
ಬೆಂ.ಗ್ರಾ.ಜಿಲ್ಲೆ: ಕಳೆದ ಕೆಲವು ದಿನಗಳಿಂದ ಹರಿತಲೇಖನಿಗೆ ದೊರಕುತ್ತಿದ್ದ ಆತಂಕಕಾರಿ ಮಾಹಿತಿ ನಿಜವಾಗಿದ್ದು, ಮಂಗಳವಾರ ಒಂದೇ ದಿನ ಜಿಲ್ಲೆಯ 38 ಜನರಲ್ಲಿ ಕರೊನಾ ಸೋಂಕು ದೃಢ ಪಡುವ ಮೂಲಕ ಜಿಲ್ಲೆಯ ಜನತೆಗೆ ಎಚ್ಚರಿಕೆ ನೀಡುತ್ತಿದೆ.

ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಂಗಳವಾರದ ಕೋವಿಡ್-19 ವರದಿಯಲ್ಲಿ, ಜಿಲ್ಲೆಯ 38 ಜನರಿಗೆ ಸೋಂಕು ದೃಢಪಡುವ ಮೂಲಕ, ಕರೊನಾ ಎರಡನೇ ಅಲೆಯ ಆತಂಕವನ್ನು ಹೆಚ್ಚಿಸಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ನೆಲಮಂಗಲ ತಾಲೂಕಿನ ವರದಿಯಾಗಿದೆ. ತಾಲೂಕಿನ 9 ಪುರುಷರು ಹಾಗೂ 6 ಮಹಿಳೆಯರು ಸೇರಿದಂತೆ 15 ಜನರಿಗೆ ಸೋಂಕು ದೃಢಪಟ್ಟಿದ್ದರೆ, 8 ಮಂದಿ ಪುರುಷರು ಮತ್ತು 5 ಮಹಿಳೆಯರಿಗೆ ಸೇರಿ13 ಮಂದಿಗೆ ಸೋಂಕು ದೃಢ ಪಟ್ಟು ದೇವನಹಳ್ಳಿ ತಾಲೂಕು ಎರಡನೇ ಸ್ಥಾನದಲ್ಲಿದೆ.
ಉಳಿದಂತೆ ಹೊಸಕೋಟೆ ತಾಲೂಕಿನಲ್ಲಿ ನಾಲ್ವರು ಪುರುಷರು, ಓರ್ವ ಮಹಿಳೆ ಸೇರಿದಂತೆ ಐದು ಮಂದಿ. ದೊಡ್ಡಬಳ್ಳಾಪುರ ತಾಲೂಕಿನ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿ ಐದು ಮಂದಿಗೆ ಸೋಂಕು ದೃಢಪಟ್ಟಿದೆ.
ಪ್ರಸ್ತುತ ಜಿಲ್ಲೆಯಲ್ಲಿ 49ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 144ಕ್ಕೆ ಏರಿಕೆಯಾಗಿದ್ದರೆ, 06 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.ಆರೋಗ್ಯ ಇಲಾಖೆಯಿಂದ ನಿರಂತರವಾಗಿ ತಪಾಸಣೆ ನಡೆಸಲಾಗುತ್ತಿದ್ದು, 581 ಮಂದಿಯ ಫಲಿತಾಂಶ ಬರಬೇಕಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

