ಜನರ ತೀರ್ಪನ್ನು ಅವಮಾನಿಸದೆ ವಿಜಯ್‌ಗೆ ಅವಕಾಶ ನೀಡಿ: ತಮಿಳುನಾಡು ರಾಜ್ಯಪಾಲರ ನಡೆಗೆ ಕಮಲ್ ಹಾಸನ್ ಗರಂ

Don't insult people's verdict; give Vijay a chance: Kamal Haasan

ಚೆನೈ: ತಮಿಳುನಾಡಿನಲ್ಲಿ ನೂತನ ಸರಕಾರ ರಚನೆಗೆ ವಿಜಯ್ (Vijay) ನೇತೃತ್ವದ ಟಿವಿಕೆ (TVK) ಭರದಿಂದ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಾದ ರಾಜೇಂದ್ರ ಮಾಡಿ ಸರಕಾರ ಅರ್ಲೇಕರ್‌ರನ್ನು ಭೇಟಿ ರಚನೆಗೆ ವಿಜಯ್ ಹಕ್ಕು ಮಂಡಿಸಿದ್ದಾರೆ. ಆದರೆ ರಾಜ್ಯ ಪಾಲರು ಟಿವಿಕೆ ಬಳಿ, 118 ಶಾಸಕರ ಪಟ್ಟಿಯ ನ್ನಿಟ್ಟುಕೊಂಡು ಮರಳಿ ಬನ್ನಿ ಎಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಇದು ತಮಿಳುನಾಡಿನಾಧ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಇದೇ ವಿಚಾರವಾಗಿ ಖ್ಯಾತ ಚಿತ್ರ ನಟ ಕಮಲ್ ಹಾಸನ್ ಕೂಡ ಪ್ರತಿಕ್ರಿಯೆ ನೀಡಿದ್ದು, ಜನರ ತೀರ್ಪನ್ನು ಅವಮಾನಿಸಬೇಡಿ ಎಂದು ರಾಜ್ಯಪಾಲರ ನಡೆಗೆ ಗರಂ ಆಗಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರ ಸಂದೇಶದ ಅನುವಾದ ಗಮನಿಸುವುದಾದರೆ‌, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜನರು ಯಾವುದೇ ಪಕ್ಷಕ್ಕೆ ಏಕಾಂಗಿಯಾಗಿ ಸರ್ಕಾರ ರಚಿಸುವ ಅಧಿಕಾರ ನೀಡಿಲ್ಲ. ಈ ನಿರ್ಧಾರ ತಮಿಳುನಾಡಿನ ಇತಿಹಾಸದಲ್ಲಿ ಅಭೂತಪೂರ್ವವಾಗಿದೆ.

ನನ್ನ ಸಹೋದರ ಶ್ರೀ ಎಂಕೆ ಸ್ಟಾಲಿನ್ ಅವರು ‘ನಾವು ಜನರ ತೀರ್ಪನ್ನು ಗೌರವಿಸುತ್ತೇವೆ; ನಾವು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ’ ಎಂದು ಘೋಷಿಸಿದ್ದಾರೆ. ಈ ಅವರ ರಾಜಕೀಯ ಪ್ರಬುದ್ಧತೆಯನ್ನು ನಾನು ಗೌರವಿಸುತ್ತೇನೆ.

ಈಗ ಸಂವಿಧಾನದ ಉಸ್ತುವಾರಿ ವಹಿಸಿರುವವರು ಸಹ ಅದೇ ಕರ್ತವ್ಯವನ್ನು ಪೂರೈಸಬೇಕು. ಇದು ಬೇಡಿಕೆಯಲ್ಲ, ಆದರೆ ಅವರ ಸಾಂವಿಧಾನಿಕ ಕರ್ತವ್ಯದ ಜ್ಞಾಪನೆ ಎಂದು ರಾಜ್ಯಪಾಲರ ಹೆಸರು ಹೇಳದೆ ಸೂಕ್ಷ್ಮವಾಗಿ ಹೇಳಿದ್ದಾರೆಮ

ಶ್ರೀ ಟಿವಿಕೆ ವಿಜಯ್ ನೇತೃತ್ವದ ತಮಿಳುನಾಡು ವಿಕ್ಟರಿ ಪಾರ್ಟಿ 108 ಸ್ಥಾನಗಳನ್ನು ಗೆದ್ದಿದೆ. ಅವರನ್ನು ಸರ್ಕಾರ ರಚಿಸಲು ಆಹ್ವಾನಿಸದಿರುವುದು ತಮಿಳುನಾಡಿನ ಜನರ ಜನಾದೇಶಕ್ಕೆ ಮಾಡಿದ ಅವಮಾನ. 233 ಚುನಾಯಿತ ಸದಸ್ಯರು ಇನ್ನೂ ಅಧಿಕಾರ ವಹಿಸಿಕೊಳ್ಳಬೇಕಾಗಿದೆ. ಇದು ರಾಜ್ಯಕ್ಕೆ ಅವಮಾನ; ಪ್ರಜಾಪ್ರಭುತ್ವಕ್ಕೆ ಹಾನಿ.

ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ಬಹುಮತವನ್ನು ರಾಜಭವನದಲ್ಲಿ ಅಲ್ಲ, ವಿಧಾನಸಭೆಯಲ್ಲಿ ಸಾಬೀತುಪಡಿಸಬೇಕು’ ಎಂದು ಸ್ಪಷ್ಟವಾಗಿ ಹೇಳಿದೆ.

ನಾನು ಮಾತನಾಡುತ್ತಿರುವುದು ಪಕ್ಷ ರಾಜಕೀಯದ ಬಗ್ಗೆ ಅಲ್ಲ. ಇದು ಭಾರತೀಯ ನಾಗರಿಕನ ತತ್ವಬದ್ಧ ಧ್ವನಿ. ತಮಿಳುನಾಡಿನ ಜನರ ತೀರ್ಪನ್ನು ಗೌರವಿಸಬೇಕು ಎಂದು ಕಮಲ್ ಹಾಸನ್ ಒತ್ತಾಯಿಸಿದ್ದಾರೆ‌.

ಪ್ರಜಾಪ್ರಭುತ್ವಕ್ಕೆ ಮಾದರಿಯಾದ ಎಂಕೆ ಸ್ಟಾಲಿನ್‌ ನಡೆ..!

MK Stalin's move, a model for democracy..!
MK Stalin’s move, a model for democracy..!

ಚೆನ್ನೈ: ತಮ್ಮ ಸರ್ಕಾರವನ್ನು ಕೆಳಗಿಳಿಸಿ, ಅನ್ಯ ಪಕ್ಷದ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ, ಸದಾ ಅವರನ್ನು ಕೆಳಗಿಳಿಸಲು ಸುಳ್ಳು ಪ್ರಾಚಾರ ಮಾಡುತ್ತಾ, ಸಾಂವಿಧಾನಿಕ ಬಿಕ್ಕಟ ಸೃಷ್ಟಿಸಲು ಕಾಯುವ ಪಕ್ಷಗಳ ನಡುವೆ ಎಂಕೆ ಸ್ಟಾಲಿನ್ (MK Stalin) ಮಾದರಿಯಾಗಿ ನಿಂತಿದ್ದಾರೆ.

ಹೌದು ಟಿವಿಕೆ ನಾಯಕ ಸಿ ಜೋಸೆಫ್ ವಿಜಯ್ ಸರ್ಕಾರ ರಚಿಸುವವರೆಗೆ ಡಿಎಂಕೆ ಕಾಯುತ್ತದೆ ಮತ್ತು “ಆರು ತಿಂಗಳ ಕಾಲ ತೊಂದರೆ ನೀಡದೆ ವೀಕ್ಷಿಸುತ್ತದೆ” ಎಂದು ನಿರ್ಗಮಿತ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಡಿಎಂಕೆ ಶೀಘ್ರದಲ್ಲೇ ಸಾಂವಿಧಾನಿಕ ಬಿಕ್ಕಟ್ಟು ಅಥವಾ ಮತ್ತೊಂದು ಚುನಾವಣೆಯನ್ನು ಬಯಸುವುದಿಲ್ಲ ಎಂದು ಸೂಚಿಸಿರುವ ಸ್ಟಾಲಿನ್, ಹೊಸ ಸರ್ಕಾರವು ತನ್ನ ಆಡಳಿತವು ಪರಿಚಯಿಸಿದ ಯೋಜನೆಗಳನ್ನು ಮುಂದುವರಿಸುತ್ತದೆ ಮತ್ತು ಟಿವಿಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತದೆ ಎಂದು ಹೇಳಿದರು.

ಹೊಸ ಸರ್ಕಾರವು ಉಚಿತ ಉಪಹಾರ ಯೋಜನೆಯನ್ನು ಮುಂದುವರಿಸಬೇಕು, “ಶಾಲಾ ಮಕ್ಕಳಿಗೆ,” ಸೌಲಭ್ಯ ಮುಂದುವರಿಸಬೇಕೆಂದರು.

ಇದೇ ವೇಳೆ ವಿಜಯ್ ಮಹಿಳೆಯರಿಗೆ ₹2,500 ಭರವಸೆ ನೀಡಿದ್ದಾರೆ ಎಂದು ಗಮನ ಸೆಳೆದಾಗ, ಸ್ಟಾಲಿನ್ ಆ ಭರವಸೆಯನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಹೇಳಿದರು. “ನಾವು ಮಾಡಿದಂತೆ ಮಹಿಳೆಯರಿಗೆ ಕನಿಷ್ಠ ರೂ.1,000 ನೀಡಿ” ದು ಸಲಹೆ ನೀಡಿದರು. ಇದೇ ವೇಳೆ ಅವರ ಸರ್ಕಾರವು 2021 ರ ಪ್ರಣಾಳಿಕೆಯಲ್ಲಿ ಪಕ್ಷ ನೀಡಿದ 90% ಭರವಸೆಗಳನ್ನು ಪೂರೈಸಿದೆ ಎಂದು ಡಿಎಂಕೆ ಅಧ್ಯಕ್ಷರು ಹೇಳಿದರು.

“ಈ ಚುನಾವಣೆಯಲ್ಲಿಯೂ ನಾವು ನಮಗೆ ನೀಡಬಹುದಾದ ಭರವಸೆಗಳನ್ನು ಮಾತ್ರ ನೀಡಿದ್ದೇವೆ. ಟಿವಿಕೆ ತನ್ನ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ (ಪಡಿತರ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಲ್ಲೇಖಿಸಿ),” ಎಂದು ಅವರು ಹೇಳಿದರು. ಇದೇ ವೇಳೆ ಭರವಸೆ ಈಡೇರಿಸಿದರೆ ನಾವು ಸಂತೋಷಪಡುತ್ತೇವೆ.”

ಡಿಎಂಕೆ ಅಧ್ಯಕ್ಷರ ನಿವಾಸಕ್ಕೆ ಬುಧವಾರ ಬೆಳಗಿನ ಜಾವದಿಂದಲೇ ಮಾಜಿ ಸಚಿವರು, ಪಕ್ಷದ ಮುಖಂಡರು, ಮೈತ್ರಿಕೂಟದ ಪಾಲುದಾರರು ಮತ್ತು ವಿವಿಧ ಕ್ಷೇತ್ರಗಳ ಹಿತೈಷಿಗಳು ಭೇಟಿ ನೀಡಿದರು. ನಂತರ ಡಿಎಂಕೆ ಪ್ರಧಾನ ಕಚೇರಿಯಾದ ಅಣ್ಣಾ ಅರಿವಲಯಂನಲ್ಲಿ ಅವರಿಗೆ ಭೇಟಿಗೆ ಅವಕಾಶ ನೀಡಲಾಯಿತು.

ರಾಜಕೀಯ

ಜನರ ತೀರ್ಪನ್ನು ಅವಮಾನಿಸದೆ ವಿಜಯ್‌ಗೆ ಅವಕಾಶ ನೀಡಿ: ತಮಿಳುನಾಡು ರಾಜ್ಯಪಾಲರ ನಡೆಗೆ ಕಮಲ್ ಹಾಸನ್ ಗರಂ

ಜನರ ತೀರ್ಪನ್ನು ಅವಮಾನಿಸದೆ ವಿಜಯ್‌ಗೆ ಅವಕಾಶ ನೀಡಿ: ತಮಿಳುನಾಡು ರಾಜ್ಯಪಾಲರ ನಡೆಗೆ ಕಮಲ್

ತಮಿಳುನಾಡಿನಲ್ಲಿ ನೂತನ ಸರಕಾರ ರಚನೆಗೆ ವಿಜಯ್ (Vijay) ನೇತೃತ್ವದ ಟಿವಿಕೆ (TVK) ಭರದಿಂದ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಾದ ರಾಜೇಂದ್ರ ಮಾಡಿ ಸರಕಾರ ಅರ್ಲೇಕರ್‌ರನ್ನು ಭೇಟಿ ರಚನೆಗೆ ವಿಜಯ್ ಹಕ್ಕು ಮಂಡಿಸಿದ್ದಾರೆ. ಆದರೆ

[ccc_my_favorite_select_button post_id="121857"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ಬಕ್ರೀದ್; ಅಕ್ರಮ ಗೋವು ಸಾಗಣೆ / ಹತ್ಯೆ ಮಾಡಿದರೆ ಜೈಲು.. ಜಿಲ್ಲಾಧಿಕಾರಿ ವಾರ್ನಿಂಗ್

ಬಕ್ರೀದ್; ಅಕ್ರಮ ಗೋವು ಸಾಗಣೆ / ಹತ್ಯೆ ಮಾಡಿದರೆ ಜೈಲು.. ಜಿಲ್ಲಾಧಿಕಾರಿ ವಾರ್ನಿಂಗ್

ಗೋವುಗಳ ಅಕ್ರಮ ಸಾಗಣೆ ಅಥವಾ ಹತ್ಯೆ (illegal cow transport/slaughter) ಮಾಡಿದಲ್ಲಿ ಏಳು ವರ್ಷ ಜೈಲು, ಹಾಗೂ ರೂ 10 ಲಕ್ಷ ಗಳ ವರೆಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

[ccc_my_favorite_select_button post_id="121833"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]