
ದೊಡ್ಡಬಳ್ಳಾಪುರ: ಮಾಸಿದ ಹಳೇ ಸೀರೆಯನ್ನ ಪಾತ್ರೆ ಮಾರುವನಿಗೆ ಹಾಕಿ ಪಾತ್ರೆಗಳನ್ನ ತಗೊಳ್ತಾರೆ, ಇನ್ನೂ ಹಳೇ ಪ್ಲಾಸ್ಟಿಕ್ ಚೀಲಗಳು ಕಸಕ್ಕೆ ಸೇರುವ ಮೂಲಕ ಕಸವನ್ನು ವಿಷವಾಗಿಸುತ್ತೆ, ಆದರೆ ಉತ್ತರ ಕರ್ನಾಟಕದ ಇವರು ಮಾಸಿದ ಸೀರೆ ಮತ್ತು ಹರಿದ ಚೀಲದಿಂದ ಹಗ್ಗ ಮಾಡಿ ಕೊಡುವ ಮೂಲಕ ಕಸದಿಂದ ರಸ ತಯಾರಿಸುವ ಕಾಯಕ ಮಾಡುತ್ತಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ನಿವಾಸಿಗಳಾದ ಇವರು ಮಾಸಿದ ಸೀರೆ ಮತ್ತು ಹರಿದ ಪ್ಲಾಸ್ಟಿಕ್ ಚೀಲಗಳಿಂದ ಹಗ್ಗ ತಯಾರಿಸುವ ಕಾಯಕ ಜೀವಿಗಳು, ಮಳೆಗಾಲ ಮುಗಿದು ಬೇಸಿಗೆ ಪ್ರಾರಂಭವಾಗುವ ಹೊತ್ತಿಗೆ ಕೃಷಿ ಚಟುವಟಿಕೆಗಳು ಮುಗಿತ್ತಿರುತ್ತೆ, ಹಗ್ಗ ತಯಾರಿಸುವ ಕಲೆಯೊಂದಿಗೆ ಸ್ಕೂಟರ್ ಗಳಲ್ಲಿ ಕುಟುಂಬ ಸಮೇತ ಬಯಲು ಸೀಮೆಯ ಬೆಂಗಳೂರು ಗ್ರಾಮಾಂತರ,ಚಿಕ್ಕಬಳ್ಳಾಪುರ ಜಿಲ್ಲೆಗಳತ್ತ ವಲಸೆ ಬರುತ್ತಾರೆ, ಪುಟ್ಟದಾದ ಹಗ್ಗ ತಯಾರಿಸುವ ಯಂತ್ರವೇ ಇವರ ಬಳಿ ಇರುವ ಏಕೈಕ ಯಂತ್ರ, ಈ ಯಂತ್ರವನ್ನು ತಗೊಂಡು ಹಳ್ಳಿಗಳತ್ತ ವಲಸೆ ಹೋಗುತ್ತಾರೆ, ಗ್ರಾಮದ ಮಧ್ಯದಲ್ಲಿ ಹಗ್ಗ ತಯಾರಿಸುವ ಯಂತ್ರ ಇಟ್ಟು ಹಗ್ಗ ತಯಾರಿಸಲು ಪ್ರಾರಂಭಿಸುತ್ತಾರೆ, ಇವರನ್ನ ಕಂಡ ರೈತಾಪಿ ಜನರು ತಮ್ಮ ಮನೆಯಲ್ಲಿರುವ ಮಾಸಿದ ಸೀರೆಗಳು ಮತ್ತು ಹರಿದ ಪ್ಲಾಸ್ಟಿಕ್ ಚೀಲಗಳನ್ನು ಇವರಿಗೆ ತಂದು ಕೊಡುತ್ತಾರೆ, ನೋಡು ನೋಡುತ್ತಾಲೆ ಮಾಸಿದ ಸೀರೆ ಮತ್ತು ಹರಿದ ಚೀಲಗಳನ್ನ ಪ್ಲಾಸ್ಟಿಕ್ ಹಗ್ಗವಾಗಿಸುತ್ತಾರೆ,
ಹಗ್ಗ ತಯಾರಿಸುವ ನಾಲ್ಕೈದು ಕುಟುಂಬಗಳು ಜೊತೆ ಜೊತೆಯಾಗಿ ಸಂಚಾರಿಸುತ್ತವೆ, ಒಂದೊಂದು ಕುಟುಂಬ ಅಕ್ಕಪಕ್ಕದೂರಿನಲ್ಲಿ ಹಗ್ಗವನ್ನು ತಯಾರಿಸುತ್ತಾರೆ, ಕೆಲಸ ಮುಗಿದ ನಂತರ ರಾತ್ರಿ ಎಲ್ಲರು ಒಂದೆಡೆ ಸೇರಿ ವಾಸ್ತವ್ಯ ಮಾಡುತ್ತಾರೆ, ಒಮ್ಮೆ ಊರನ್ನು ಬಿಟ್ಚಾರೆ ಒಂದು ತಿಂಗಳು ಊರೂರು ಸುತ್ತಿ ಮತ್ತೆ ತಮ್ಮ ಊರುಗಳಿಗೆ ಮರಳುತ್ತಾರೆ.
ಒಂದು ಯಂತ್ರದೊಂದಿಗೆ ಕೆಲಸ ಮಾಡುಲು ಮೂವರು ಬೇಕಿದ್ದು ಒಬ್ಬರು ಯಂತ್ರವನ್ನು ತಿರುಗಿಸಿದ್ದಾರೆ, ಇನ್ನಿಬ್ಬರು ಹಗ್ಗವನ್ನು ಉರಿಗೊಳಿಸುತ್ತಾರೆ, ಒಂದು ಮಾರು ಹಗ್ಗ ತಯಾರಿಸಲು 15 ರಿಂದ 20 ರೂಪಾಯಿ ತೆಗೆದು ಕೊಳ್ಳುವ ಇವರು ದಿನಕ್ಕೆ ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾರೆ, ಊರಿಗೆ ಮರಳುವ ಹೊತ್ತಿಗೆ 20 ರಿಂದ 25 ಸಾವಿರ ಸಂಪಾದಿಸಿರುತ್ತಾರೆ. ಇವರು ತಯಾರಿಸಿದ ಹಗ್ಗಗಳು ಹಸುಗಳನ್ನು ಕಟ್ಟಿ ಹಾಕಲು ಮತ್ತು ಕೃಷಿ ಚಟುವಟಿಕೆಗಳಿಗೆ ಉಪಯುಕ್ತವಾಗಿದೆ, ಒಂದು ವರ್ಷ ಬಾಳಿಕೆ ಬರುವ ಹಗ್ಗಗಳನ್ನು ರೈತರು ಸಹ ಖುಷಿಯಿಂದ ತೆಗೆದು ಕೊಳ್ಳುವರು.
ಮಾಸಿದ ಹಳೇ ಸೀರೆಗಳು ಮತ್ತು ಹರಿದ ಪ್ಲಾಸ್ಟಿಕ್ ಚೀಲಗಳು ಕಸಕ್ಕೆ ಸೇರಿ ಕಸವನ್ನು ವಿಷ ಮಾಡುತ್ತೆ ಆದರೆ ಇವರ ಕಾಯಕದಿಂದ ಕಸ ಸೇರ ಬೇಕಾದ ವಸ್ತುಗಳು ಕೃಷಿ ಚಟುವಟಿಕೆಗಳಲ್ಲಿ ಬಳಕೆಯಾಗುವ ಮೂಲಕ ಉಪಯುಕ್ತವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

