆ ಅವಕಾಶ ನೀಡಲಾಯಿತು.
ಚನ್ನವೀರನಹಳ್ಳಿಯಲ್ಲಿ ಸರ್ಕಾರಿ PUC ಕಾಲೇಜು ಆರಂಭ; ದಾಖಲಾತಿಗಾಗಿ ಪ್ರಾಂಶುಪಾಲರ ಅವಿರತ ಶ್ರಮ

ದೊಡ್ಡಬಳ್ಳಾಪುರ: ತಾಲೂಕಿನ ಚನ್ನವೀರನಹಳ್ಳಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು (PUC) 2026-27 ನೇ ಸಾಲಿನಿಂದ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳ ನೇಮಕಾತಿಗಾಗಿ ಪ್ರಾಂಶುಪಾಲರು ಹಾಗೂ ಸಾಸಲು ಹೋಬಳಿ ಯುವಕರು ಅವಿರತ ಶ್ರಮಿಸುತ್ತಿದ್ದಾರೆ.
ಹೌದು ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಿಂದ 26 ಕಿಮೀ ದೂರದಲ್ಲಿರುವ ಸಾಸಲು ಹೋಬಳಿಗೊಂದು ಪಿಯು ಕಾಲೇಜು ಬೇಕೆಂಬುದು ಬಹು ವರ್ಷಗಳ ಬೇಡಿಕೆಯಾಗಿದ್ದು, ಶಾಸಕ ಟಿ.ವೆಂಕಟರಮಣಯ್ಯ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಮಂಜೂರಾಗಿದ್ದ ಕಾಲೇಜಿಗೆ, ಈಗ ಮತ್ತೆ ಧೀರಜ್ ಮುನಿರಾಜು ಅವರು ಶಾಸಕರಾದ ಬಳಿಕ ಮರು ಜೀವ ದೊರೆತಿದೆ.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇಲಾಖೆ 2026-27 ನೇ ಶೈಕ್ಷಣಿಕ ಸಾಲಿನಿಂದ ನೂತನವಾಗಿ ಪ್ರಥಮ ಪಿಯುಸಿ (PUC) ಕಾಲೇಜು ಆರಂಭಿಸುತ್ತಿದ್ದು, ವಾಣಿಜ್ಯ ವಿಭಾಗ (EBACS) ಆರಂಭಿಸುತ್ತಿದೆ.
ಚನ್ನವೀರನಹಳ್ಳಿಯ ನೂತನ ಪಿಯು ಕಾಲೇಜಿಗೆ ಪ್ರಾಂಶುಪಾಲರಾಗಿ ಸಾಸಲು ಹೋಬಳಿಯವರೇ ಆದ ಶ್ರೀರಾಮನಹಳ್ಳಿಯ ಕೇಶವ ಮೂರ್ತಿ ಎಸ್.ಎನ್ ಅವರನ್ನು ನೇಮಿಸಿದ್ದು, ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ, ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಗತಿಯಲ್ಲಿದೆ.
ಇನ್ನೂ ಚನ್ನವೀರನಹಳ್ಳಿಯಲ್ಲಿನ ಪ್ರೌಢಶಾಲಾ ಆವರಣದಲ್ಲಿ ಆರಂಭಿಸಲಾಗುತ್ತಿರುವ ನೂತನವಾಗಿ ಕಾಲೇಜಿನಲ್ಲಿ ಅರ್ಹತೆಯುಳ್ಳ ಅನುಭವಿ ಉಪನ್ಯಾಸಕರ ನೇಮಕ, ವಿದ್ಯಾರ್ಥಿ ವೇತನ ಸೇರಿದಂತೆ ಎಲ್ಲಾ ಸರ್ಕಾರಿ ಸೌಲಭ್ಯ, ವಿಶಾಲ ಆಟದ ಮೈದಾನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಯೋಜಿತ ಕಲಿಕೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ, ಪ್ರತಿ ವಿದ್ಯಾರ್ಥಿಗಳಿಗೂ ವೈಯಕ್ತಿಕ ಗಮನ ನೀಡುವುದಾಗಿ ಪ್ರಾಂಶುಪಾಲರಾದ ಕೇಶವ ಮೂರ್ತಿ ಭರವಸೆ ನೀಡಿದ್ದಾರೆ.
ಇನ್ನೂ ಪ್ರಥಮವಾಗಿ ಆರಂಭವಾಗುತ್ತಿರುವ ಕಾಲೇಜಿಗೆ ದಾಖಲಾತಿಗಾಗಿ, ಸಾಸಲು ಗ್ರಾಮಪಂಚಾಯಿತಿ ಹಾಗೂ ಆರೂಢಿ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳ ಮನೆ ಮನೆಗಳಿಗೆ ಪ್ರಾಂಶುಪಾಲರಾದ ಕೇಶವ ಮೂರ್ತಿ ಹಾಗೂ ಸಾಸಲು ಹೋಬಳಿಯ ಯುವಕರು ಭೇಟಿ ನೀಡಿ, ಪೋಷಕರು, ವಿದ್ಯಾರ್ಥಿಗಳ ಮನವೊಲಿಸುತ್ತಿದ್ದು, ಶತಗತಾಯ ಸಾಸಲು ಹೋಬಳಿಯಲ್ಲಿ ಪ್ರಾರಂಭವಾಗುತ್ತಿರುವ ನೂತನ ಕಾಲೇಜಿಗೆ ಹೆಚ್ಚಿನ ದಾಖಲಾತಿ ಮಾಡಿಸಲು ಶ್ರಮಿಸುತ್ತಿದ್ದಾರೆ.


