
ದೊಡ್ಡಬಳ್ಳಾಪುರ: ನಗರದ ದರ್ಜಿಪೇಟೆಯಲ್ಲಿರುವ ಶ್ರೀ ಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಶ್ರೀ ಸಂತ ನಿಳೋಬ ಮಹಾರಾಜರ 87ನೇ ವರ್ಷದ ದಿಂಡಿ ಸಪ್ತಾಹ ಆಯೋಜಿಸಲಾಗಿದೆ.

ಸಪ್ತಾಹದ ಅಂಗವಾಗಿ ಶ್ರೀ ರುಕ್ಮೀಣಿ ಸತ್ಯಭಾಮ ಸಮೇತ ಶ್ರೀ ಪಾಂಡುರಂಗ ಸ್ವಾಮಿಯವರಿಗೆ ಬೆಳಗ್ಗೆ ಕಾಕಡಾರತಿ ಮತ್ತು ಅಭಿಷೇಕ ನಡೆಯಲಿದೆ.ಮಧ್ಯಾಹ್ನ ಬೆಂಗಳೂರು, ದಾವಣಗೆರೆ, ಭದ್ರಾವತಿ, ಬಂಕಾಪುರ, ಯಲಹಂಕ, ಚಿಕ್ಕಬಳ್ಳಾಪುರ, ಬಂಗಾರಪೇಟೆ, ಜರಗನಹಳ್ಳಿ ಸೇರಿದಂತೆ ವಿವಿಧ ಭಜನಾ ಮಂಡಳಿ ವತಿಯಿಂದ ಸಾಂಪ್ರದಾಯಿಕ ಪಂಡರಿ ಭಜನೆ ಮತ್ತು ಮಹಾಮಂಗಳಾರತಿ ನಡೆಯಲಿದೆ. ಇದೇ ವೇಳೆ ಭಕ್ತರಿಗೆ ಅನ್ನಸಂತರ್ಪಣೆ ಇರಲಿದೆ.
ಸಂಜೆ 7 ಗಂಟೆಗೆ ಹರಿಕಥೆ ಭಕ್ತ ಪಾರಾಯಣ, ಗುಬ್ಬಿ ತುಕಾರಾಂ ಅವರಿಂದ ಕೀರ್ತನೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ ಪಂಢರಿ ಭಜನೆಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ರುಕ್ಮೀಣಿ ಸತ್ಯಭಾಮ ಸಮೇತ ಶ್ರೀ ಪಾಂಡುರಂಗ ಸ್ವಾಮಿಯವರ ಉತ್ಸುವ ಮೂರ್ತಿಯ ಮೆರವಣಿಗೆ ನಡೆಯಲಿದೆ ಎಂದು ಭಾವಸಾರ ಕ್ಷತ್ರಿಯ ಸಮಾಜದ ಪದಾಧಿಕಾರಿಗಳು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

