
ದೊಡ್ಡಬಳ್ಳಾಪುರ: ದೇವಾಂಗ ಸಮನ್ವಯ ಸಮಿತಿ ವತಿಯಿಂದ ಇಂದು ನಗರದ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ದೇವಾಂಗ ಸಂಘಟನಾ ಸಮಾವೇಶಕ್ಕೆ ಹಂಪಿ ಹೇಮಕೂಟದ ಪೀಠಾಧ್ಯಕ್ಷ ದೇವಾಂಗ ಜಗದ್ಗುರು ಶ್ರೀ ದಯಾನಂದಪುರಿ ಸ್ವಾಮೀಜಿ ಚಾಲನೆ ನೀಡಿದರು.
ದೇವಾಂಗ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಕಲ್ಪ, ದೇವಾಂಗ ಸಮುದಾಯದ ಸಮಗ್ರ ಪ್ರಗತಿ ಹಾಗೂ ದೇವಾಂಗ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಒತ್ತಾಯಿಸಿ ಇಂದು ದೇವಾಂಗ ಸಂಘಟನಾ ಸಮಾವೇಶವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಕೆ.ನಾರಾಯಣ, ಆಂಧ್ರದ ದೇವಾಂಗ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಬೀರಕ ಸುರೇಂದ್ರ, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರಮೇಶ್, ದೇವಾಂಗ ಮಂಡಲಿ ಅಧ್ಯಕ್ಷ ಕೆ.ಜಿ.ದಿನೇಶ್, ಗಾಯಿತ್ರಿ ಪೀಠ ಮಿತ್ರಬಳಗ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ಆಂಧ್ರ ದೇವಾಂಗ ಸಂಕ್ಷೇಮ ಟ್ರಸ್ಟ್ ಕಾರ್ಯದರ್ಶಿ ಡಿ.ಎ.ಶ್ರೀನಾಥ್, ಟಿ.ಎಂಸಿಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್, ನಗರಸಭೆ ಮಾಜಿ ಸದಸ್ಯ ಲೋಕೇಶ್ ಬಾಬು, ಆಂಧ್ರ ದೇವಾಂಗ ಸಂಘದ ನಿರ್ದೇಶಕ ಕೇಶವಮೂರ್ತಿ, ದೇವಾಂಗ ಮಂಡಳಿ ಸಹ ಕಾರ್ಯದರ್ಶಿ ಯೋಗ ನಟರಾಜ್, ನಿರ್ದೇಶಕ ಅಖಿಲೇಶ್, ಮುಖಂಡರಾದ ಕೆರಮುಲು ಬದ್ರಿ, ಶಿವಾನಂದ್, ಎನ್.ಜಿ.ಕುಮಾರ್, ರಮೇಶ್ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

