ಏ.9 ರಿಂದ ಮೇ 30ರ ವರೆಗೆ ಐಪಿಎಲ್ / ಆರ್ ಸಿಬಿ ಅಭಿಮಾನಿಗಳಿಗೆ ನಿರಾಸೆ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 14ನೇ ಆವೃತ್ತಿಯ ಪಂದ್ಯದ ಆಟಗಳು ಏ. 9 ರಿಂದ, ಮೇ 30ರ ವರೆಗೆ ಭಾರತದ 6 ನಗರಗಳಲ್ಲಿ ನಡೆಯಲಿದೆ ಎಂದು  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟ್ವಿಟ್ ಮಾಡುವ ಮೂಲಕ ತಿಳಿಸಿದೆ.

ಬಿಸಿಸಿಐ ತಿಳಿಸಿರುವ ಪ್ರಕಾರ, ಐಪಿಎಲ್ ಪಂದ್ಯಾಟಗಳಿಗಾಗಿ ಬೆಂಗಳೂರು, ಚೆನ್ನೈ, ದೆಹಲಿ, ಅಹಮದಾಬಾದ್, ಕೋಲ್ಕತ್ತಾ ಹಾಗೂ ಮುಂಬೈ ನಗರಗಳನ್ನು ಆಯ್ಕೆ ಮಾಡಲಾಗಿದೆ. ಏಪ್ರಿಲ್ 9ರಿಂದ ಮೇ 30ರ ವರೆಗೆ 56 ಲೀಗ್ ಹಂತದ ಪಂದ್ಯಾಟಗಳು ನಡೆಯಲಿದೆ.

ಈ ಐಪಿಎಲ್ ಪಂದ್ಯಗಳು ತಟಸ್ಥ ಸ್ಥಳಗಳಲ್ಲೇ ಹೆಚ್ಚಿನ ಪಂದ್ಯ ನಡೆಯಲಿದ್ದು, ಎಲ್ಲಾ ತಂಡಗಳು ಲೀಗ್ ಹಂತದ ಪಂದ್ಯಗಳನ್ನು ತವರಿನಂಗಳದಲ್ಲಿ ಆಡದೆ ಬೇರೆ ಬೇರೆ ಅಂಕಣಗಳಲ್ಲಿ ಎದುರು ಬದುರಾಗಲಿದೆ.

14ನೇ ಆವೃತ್ತಿಯ ಐಪಿಎಲ್ ನಲ್ಲಿ 11 ಡಬಲ್ ಹೆಡ್ಡರ್ ಪಂದ್ಯಾಟಗಳು ನಡೆಯಲಿದ್ದು 6 ತಂಡಗಳು 3 ಮದ್ಯಾಹ್ನದ ನಂತರದ ಪಂದ್ಯಾಟಗಳನ್ನು ಆಡಿದರೆ, 2 ತಂಡ, 2 ಮಧ್ಯಾಹ್ನದ ನಂತರದ ಪಂದ್ಯವನ್ನು ಆಡಳಿದೆ. ಮಧ್ಯಹ್ನದ ಪಂದ್ಯಾಟಗಳು ಭಾರತೀಯ ಕಾಲಮಾನ 3:30 ಗಂಟೆಗೆ ಪ್ರಾರಂಭವಾದರೆ, ರಾತ್ರಿಯ ಪಂದ್ಯಗಳು 7:30 ಗಂಟೆಗೆ ಪ್ರಾರಂಭವಾಗಲಿದೆ.

RCB ಅಭಿಮಾನಿಗಳಿಗೆ ನಿರಾಸೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)ಸೇರಿದಂತೆ ಎಲ್ಲ ಎಂಟು ತಂಡಗಳು ತನ್ನ ‘ಹೋಮ್’ ಹಾಗೂ ‘ಅವೇ’ ಪಂದ್ಯಗಳನ್ನು ತಣಸ್ಥ ತಾಣಗಳಲ್ಲಿ ಆಡಲಿವೆ.

ಇದರಿಂದಾಗಿ ಬೆಂಗಳೂರಿನ  ಪಂದ್ಯಗಳನ್ನು ಚಿನ್ನಸ್ವಾಮಿ ಮೈದಾನದಲ್ಲಿ ನೋಡುವ ಆರ್‌ಸಿಬಿ ಅಭಿಮಾನಿಗಳ ಕನಸಿಗೆ ಹಿನ್ನೆಡೆಯಾಗಿದೆ. ಆರಂಭಿಕ ಹಂತದಲ್ಲಿ ಟೂರ್ನಿಯು ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದ್ದು, ಮುಂದಿನ ಹಂತದಲ್ಲಿ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರೇಕ್ಷಕರಿಗೆ ಅನುಮತಿ ನೀಡಬೇಕೇ ಎಂಬುದರ ಕುರಿತು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಲಿದೆ.

RCB ವೇಳಾಪಟ್ಟಿ ಇಂತಿದೆ:

ಆರ್‌ಸಿಬಿ / ಮುಂಬೈ, ಏ.9, ಶುಕ್ರವಾರ, ತಾಣ: ಚೆನ್ನೈ, ಸಮಯ: ರಾತ್ರಿ 7.30ಕ್ಕೆ

ಆರ್‌ಸಿಬಿ / ಹೈದರಾಬಾದ್, ಏ.14, ಬುಧವಾರ, ತಾಣ: ಚೆನ್ನೈ, ಸಮಯ: ರಾತ್ರಿ 7.30ಕ್ಕೆ

ಆರ್‌ಸಿಬಿ / ಕೋಲ್ಕತ್ತ, ಏ.18, ಭಾನುವಾರ, ತಾಣ: ಚೆನ್ನೈ, ಸಮಯ: ಸಂಜೆ 3.30ಕ್ಕೆ

ಆರ್‌ಸಿಬಿ / ರಾಜಸ್ಥಾನ, ಏ.22, ಗುರುವಾರ, ತಾಣ: ಮುಂಬೈ, ಸಮಯ: ರಾತ್ರಿ 7.30ಕ್ಕೆ

ಆರ್‌ಸಿಬಿ / ಚೆನ್ನೈ, ಏ.25, ಭಾನುವಾರ, ತಾಣ: ಮುಂಬೈ, ಸಮಯ: ಸಂಜೆ 3.30ಕ್ಕೆ

ಆರ್‌ಸಿಬಿ / ಡೆಲ್ಲಿ, ಏ.27, ಮಂಗಳವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ

ಆರ್‌ಸಿಬಿ / ಪಂಜಾಬ್, ಏ.30, ಶುಕ್ರವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ

ಆರ್‌ಸಿಬಿ / ಕೋಲ್ಕತ್ತ, ಮೇ 3, ಸೋಮವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ

ಆರ್‌ಸಿಬಿ / ಪಂಜಾಬ್, ಮೇ 6, ಗುರುವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ

ಆರ್‌ಸಿಬಿ / ಹೈದರಾಬಾದ್, ಮೇ 9, ಭಾನುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ

ಆರ್‌ಸಿಬಿ / ಡೆಲ್ಲಿ, ಮೇ 14, ಶುಕ್ರವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ

ಆರ್‌ಸಿಬಿ/ ರಾಜಸ್ಥಾನ, ಮೇ 16, ಭಾನುವಾರ, ತಾಣ: ಕೋಲ್ಕತ್ತ, ಸಮಯ: ಸಂಜೆ 3.30ಕ್ಕೆ

ಆರ್‌ಸಿಬಿ / ಮುಂಬೈ, ಮೇ 20, ಗುರುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ

ಆರ್‌ಸಿಬಿ / ಚೆನ್ನೈ, ಮೇ 23, ಭಾನುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಜನರ ತೀರ್ಪನ್ನು ಅವಮಾನಿಸದೆ ವಿಜಯ್‌ಗೆ ಅವಕಾಶ ನೀಡಿ: ತಮಿಳುನಾಡು ರಾಜ್ಯಪಾಲರ ನಡೆಗೆ ಕಮಲ್ ಹಾಸನ್ ಗರಂ

ಜನರ ತೀರ್ಪನ್ನು ಅವಮಾನಿಸದೆ ವಿಜಯ್‌ಗೆ ಅವಕಾಶ ನೀಡಿ: ತಮಿಳುನಾಡು ರಾಜ್ಯಪಾಲರ ನಡೆಗೆ ಕಮಲ್

ತಮಿಳುನಾಡಿನಲ್ಲಿ ನೂತನ ಸರಕಾರ ರಚನೆಗೆ ವಿಜಯ್ (Vijay) ನೇತೃತ್ವದ ಟಿವಿಕೆ (TVK) ಭರದಿಂದ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಾದ ರಾಜೇಂದ್ರ ಮಾಡಿ ಸರಕಾರ ಅರ್ಲೇಕರ್‌ರನ್ನು ಭೇಟಿ ರಚನೆಗೆ ವಿಜಯ್ ಹಕ್ಕು ಮಂಡಿಸಿದ್ದಾರೆ. ಆದರೆ

[ccc_my_favorite_select_button post_id="121857"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ಬಕ್ರೀದ್; ಅಕ್ರಮ ಗೋವು ಸಾಗಣೆ / ಹತ್ಯೆ ಮಾಡಿದರೆ ಜೈಲು.. ಜಿಲ್ಲಾಧಿಕಾರಿ ವಾರ್ನಿಂಗ್

ಬಕ್ರೀದ್; ಅಕ್ರಮ ಗೋವು ಸಾಗಣೆ / ಹತ್ಯೆ ಮಾಡಿದರೆ ಜೈಲು.. ಜಿಲ್ಲಾಧಿಕಾರಿ ವಾರ್ನಿಂಗ್

ಗೋವುಗಳ ಅಕ್ರಮ ಸಾಗಣೆ ಅಥವಾ ಹತ್ಯೆ (illegal cow transport/slaughter) ಮಾಡಿದಲ್ಲಿ ಏಳು ವರ್ಷ ಜೈಲು, ಹಾಗೂ ರೂ 10 ಲಕ್ಷ ಗಳ ವರೆಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

[ccc_my_favorite_select_button post_id="121833"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]