
ಚಿಕ್ಕಬಳ್ಳಾಪುರ: ಇತಿಹಾಸ ಪ್ರಸಿದ್ದ ತಾಲ್ಲೂಕಿನ ನಂದಿಯ ಭೋಗನಂದೀಶ್ವರದ ಜೋಡಿ ಬ್ರಹ್ಮ ರಥೋತ್ಸವ ಅತ್ಯಂತ ವಿಜೃಂಭನೆಯಿಂದ ನೆರವೇರಿತು. ಮಹಾಶಿವರಾತ್ರಿಯ ಮಾರನೇ ದಿನ ನಡೆಯುವ ಈ ಅಪೂರ್ವ ಸನ್ನಿವೇಶಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಸಾಕ್ಷಿಯಾದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಸುಪ್ರಸಿದ್ದ ನಂದಿಗಿರಿಧಾಮದ ತಪ್ಪಲಲ್ಲಿರುವ ನಂದಿಯ ಶ್ರೀ ಭೋಗನಂದೀಶ್ವರ ದೇವಾಯಲದ ಬ್ರಹ್ಮ ರಥೋತ್ಸವ ವೈಭವಯುತವಾಗಿ ನೆರವೇರಿತು. ಈ ಅದ್ದೂರಿ ಜೋಡಿ ರಥೋತ್ಸವಕ್ಕೆ ಈ ಬಾರಿ ಭಕ್ತರೆ ಚಾಲನೆ ನೀಡಿದ ನಂತರ ಚಿಕ್ಕರಥದಲ್ಲಿ ಅಂಬಿಕಾ ಹಾಗೂ ಗಣಪತಿ ಮತ್ತು ದೊಡ್ಡ ರಥದಲ್ಲಿ ಗಿರಿಜಾಂಬ ಸಮೇತರಾಗಿ ಶ್ರೀ ಭೋಗನಂದೀಶ್ವರಸ್ವಾಮಿ ದೇವರುಗಳ ಬ್ರಹ್ಮ ರಥೋತ್ಸವ ನಡೆಯಿತು. ಸಾವಿರಾರು ಮಂದಿ ರಥವನ್ನ ಎಳೆಯುವ ಮೂಲಕ ತಮ್ಮ ಕೋರಿಕೆಗಳನ್ನ ತೀರಿಸಿದರೆ, ಇನ್ನೂ ಕೆಲವರು ದವನ ಎಲೆಕ್ಕಿ ಬಾಳೆಹಣ್ಣನ್ನ ರಥಕ್ಕೆ ಎಸೆಯುವ ಮೂಲಕ ಹರಕೆ ತೀರಿಸಿಕೊಂಡರು.
1300 ವರ್ಷಗಳಿಗೂ ಹೆಚ್ಚು ಪುರಾತನವಾದ ಭೋಗನಂದೀಶ್ವರ ಬ್ರಹ್ಮರಥೋತ್ಸವದಲ್ಲಿ ಗತಕಾಲದ ವೈಭವ ಕಾಣದಿದ್ದರೂ ರಥೋತ್ಸವಕ್ಕೆ ಬಂದ ಭಕ್ತಾಧಿಗಳಗಂತೂ ಬೇಸರವಾಗಲಿಲ್ಲ. ನಂದಿ ಸುತ್ತಮುತ್ತಲಿನ ಗ್ರಾಮಸ್ಥರು , ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ರಾಜ್ಯ ಮತ್ತು ನೆರೆಯ ಆಂಧ್ರಪ್ರದೇಶದ,ತೆಲಾಂಗಣಾ,ತಮಿಳುನಾಡು ರಾಜ್ಯಗಳಿಂದ ಬಂದ ಭಕ್ತಾಧಿಗಳು ದೇವರ ದರ್ಶನ ಮಾಡಿ ಹರಕೆ ತೀರಿಸಿದರು.
ಕಳೆದ ವರ್ಷ ಸುಳ್ವಾಡಿ ಮಾರಮ್ಮನ ವಿಷ ಪ್ರಸಾದ ಕಾರಣ ಈ ವರ್ಷ ಕರೊನಾ ಕಾರಣ ನೀಡಿ ಜಿಲ್ಲಾಡಳಿತ ಬಂದ ಭಕ್ತಾಧಿಗಳು ಪ್ರಸಾದ, ಮಜ್ಜಿಗೆ, ಊಟ ಸೇರಿದಂತೆ ಅಗತ್ಯ ಸೌಲಭ್ಯಗಳು ನೀಡದಂತೆ ನಿಷೇಧ ಹೇರಿದ್ದರಿಂದ ದೂರದಿಂದ ಬಂದು ಉಪವಾಸ ಜಾಗರಣೆ ಮಾಡಿದ ಭಕ್ತರು ಪ್ರಸಾದ ವಿಲ್ಲದೆ ವಂಚಿತರಾದರು.
ಐತಿಹಾಸಿಕ ನಂದಿ ಜಾತ್ರೆಗೆ ಬರುವ ಭಕ್ತರು ವರ್ಷ ವರ್ಷ ಹೆಚ್ಚುತ್ತಲೇ ಇದ್ದಾರೆ. ಜನ ದೇವರ ಮೇಲಿನ ನಂಬಿಕೆಯಿಂದ ಬರುತ್ತಾರೆ. ತಮ್ಮ ಇಷ್ಟಾರ್ಥಸಿದ್ದಿಗೆ ಬೇಡಿಕೊಂಡು ಹರಕೆ ಹೊರುತ್ತಾರೆ. ಇಷ್ಟಾರ್ಥಗಳು ಈಡೇರಿದ ನಂತರ ಹರಕೆಗಳನ್ನು ತೀರುಸುತ್ತಾರೆನ್ನುವ ನಂಬಿಕೆ ಇಲ್ಲಿಗೆ ಬರುವ ಭಕ್ತರದು.
ಕರೊನಾ ಹೆಮ್ಮಾರಿ ಇರುವುದರಿಂದ ಜನ ಮಾತ್ರ ಮಾಸ್ಕ್ ಧರಿಸದೇ ಇದ್ದರು ಸಹಾ ಜಿಲ್ಲಾಡಳಿತ ಯಾವುದೇ ಮುನ್ನೆಚರಿಕೆ ಕ್ರಮ ತೆಗೆದುಕೊಳ್ಳದೆ ಇದ್ದದ್ದು ಜನತೆಯಲ್ಲಿ ಆತಂಕ ಮೂಡಿತ್ತು.
ಜನತೆ ಅಧುನಿಕ ಜಗತ್ತಿಗೆ ಅಂಟಿಕೊಳ್ಳಾತಾ ಇದ್ದರೂ ಇನ್ನೂ ನಮ್ಮ ಪರಂಪರೆಯನ್ನ ಉಳಿಸಿಕೊಂಡು ಬರೋದರಲ್ಲಿ ಯಶಸ್ವಿಯಾಗಿದ್ದೇವೆ. ಅದರೂ ಗತಕಾಲದ ಅದ್ದೂರಿತನ, ಆ ವೈಭವ, ಜನರ ಕಾಳಜಿ ಅಷ್ಟಾಗಿ ಕಂಡು ಬರದೆ ಇರುವುದು ಸ್ವಲ್ಪ ಮಟ್ಟಿಗೆ ಬೇಸರ. ಇಷ್ಟೊಂದು ಅದ್ದೂರಿಯಾಗಿ ನಡೆದ ಜಾತ್ರೆಗೆ ಜಿಲ್ಲಾಡಳಿತ ಮತ್ತಷ್ಟು ಸಹಕಾರ ಕೊಟ್ಟಿದ್ದರೆ ಇನ್ನಷ್ಟು ವಿಜೃಂಭನೆಯಾಗಿ ಮಾಡಬಹುದಿತ್ತು ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

