
ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಬೈಪಾಸ್ ರಸ್ತೆ ಬಳಿ ಅಬಕಾರಿ ಅಧಿಕಾರಿಗಳು ರಸ್ತೆ ಗಾವಲು ಮಾಡುತ್ತಿರುವಾಗ, ವೆಂಕಟಾಪುರ ಕಡೆಯಿಂದ ದೇವನಹಳ್ಳಿ ಮಾರ್ಗವಾಗಿ ಬರುತ್ತಿದ್ದ ನೀಲಿ ಬಣ್ಣದ ಸ್ವಿಪ್ಟ್ ಕಾರ್ ಪರಿಶೀಲಿಸಿದಾಗ 2 ಕೆಜಿ 700 ಗ್ರಾಂ ಒಣ ಗಾಂಜಾ ಹಾಗೂ ಎಲೆಗಳು ಪತ್ತೆಯಾಗಿದ್ದು, ಇದರ ಒಟ್ಟು ಮೌಲ್ಯ ರೂ. 9,50,500/-ಗಳಾಗಿದ್ದು, ಎನ್.ಡಿ.ಪಿ.ಎಸ್. ಕಾಯಿದೆ 1985ರಡಿ ಪ್ರಕರಣವನ್ನು ದಾಖಲಿಸಲಾಗಿದೆ.

ಆರೋಪಿಗಳಾದ 24 ವರ್ಷ ವಯಸ್ಸಿನ ಭರತ್ ಸೂರ್ಯಾ ಹಾಗೂ ಶ್ರೀಕಾಂತ್ ಆಂಧ್ರ ಮೂಲದವರಾಗಿದ್ದು, ಇವರುಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಹೊಸಕೋಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಜನಾಯಿ, ದೇವನಹಳ್ಳಿ ವಲಯದ ಅಬಕಾರಿ ನಿರೀಕ್ಷಕರಾದ ದಿಲೀಪ್‍ಕುಮಾರ್.ಎಂ.ವಿ, ಹೊಸಕೋಟೆ ವಲಯದ ಅಬಕಾರಿ ನಿರೀಕ್ಷಕರಾದ ರಾಜಶೇಖರ್.ಆರ್.ಕರಡಕಲ್, ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕರಾದ ಭರತ್.ಕೆ.ಎನ್. ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

