
ದೊಡ್ಡಬಳ್ಳಾಪುರ: ಶಿವರಾತ್ರಿ ಹಬ್ಬದ ಪ್ರಯುಕ್ತ ನಗರದಲ್ಲಿ ಪ್ರಾಣಿ ವಧೆ ನಿಷೇಧಿಸಿ ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಆದೇಶ ಹೊರಡಿಸಿದ್ದಾರೆ.

ಹರಿತಲೇಖನಿಗೆ ನಗರಸಭೆ ನೀಡಿರುವ ಆದೇಶ ಪ್ರತಿಯನ್ವಯ ಮಾರ್ಚ್ 11ರಂದು ನಗರದಲ್ಲಿನ ಎಲ್ಲಾ ರೀತಿಯ ಮಾಂಸದ ಅಂಗಡಿ, ಕೋಳಿ ಅಂಗಡಿಗಳನ್ನು ಹಾಗೂ ಮಾಂಸಹಾರಿ ಹೋಟೆಲ್ ಗಳನ್ನು ಕಡ್ಡಾಯವಾಗಿ ಮುಚ್ಚಲು ತಿಳಿಸಿದೆ.
ಈ ಆದೇಶವನ್ನು ಮೀರಿದಲ್ಲಿ ಅಂತವರ ಪರವಾನಗಿಗಳನ್ನು ರದ್ದುಗೊಳಿಸಲು ಕಾನೂನಿನ ಕ್ರಮ ಕೈಗೊಳ್ಳಲಾಗುವುದೆಂದು ಆಯುಕ್ತರು ಎಚ್ಚರಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

