
ಗೌರಿಬಿದನೂರು: ಜಾನುವಾರುಗಳ ಶೆಡ್ಗೆ ಆಕಸ್ಮಿಕ ಬೆಂಕಿ ಬಿದ್ದ ಹಿನ್ನೆಲೆ 60 ಕುರಿಗಳು, 20 ಮೇಕೆ, 4 ಹಸುಗಳು ಸುಟ್ಟು ಭಸ್ಮವಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪೂಲಮಾಕಲಹಳ್ಳಿ ಗ್ರಾಮದ ಬಳಿ ನಡೆದಿದೆ.

ಪೂಲಮಾಕಲಹಳ್ಳಿ ಗ್ರಾಮದ ರೈತ ಗಂಗಾಧರಪ್ಪ ಅವರಿಗೆ ಸೇರಿದ ಜಾನುವಾರು ಶೆಡ್ಗೆ ನಿನ್ನೆ ರಾತ್ರಿ ಸುಮಾರು 9:30 ರ ಸಮಯದಲ್ಲಿ ಆಕಸ್ಮಿಕ ಬೆಂಕಿ ಬಿದ್ದು ಸುಮಾರು 60 ಕುರಿಗಳು ಹಾಗೂ 4 ಹಸುಗಳು 20 ಮೇಕೆಗಳು ಬೆಂಕಿಯಲ್ಲಿ ಸುಟ್ಟು ಸಂಪೂರ್ಣ ಭಸ್ಮವಾಗಿದೆ.ರೈತ ಗಂಗಾಧರಪ್ಪ ಹೈನುಗಾರಿಕೆ ನಂಬಿಕೊಂಡು ಜೀವನ ಮಾಡುತ್ತಿದ್ದು, ಮೂಕ ಜೀವಿಗಳ ಸಾವಿನಿಂದ ದಿಕ್ಕು ತೋಚದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದಿಂದ ಹಾಗೂ ತಾಲೂಕು ಆಡಳಿತದಿಂದ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

