
ದೊಡ್ಡಬಳ್ಳಾಪುರ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಮುಕ್ತಾಂಬಿಕಾ ಬಡಾವಣೆಯ ಮೊದಲ ವೃತ್ತದ ಶ್ರೀ ಮುತ್ಯಾಲಮ್ಮ ಕಲಾ ಸಂಘದಿಂದ ಮಹಿಳಾ ಜಾನಪದ ಉತ್ಸವವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬ ಪುರುಷನ ಯಶಸ್ವಿಗೆ ಮಹಿಳೆ ಮುಖ್ಯ ಪಾತ್ರ ವಹಿಸುತ್ತಾರೆ. ಮಹಿಳೆಯರು ಎಲ್ಲ ರಂಗದಲ್ಲಿ ಭಾಗಿಯಗಬೇಕು ಮಹಿಳೆಯರು ಸಂವಿಧಾನ ನೀಡಿರುವ ಹಕ್ಕುಗಳನ್ನು ಪಡೆದುಕೊಳ್ಳಬೇಕು, ಮಹಿಳೆಯರಿಗೆ ತಾಳ್ಮೆ ಬಹುಮುಖ್ಯವಾದದ್ದು ತಾಳ್ಮೆಯಿಂದ ಇದ್ದರೆ ಗುರಿಮುಟ್ಟಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ, ಎ.ಎಲ್.ರಾಧ, ತಾಪಂ ಸದಸ್ಯೆ ಅನ್ನಪೂರ್ಣಮ್ಮ, ಸಿಡಿಪಿಒ ಅನಿತಾಲಕ್ಷ್ಮೀ, ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್.ಪ್ರಭಾ, ಕಾಂಗ್ರೆಸ್ ಕಿಸಾನ್ ಘಟಕದ ಕುಮುದಾ, ಮುಖಂಡರಾದ ಹೇಮಂತ್ ರಾಜು, ಕೆ.ನಾಗರಾತ್ನಮ್ಮ, ಡಿ.ಎನ್.ಲಕ್ಷ್ಮೀ, ಸವಿತಾ ನಟರಾಜ್, ಮಂಗಳ ರಮೇಶ್, ಮಂಗಳಾ, ಅನಸೂಯಮ್ಮ, ರತ್ನಮ್ಮ, ಗೌರಮ್ಮ ಮತ್ತಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಆದರ್ಶ ಕಲಾ ದಂಪತಿಗಳಿಗೆ ಸನ್ಮಾನ, ಜಾನಪದ ಜಾದು ಪ್ರದರ್ಶನ, ಭರತನಾಟ್ಯ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

